newsfirstkannada.com

SSLCಯಲ್ಲಿ ರಾಜ್ಯಕ್ಕೆ ಪ್ರಥಮ ಬಂದ ಅಂಕಿತಾ ಬಸಪ್ಪಗೆ ನ್ಯೂಸ್​ಫಸ್ಟ್​ ವತಿಯಿಂದ ಕಿರುಕಾಣಿಕೆ

Share :

Published May 14, 2024 at 10:13pm

    ಸರ್ಕಾರಿ ಶಾಲೆಯಲ್ಲಿ ಓದಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ​ ಅಂಕಿತಾ ಬಸಪ್ಪ

    ಐಎಎಸ್ ಕಸನು ಕಂಡಿರುವ SSLC ಟಾಪರ್​ ಅಂಕಿತಾ ಬಸಪ್ಪ ಕೊನ್ನೂರ್

    ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕನಸಿಗೆ ಸಾಥ್​ ನೀಡಿದ​ ಗರುಡಾ ಫೌಂಡೇಷನ್

ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ SSLC ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾಳೆ. ಸರ್ಕಾರಿ ಶಾಲೆ ಎಂದು ಮೂಗು ಮುರಿಯುವವರಿಗೆ ಅಂಕಿತಾ ತನ್ನ ಸಾಧನೆ ಮೂಲಕ ಉತ್ತರಿಸಿದ್ದಾಳೆ. 625ಕ್ಕೆ 625 ಅಂಕ ಗಳಿಸಿದ ರಾಜ್ಯದ ಏಕೈಕ ವಿದ್ಯಾರ್ಥಿನಿ ಸಾಧನೆಯನ್ನ ಮೆಚ್ಚಿ ನ್ಯೂಸ್​ಫಸ್ಟ್​ ಆಕೆಯನ್ನ ಸನ್ಮಾನಿಸಿದೆ. ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳ ಜೀವನದಲ್ಲಿ ಅತಿ ಮುಖ್ಯವಾದ ಘಟ್ಟ ಇದು. ಎಸ್​ಎಸ್​ಎಲ್​ಸಿಯಲ್ಲಿ ಬರುವಂತ ಅಂಕಗಳ ಮೇಲೆ ನಮ್ಮ ಮುಂದಿನ ವಿದ್ಯಾಭ್ಯಾಸವನ್ನು ನಿರ್ಧಾರ ಮಾಡ್ತೇವೆ.

ಇದನ್ನೂ ಓದಿ: ಪಶು ವೈದ್ಯರು ಕೊಟ್ಟ ಗುದ್ದಿಗೆ ಜ್ವರದಿಂದ ಬಳಲ್ತಿದ್ದ ವ್ಯಕ್ತಿ ಸಾವು ಆರೋಪ.. ಸಾವು ತಂದ ಆತ್ಮೀಯತೆ..!

ಅಂಥ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ 625 ಅಂಕಕ್ಕೆ 625 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾ ಬಸಪ್ಪ ಕೊನ್ನೂರ್​ಗೆ ನ್ಯೂಸ್​ಫಸ್ಟ್​ ಅಭಿನಂದನೆ ಸಲ್ಲಿಸಿದೆ. ಸರ್ಕಾರಿ ಶಾಲೆ ಅಂದ್ರೆ ಸಾಕು ಮುಗು ಮುರಿಯುವವರೇ ಹೆಚ್ಚು. ಅಲ್ಲಿ ಸರಿಯಾದ ಸೌಲಭ್ಯಗಳು ಇರಲ್ಲ. ಉತ್ತಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲ್ಲ ಎಂದು ಹಲವು ಪೋಷಕರು ಸಾಲಸೋಲ ಮಾಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಿ ಬಳಿಕ ವ್ಯಥೆ ಪಡುತ್ತಾರೆ. ಅಂಥ ಪೋಷಕರಿಗೆಲ್ಲ ಅಂಕಿತಾ ಬಸಪ್ಪ ಕೊನ್ನೂರ್​ ಸಾಧನೆಯೇ ಉತ್ತರವಾಗಿದೆ.

