ಬಿಗ್​ ಸರ್ಪ್ರೈಸ್ ಕೊಟ್ಟ ಕಿಂಗ್ ಕೊಹ್ಲಿ.. ಈಗಲೂ ಇವರೇ ಟಾಪರ್​​..!

ಕಳೆದ ವಾರ ಫಿಟ್​ನೆಸ್​ ಟೆಸ್ಟ್​ಗೆ ಒಳಗಾದ ಟೀಮ್​ ಇಂಡಿಯಾದ ಸೂಪರ್​ ಸ್ಟಾರ್​​ಗಳ ರಿಪೋರ್ಟ್​​​ ಹೊರಬಿದ್ದಿದೆ. ಆಟಗಾರರೆಲ್ಲಾ ಟೆಸ್ಟ್​ನ ಫಸ್ಟ್​ ಕ್ಲಾಸ್​​ನಲ್ಲಿ ಪಾಸ್​ ಮಾಡಿದ್ದಾರೆ. ಬೆಂಗಳೂರಿಗೆ ಬಂದು ಟೆಸ್ಟ್​ ಕೊಟ್ಟವರ ಕತೆ ಬಿಡಿ.

author-image
Ganesh Kerekuli
Virat kohli (10)
Advertisment

ಕಳೆದ ವಾರ ಫಿಟ್​ನೆಸ್​ ಟೆಸ್ಟ್​ಗೆ ಒಳಗಾದ ಟೀಮ್​ ಇಂಡಿಯಾದ ಸೂಪರ್​ ಸ್ಟಾರ್​​ಗಳ ರಿಪೋರ್ಟ್​​​ ಹೊರಬಿದ್ದಿದೆ. ಆಟಗಾರರೆಲ್ಲಾ ಟೆಸ್ಟ್​ನ ಫಸ್ಟ್​ ಕ್ಲಾಸ್​​ನಲ್ಲಿ ಪಾಸ್​ ಮಾಡಿದ್ದಾರೆ. ಬೆಂಗಳೂರಿಗೆ ಬಂದು ಟೆಸ್ಟ್​ ಕೊಟ್ಟವರ ಕತೆ ಬಿಡಿ. ಲಂಡನ್​ನಲ್ಲೇ ಟೆಸ್ಟ್​ಗೆ ಒಳಗಾದ ವಿರಾಟ್​​ ಕೊಹ್ಲಿ ಎಲ್ಲರಿಗೂ ಸರ್​ಪ್ರೈಸ್​​​ ಕೊಟ್ಟಿದ್ದಾರೆ. 

ಕಳೆದೊಂದು ವಾರದಿಂದ ಇಂಡಿಯನ್​ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಚರ್ಚೆಯಾಗಿದ್ದು ಫಿಟ್​ನೆಸ್​ ಟೆಸ್ಟ್​.! ರೋಹಿತ್​ ಶರ್ಮಾ, ಶುಭ್​ಮನ್​ ಗಿಲ್​, ಮೊಹಮ್ಮದ್​ ಸಿರಾಜ್​​, ಜಸ್​​ಪ್ರಿತ್​​ ಬೂಮ್ರಾ.. ಟೀಮ್​ ಇಂಡಿಯಾದ ಈ ಸ್ಟಾರ್​ಗಳೆಲ್ಲಾ ಬೆಂಗಳೂರಿಗೆ ಬಂದಿ ಬಿಸಿಸಿಐ ಸೆಂಟರ್​​ ಆಫ್​ ಎಕ್ಸಲೆನ್ಸ್​ನಲ್ಲಿ ಫಿಟ್​ನೆಸ್​ ಟೆಸ್ಟ್​ಗೆ ಒಳಗಾಗಿದ್ರು. ಐಪಿಎಲ್​ ಬಳಿಕ ಲಂಡನ್​ನಲ್ಲೇ ಬೀಡು ಬಿಟ್ಟಿರುವ ವಿರಾಟ್​ ಕೊಹ್ಲಿ, ಅಲ್ಲೇ ಫಿಟ್​​ನೆಸ್​​ ಟೆಸ್ಟ್​ಗೆ ಒಳಗಾಗಿದ್ರು. ಆ ಟೆಸ್ಟ್​​ನ ರಿಸಲ್ಟ್​ ಹೊರಬಿದ್ದಿದೆ. ಒನ್ಸ್​ ಅಗೇನ್​ ವಿರಾಟ್​ ಕೊಹ್ಲಿ ಎಲ್ಲರಿಗೂ ಸರ್​ಪ್ರೈಸ್​ ಕೊಟ್ಟಿದ್ದಾರೆ.  

