/newsfirstlive-kannada/media/media_files/2025/10/12/kohli-2025-10-12-12-36-38.jpg)
ವಿರಾಟ್ ಕೊಹ್ಲಿ ಐಪಿಎಲ್​ನಿಂದಲೂ (Virta Kohli) ನಿವೃತ್ತರಾಗ್ತಿದ್ದಾರೆ ಎಂಬ ಸುದ್ದಿ ಹರಡುತ್ತಿದೆ. ಆರ್​ಸಿಬಿ ಜೊತೆಗೆ ಬ್ರ್ಯಾಂಡ್ ಡೀಲ್ ಮಾಡಿಕೊಳ್ಳಲು ಕೊಹ್ಲಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಆ ಮೂಲಕ ಪರೋಕ್ಷವಾಗಿ ಕೊಹ್ಲಿ ಐಪಿಎಲ್​ನಿಂದ ನಿವೃತ್ತಿ ಹೊಂದುವ ಸುಳಿವು ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಎಂ.ಎಸ್.ಧೋನಿ ಮಾಡಿದಂತೆ ಕೊಹ್ಲಿ, ಐಪಿಎಲ್​ನಲ್ಲಿ ಮುಂದುವರಿಯುವ ಸಾಧ್ಯತೆ ತುಂಬಾನೇ ಕಡಿಮೆ ಇದೆ. ಈಗಾಗಲೇ ಟೆಸ್ಟ್ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. 2027ರ ಏಕದಿನ ವಿಶ್ವಕಪ್​ನಲ್ಲಿ ಕೊಹ್ಲಿ ಆಡ್ತಾರೋ, ಇಲ್ಲವೋ ಅನ್ನೋದು ಪಕ್ಕಾ ಆಗಿಲ್ಲ. ಇದರೊಂದಿಗೆ ಕೊಹ್ಲಿಯ ಅಂತರರಾಷ್ಟ್ರೀಯ ಕ್ರಿಕೆಟ್ ಕರಿಯರ್​​ನಲ್ಲಿ ಅನಿಶ್ಚಿತತೆ ಉಂಟಾಗಿದೆ. ಇದರ ಮಧ್ಯೆ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ದಂತಕಥೆ ಐಪಿಎಲ್​​ಗೂ ಗುಡ್​​ಬೈ ಹೇಳುವ ಸಾಧ್ಯತೆ ದಟ್ಟವಾಗಿದೆ.
ಕೊಹ್ಲಿ ಭಾರತದ ಅತಿದೊಡ್ಡ ಕ್ರಿಕೆಟ್ ಐಕಾನ್. ರಾಯಲ್ ಚಾಲೆಂಜರ್ಸ್​ಗೂ ಅಷ್ಟೇ. ಆಟದಲ್ಲಿನ ಅವರ ಸ್ಥಿರತೆ, ಪ್ರದರ್ಶನ, ಫಿಟ್ನೆಸ್​ ಎಲ್ಲವೂ ಕೂಡ ಬ್ರ್ಯಾಂಡ್ ಆಗಿದೆ. ಆ ಮೂಲಕ ಆರ್​ಸಿಬಿಗೆ ಲಾಭದಾಯಕ ಬ್ರಾಂಡ್ ಡೀಲ್​​ಗಳನ್ನು ಕುದರಿಸುವಲ್ಲಿ ಯಶಸ್ವಿಯಾಗುತ್ತಾರೆ. ಆದರೆ ಕೆಲವು ವರದಿಗಳ ಪ್ರಕಾರ, ಕೊಹ್ಲಿ ನಿರ್ದಿಷ್ಟ ಬ್ರಾಂಡ್‌ನೊಂದಿಗೆ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಆರ್​ಸಿಬಿ ಕೊಹ್ಲಿಗೆ ಪರ್ಯಾಯ ಮುಖ ಹುಡುಕುತ್ತಿದೆ. ಇದು ಕೊಹ್ಲಿ ಐಪಿಎಲ್​​ನಿಂದ ಹಿಂದೆ ಸರಿಯುತ್ತಿರುವ ಸೂಚನೆ ಎಂದು ಅರ್ಥೈಸಲಾಗುತ್ತಿದೆ.
ಇದನ್ನೂ ಓದಿ: ಫಾಲೋ ಆನ್ ಭೀತಿಯಲ್ಲಿ ವಿಂಡೀಸ್​.. ಗೆಲುವಿನತ್ತ ಟೀಂ ಇಂಡಿಯಾ..!
ಐಪಿಎಲ್ 2025ಕ್ಕೂ ಮೊದಲು ಆರ್‌ಸಿಬಿ ಹೊಸ ನಾಯಕನ ಪರಿಚಯ ಮಾಡಿದೆ. ರಜತ್ ಪಾಟಿದಾರ್ ಹೆಸರನ್ನು ಕೊಹ್ಲಿ ಪ್ರಸ್ತಾಪಿಸಿದ್ದರು. ಫಾಫ್ ಡು ಪ್ಲೆಸಿಸಿಯನ್ನು ಬಿಡುಗಡೆ ನಂತರ ಆರ್​ಸಿಬಿ ನಾಯಕತ್ವಕ್ಕಾಗಿ ಕೊಹ್ಲಿಯನ್ನು ಸಂಪರ್ಕಿಸಿತ್ತು. ಆ ವೇಳೆ ಕೊಹ್ಲಿ ನಾಯಕತ್ವ ಪಡೆಯಲು ನಿರಾಕರಿಸಿದ್ದರು. ಕೊಹ್ಲಿ ಶಿಫಾರಸಿನ ಮೇರೆಗೆ ಫ್ರಾಂಚೈಸಿ ಪಾಟೀದರ್​ ಅವರನ್ನು ನಾಯಕನನ್ನಾಗಿ ಮಾಡಿತು. ಪಾಟೀದಾರ್ 18 ವರ್ಷಗಳಲ್ಲಿ ಸಾಧಿಸಿದ್ದನ್ನು ಮಾಡಿ ತೋರಿಸಿದರು.
18 ವರ್ಷಗಳ ವೃತ್ತಿಜೀವನದಲ್ಲಿ, ಕೊಹ್ಲಿ ಆರ್‌ಸಿಬಿಯ ಬೆನ್ನೆಲುಬಾಗಿದ್ದಾರೆ. 267 ಪಂದ್ಯಗಳಲ್ಲಿ 8661 ರನ್‌ಗಳನ್ನು ಗಳಿಸಿದ್ದಾರೆ. 143 ಪಂದ್ಯಗಳಲ್ಲಿ ಆರ್‌ಸಿಬಿಯನ್ನು ಮುನ್ನಡೆಸಿದ್ದಾರೆ.
ಇದನ್ನೂ ಓದಿ: ನಿವೃತ್ತಿಯ ಹಿಂಟ್ ಕೊಟ್ಟ ಹಿಟ್​ಮ್ಯಾನ್.. ಅಭಿಮಾನಿಗಳ ಪ್ರೀತಿಗೆ ರೋಹಿತ್ ಭಾವುಕ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