ಇದನ್ನೂ ಓದಿ: ಬಳ್ಳಾರಿಯ ವೀರಯೋಧ ಕೋಲ್ಕತ್ತಾದಲ್ಲಿ ನಿಗೂಢ ಸಾವು; ಹುಟ್ಟೂರಲ್ಲಿ ನೋವಿನ ವಿದಾಯ

ಬಾಗಲಕೋಟೆಯ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ, ಎಸ್​ಎಸ್​ಎಲ್​ಸಿ ಪರೀಕ್ಷೆ-1ರಲ್ಲಿ 625ಕ್ಕೆ 626 ಅಂಕಗಳನ್ನು ಗಳಿಸಿ ಮೂಲಕ ರಾಜ್ಯದಲ್ಲೇ ಫಸ್ಟ್​ ಱಂಕ್​ ಪಡೆದ ಏಕೈಕ ವಿದ್ಯಾರ್ಥಿಯಾಗಿ ಎಲ್ಲರೂ ಹೆಮ್ಮೆ ತಂದಿದ್ದಾರೆ. ಅಂಕಿತಾಳ ಈ ಅಮೋಘ ಸಾಧನೆಯನ್ನು ಗುರುತಿಸಿದ ನ್ಯೂಸ್​ಫಸ್ಟ್, ತಮ್ಮ ಸುದ್ದಿವಾಹಿನಿ ಕಚೇರಿಗೆ​ ಅಂಕಿತಾಳನ್ನು ಕರೆಸಿ ಸನ್ಮಾನ ಮಾಡಿ ಗೌರವಿಸಿದೆ. ನ್ಯೂಸ್‌ಫಸ್ಟ್‌ ಎಂಡಿ ಹಾಗೂ ಸಿಇಓ ರವಿ ಕುಮಾರ್‌ ಅವರು ಅಂಕಿತಾಗೆ ಶಾಲು ಹೊದಿಸಿ ಪೇಟ ತೊಡಿಸಿ ಕಿರುಕಾಣಿಕೆ ನೀಡುವ ಮೂಲಕ ಸನ್ಮಾನಿಸಿದ್ರು.

625ಕ್ಕೆ 625 ಅಂಕವನ್ನು ಅಂಕಿತಾ ಬಸಪ್ಪ ತೆಗೆದುಕೊಂಡಿದ್ದಾರೆ ಅಂದ್ರೆ ಅದು ಹೆಮ್ಮೆಯ ವಿಚಾರ. 625ಕ್ಕೆ 625 ತೆಗೆದುಕೊಳ್ಳುವುದು ಎಂದರೆ ಇದು ಸುಲಭವಲ್ಲ. ಅಂಕಿತಾ ತಂದೆ ಬಸಪ್ಪ ಅವರ ಬಳಿ ಮಾತಾಡಿದೆ. ನೀವು ಏನು ಓದಿದ್ದೀರಾ ಅಂತ ಕೇಳಿದೆ. ಆದರೆ ಅವರು ಹೇಳಿದ್ರು, ನಾನು ಏನು ಓದಿಲ್ಲ ಸರ್​​. 4 ಎಕರೆ ಜಮೀನು ಇದೆ. ನಾವು ವ್ಯವಸಾಯ ಮಾಡುತ್ತಿದ್ದೇವೆ ಅಂತ ಹೇಳಿದ್ದರು. ನಾವು ಓದಿಲ್ಲ ಸರ್​, ನಮ್ಮ ಮಗಳಾದರೂ ಚೆನ್ನಾಗಿ ಓದಲಿ ಅಂತ ಅಂದ್ರು. ಇದನ್ನು ಕೇಳಿ ತುಂಬಾ ಖುಷಿ ಆಯ್ತು.  

ಎಸ್​.ರವಿ ಕುಮಾರ್‌, ಎಂಡಿ & ಸಿಇಓ, ನ್ಯೂಸ್​ಫಸ್ಟ್​

ಐಎಎಸ್ ಕಸನು ಕಂಡಿರುವ ಅಂಕಿತಾ ಬಸಪ್ಪ ಕೊನ್ನೂರ್​

ನ್ಯೂಸ್​ಫಸ್ಟ್​ನ ಗೌರವ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿನಿ ಅಂಕಿತಾ, ತುಂಬಾ ಖುಷಿ ಆಗುತ್ತಿದೆ. ಪದಗಳಲ್ಲಿ ಇದನ್ನು ಹೇಳಲು ಆಗುತ್ತಿಲ್ಲ. ನನಗೆ ನಂಬಿಕೆ ಇರಲಿಲ್ಲ. ಆದರೆ ನನ್ನ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಗೊತ್ತಿತ್ತು. ನಾನು 3ರಿಂದ 4 ಗಂಟೆ ಅಷ್ಟೇ ಓದಿದ್ದು, ಮುಂಜಾನೆ 5 ಗಂಟೆಗೆ ಎದ್ದು ಓದುತ್ತಿದ್ದೆ. ಮುಂದೆ ಯುಪಿಎಸ್​ಸಿ ಬರೆದು ಐಎಎಸ್​ ಅಧಿಕಾರಿಯಾಗುವ ದೊಡ್ಡ ಕನಸನ್ನು ನನಗಿದೆ.