ಫಿಟ್​ನೆಸ್​ನಲ್ಲೂ ಕೊಹ್ಲಿ ಕಿಂಗ್​!

ಆಟದ ವಿಚಾರದಲ್ಲಿ ಮಾತ್ರವಲ್ಲ.. ಫಿಟ್​ನೆಸ್​​ ವಿಚಾರದಲ್ಲೂ ವಿರಾಟ್​ ಕೊಹ್ಲಿಯೇ ಕಿಂಗ್​. ಈ ಮಾತು ಮತ್ತೊಮ್ಮೆ ಸಾಬೀತಾಗಿದೆ. ಮೊನ್ನೆ ನಡೆದ ಯೋ ಯೋ ಟೆಸ್ಟ್​​ನಲ್ಲಿ ಕೊಹ್ಲಿ ಟಾಪರ್​ ಆಗಿ ಹೊರಹೊಮ್ಮಿದ್ದಾರೆ. ಫಿಟ್​ನೆಸ್​ ಪರೀಕ್ಷೆಗೆ ಒಳಗಾದ ಆಟಗಾರರ ಪೈಕಿ ಕೊಹ್ಲಿಯ ಸ್ಕೋರ್​ ಸನಿಹಕ್ಕೂ ಯಾರೂ ಸುಳಿದಿಲ್ಲ. ಬಿಸಿಸಿಐ ಮೇಲ್ವಿಚಾರರಣೆಯಲ್ಲಿ ಲಂಡನ್​ನಲ್ಲಿ ನಡೆದ ಯೋಯೋ ಟೆಸ್ಟ್​ನಲ್ಲಿ ವಿರಾಟ್​ ಕೊಹ್ಲಿ ಗಳಿಸಿರೋ ಸ್ಕೋರ್​ ಎಷ್ಟು ಗೊತ್ತಾ? 18.7!

ಕೊಹ್ಲಿಯನ್ನೇ ಫಾಲೋ ಮಾಡ್ತಿದ್ದಾರೆ ಪ್ರಿನ್ಸ್​

ವಿರಾಟ್​​ ಕೊಹ್ಲಿಯ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿರೋ ಶುಭ್​​ಮನ್​ ಗಿಲ್​ ಆಟದಂತೆ ಫಿಟ್​ನೆಸ್​​ ವಿಚಾರದಲ್ಲೂ ಕೊಹ್ಲಿಯನ್ನೇ ಫಾಲೋ ಮಾಡ್ತಿದ್ದಾರೆ. ಕಳೆದ ವಾರ ಫಿಟ್​​ನೆಸ್​ ಟೆಸ್ಟ್​ಗೆ ಒಳಗಾದವರ ಪೈಕಿ ಸೆಕೆಂಡ್​ ಹೈಯೆಸ್ಟ್​​ ಸ್ಕೋರ್​ ಮಾಡಿರೋದೆ ಶುಭ್​ಮನ್​ ಗಿಲ್​. ಕಿಂಗ್​ ಕೊಹ್ಲಿಯ ಸ್ಕೋರ್​ 18.7 ಆದ್ರೆ, ಯುವರಾಜ ಶುಭ್​ಮನ್​ ಗಿಲ್​ ಸ್ಕೋರ್​ 18

ಇದನ್ನೂ ಓದಿ:ಟೀಮ್ ಇಂಡಿಯಾದ ಹೊಸ ಜೆರ್ಸಿ ನೋಡಿದ್ದೀರಾ? ಅದು ಹೇಗಿದೆ? Photo

ಬೂಮ್ರಾ ಸೂಪರ್​ ಫಿಟ್​

ಕಳೆದ 2 ತಿಂಗಳಲ್ಲಿ  ಯಾರ್ಕರ್​ ಸ್ಪೆಷಲಿಸ್ಟ್​​ ಜಸ್​​​ಪ್ರಿತ್​ ಬೂಮ್ರಾ ಫಿಟ್​​ನೆಸ್​ ಅತಿ ಹೆಚ್ಚು ಚರ್ಚೆಯಾಗಿದೆ. ಬ್ಯಾಕ್​ ಸರ್ಜರಿಗೆ ಒಳಗಾಗಿ ಬಂದ ಮೇಲೆ ಮತ್ತೆ ಮತ್ತೆ ಇಂಜುರಿ ಸಮಸ್ಯೆ ಎದುರಾಗಿದ್ದು, ಪದೇ ಪದೇ ವಿಶ್ರಾಂತಿ ಪಡೆಯೋದ್ರಿಂದ ಟೀಕೆಗಳು ಎದುರಾಗಿವೆ. ಇದರಾಚೆಗೆ ಮೊನ್ನೆ ನಡೆದ ಯೋ ಯೋ ಟೆಸ್ಟ್​ ಜಸ್​ಪ್ರಿತ್​ ಬೂಮ್ರಾ ಸೂಪರ್​ ಫಿಟ್​​ ಅನ್ನೋ ರಿಸಲ್ಟ್​ ಕೊಟ್ಟಿದೆ. ಟೆಸ್ಟ್​ನಲ್ಲಿ ಬೂಮ್ರಾ 17.8 ಸ್ಕೋರ್​ ಕಲೆ  ಹಾಕಿದ್ದಾರೆ. 

