/newsfirstlive-kannada/media/media_files/2025/08/17/yash-dayal-3-2025-08-17-12-15-17.jpg)
ಇಂದಿನಿಂದ ಉತ್ತರ ಪ್ರದೇಶ ಟಿ20 ಲೀಗ್ (UP T-20 League) ಆರಂಭವಾಗುತ್ತಿದೆ. ಮೊದಲ ಪಂದ್ಯ ಮೀರತ್ ಮಾವರಿಕ್ಸ್ ಮತ್ತು ಕಾನ್ಪುರ್ ಸೂಪರ್‌ಸ್ಟಾರ್ಸ್ ನಡುವೆ ನಡೆಯಲಿದೆ. ಟೂರ್ನಿ ಆರಂಭವಾಗುವ ಮುನ್ನವೇ ಆರ್ಸಿಬಿ ಸ್ಟಾರ್ ಯಶ್ ದಯಾಳ್ಗೆ (RCB star Yash Dayal) ದೊಡ್ಡ ಆಘಾತವಾಗಿದ್ದು, ಟೂರ್ನಿಯಲ್ಲಿ ಆಡದಂತೆ ನಿಷೇಧ ಹೇರಲಾಗಿದೆ.
ಇದನ್ನೂ ಓದಿ:ಈ ಬಾರಿಯ ಬಿಗ್ಬಾಸ್ಗೆ ಅನಯಾ ಬಂಗಾರ್ ಎಂಟ್ರಿ..?
ವರದಿಗಳ ಪ್ರಕಾರ.. ಅವರು ಇನ್ಮುಂದೆ ಈ ಲೀಗ್‌ನಲ್ಲಿ ಭಾಗವಹಿಸಲು ಸಾಧ್ಯವಾಗಲ್ಲ. ಗೋರಖ್‌ಪುರ ಲಯನ್ಸ್ ತಂಡವು ಹರಾಜಿನಲ್ಲಿ ಯಶ್ ಅವರನ್ನು 7 ಲಕ್ಷ ರೂಪಾಯಿಗೆ ಖರೀದಿಸಿದೆ. ಕಳೆದ 2 ವರ್ಷಗಳಲ್ಲಿ ಯಶ್ ದಯಾಳ್ಗೆ ತುಂಬಾನೇ ಬೇಡಿಕೆ ಇತ್ತು. ಐಪಿಎಲ್ 2025 ನಂತರ ಯಶ್ ದಯಾಳ್ ಕೆಟ್ಟ ದಿನಗಳನ್ನ ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣ ಕ್ರಿಕೆಟ್ ಅಲ್ಲ. ಅವರ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪಗಳು. ಗಾಜಿಯಾಬಾದ್‌ನ ಹುಡುಗಿಯೊಬ್ಬಳು ಅವರ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಜೈಪುರದಲ್ಲಿ ಮತ್ತೊಬ್ಬ ಹುಡುಗಿ ಗಂಭೀರ ಆರೋಪ ಮಾಡಿದ್ದಾಳೆ.
ಉತ್ತರ ಪ್ರದೇಶ ಟಿ20 ಲೀಗ್‌ನಿಂದ ಬ್ಯಾನ್
ಉತ್ತರ ಪ್ರದೇಶ ಟಿ20 ಲೀಗ್ ಅವರನ್ನು ಆಡದಂತೆ ನಿಷೇಧಿಸಿದೆ. ದಯಾಳ್ ನಿಷೇಧದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ, ಅವರು ಉತ್ತರ ಪ್ರದೇಶ ಟಿ20 ಲೀಗ್‌ನಿಂದ ಹೊರಬಿದ್ದಿರೋದು ಪಕ್ಕಾ ಎಂದು ವರದಿಗಳು ಹೇಳಿವೆ. ಆ ಮೂಲಕ ಯಶ್ ದಯಾಳ್ ಕ್ರಿಕೆಟ್ ವೃತ್ತಿಜೀವನ ಅಪಾಯದಲ್ಲಿದೆ ಅನ್ನೋದು ಸ್ಪಷ್ಟವಾಗಿದೆ.
ಇದನ್ನೂ ಓದಿ: ಏಷ್ಯಾ ಕಪ್ 2025; ಸೂರ್ಯ ಸೇರಿ ಈ ಬಿಗ್ ಹಿಟ್ಟರ್, ಬಲಿಷ್ಠ ಆಲ್ರೌಂಡರ್ ಆಡೋದು ಪಕ್ಕಾ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