ಸಿರಾಜ್​ ಫಿಟ್ ಅಂಡ್ ಫೈನ್

ವೇಗಿ ಮೊಹಮ್ಮದ್​ ಸಿರಾಜ್​ ಟೀಮ್​ ಇಂಡಿಯಾದ ದಣಿವರಿಯದ ಸಾಧಕ. ಕಳೆದೊಂದು ವರ್ಷದಲ್ಲಿ ಟೀಮ್​ ಇಂಡಿಯಾ ಪರ ಅತಿ ಹೆಚ್ಚು ಬೌಲಿಂಗ್​ ಮಾಡಿರೋ ವೇಗಿ ಯಾರು ಅಂದ್ರೆ ಅದಕ್ಕೆ ಉತ್ತರ ಮೊಹಮ್ಮದ್​ ಸಿರಾಜ್​. ಸತತವಾಗಿ ಬೌಲಿಂಗ್​ ಮಾಡಿದ್ದ ಸಿರಾಜ್​ ಇಂಗ್ಲೆಂಡ್​ ಪ್ರವಾಸದ ಬಳಿಕ ಒಂದು ತಿಂಗಳು ಫುಲ್​ ವಿಶ್ರಾಂತಿ ಪಡೆದು ಫಿಟ್​ನೆಸ್​ ಟೆಸ್ಟ್​​ಗೆ ಒಳಗಾಗಿದ್ರು. 17.6 ಸ್ಕೋರ್​ನೊಂದಿಗೆ ಸಿರಾಜ್​ ಟೆಸ್ಟ್​ನ ಪಾಸ್​ ಮಾಡಿದ್ದಾರೆ. 

ಫಸ್ಟ್​ ಕ್ಲಾಸ್​​ನಲ್ಲಿ ಟೆಸ್ಟ್​ ಪಾಸಾದ ಹಿಟ್​ಮ್ಯಾನ್​​​

ಫಿಟ್​ನೆಸ್​​ ಕಾರಣ ನೀಡಿ ತನ್ನನ್ನ ಎಕದಿನ ಟೀಮ್​ನಿಂದ ಸೈಡ್​ಲೈನ್​ ಮಾಡೋ ಯತ್ನದಲ್ಲಿದ್ದ ಬಿಸಿಸಿಐ ಬಾಸ್​ಗಳಿಗೆ ಸವಾಲ್​ ಎಸೆದಿದ್ದ ರೋಹಿತ್​ ಶರ್ಮಾ ಫಸ್ಟ್​ಕ್ಲಾಸ್​ನಲ್ಲಿ ಟೆಸ್ಟ್​ ಪಾಸ್​ ಆಗಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 20 ಕೆಜಿ ತೂಕ ಇಳಿಸಿಕೊಂಡಿದ್ದಕ್ಕೆ ಫಲ ಸಿಕ್ಕಿದೆ. ಮೊನ್ನೆ ನಡೆದ ಫಿಟ್​ನೆಸ್​ ಟೆಸ್ಟ್​ನ ಹಿಟ್​ಮ್ಯಾನ್​ ರೋಹಿತ್​ 17.2 ಸ್ಕೋರ್​ನೊಂದಿಗೆ ಪಾಸ್​ ಮಾಡಿದ್ದಾರೆ. ಇದ್ರೊಂದಿಗೆ ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡೋಕೆ ಲೈನ್​ ಕ್ಲೀಯರ್​ ಮಾಡಿಕೊಂಡಿದ್ದಾರೆ.  

ಇದನ್ನೂ ಓದಿ:500 ಕೋಟಿ ಟಾರ್ಗೆಟ್​.. ಬಿಸಿಸಿಐ ಹೊಸ ಪ್ಲಾನ್ ಏನು ಗೊತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rohit Sharma-Virat Kohli Virat Kohli Virat Kohli beard
Advertisment