ಅಂಕಿತಾ ಬಸಪ್ಪ ಕೊನ್ನೂರ್​, ಎಸ್​ಎಸ್​ಎಲ್​ಸಿ ಟಾಪರ್​

ಮಗಳ ಮೂಲಕ ತಮ್ಮ ಆಸೆ ಈಡೇರಿಸಿಕೊಂಡ ತಾಯಿ

ಇನ್ನು, ವಿದ್ಯಾರ್ಥಿನಿ ಅಂಕಿತಾ ಪೋಷಕರ ಮಾತುಗಳನ್ನು ಕೇಳಿದ್ರೆ ನಿಜಕ್ಕೂ ಕಣ್ಣಲ್ಲಿ ನೀರು ಜಿನುಗುತ್ತೆ. ಅಂಕಿತಾ ತಂದೆ ರೈತರಾಗಿದ್ದು, ನಾನಂತು ಓದಿಲ್ಲ, ಮಗಳಾದ್ರೂ ಚೆನ್ನಾಗಿ ಓದಿ ದೊಡ್ಡ ಅಧಿಕಾರಿಯಾಗಲಿ ಎಂದು ಆಸೆ ವ್ಯಕ್ತಪಡಿಸಿದ್ದಾರೆ. ಇನ್ನು, ಅಂಕಿತಾ ತಾಯಿ ಕೂಡ ಎಸ್​ಎಸ್​ಎಲ್​ಸಿಯಲ್ಲಿ ಉತ್ತಮ ಅಂಕ ಪಡೆದು ಪತ್ರಿಕೆಗಳಲ್ಲಿ ಹೆಸರು ಬಂದಿದ್ದಂತೆ. ಈ ತಮ್ಮ ಮಗಳು ರಾಜ್ಯಕ್ಕೆ ಫಸ್ಟ್​ ಱಂಕ್​ ಬಂದಿದ್ದು, ಮಗಳ ಮೂಲಕ ತಮ್ಮ ಕನಸು ನನಾಗಿದೆ ಎಂದಿದ್ದಾರೆ.

ನಾನು ಓದಬೇಕು ಅಂತ ಕನಸ್ಸು ಇತ್ತು. ಆದರೆ, ಫಸ್ಟ್ ಪಿಯುಸಿ ಮುಗಿದ ಬಳಿಕ ಮದುವೆ ಆಯ್ತು. ನಂದು 10ನೇ ತರಗತಿಯಲ್ಲಿ ಕೇಂದ್ರಕ್ಕೆ ಮೊದಲು ಬಂದಿದ್ದೆ. ಅದು ನ್ಯೂಸ್​​ ಪೇಪರ್​ನಲ್ಲಿ ಬಂದಿತ್ತು. ಈಗ ನನ್ನ ಮಗಳ ಸುದ್ದಿ ಎಲ್ಲ ಮಾಧ್ಯಮಗಳಲ್ಲಿ ಬಂತು. ಎಲ್ಲರೂ ನನ್ನ ಮಗಳನ್ನು ಅವರ ಮನೆ ಮಗಳಾಗಿ ನೋಡುತ್ತಿದ್ದಾರೆ. ಇದೇ ರೀತಿಯ ಹಾರೈಕೆ ನನ್ನ ಮಗಳ ಮೇಲೆ ಸದಾ ಇರಲಿ.

ಗೀತಾ, ಅಂಕಿತಾ ತಾಯಿ

ಎಸ್​ಎಸ್​ಎಲ್​ಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ಅಂಕಿತಾ ಮುಂದೆ, ಐಎಎಸ್​ ಮಾಡುವ ಕಸನು ಹೊಂದಿದ್ದಾರೆ. ಇವರ ಕನಸಿಗೆ ಸಹಕಾರವಾಗಲಿ ಎಂದು ಗರುಡಾ ಫೌಂಡೇಷನ್​ 50 ಸಾವಿರ ಆರ್ಥಿಕ ನೆರವು ನೀಡಿ, ವಿದ್ಯಾರ್ಥಿನಿಗೆ ಹಾಲ್​ದ ಬೆಸ್ಟ್​ ಹೇಳಿದ್ದಾರೆ.

ಅಂಕಿತಾ ಬಸಪ್ಪ ಕೇವಲ ಬಾಗಲಕೋಟೆ ಹೆಮ್ಮೆಯ ಮಗಳಲ್ಲ. ಇಡೀ ಕರ್ನಾಟಕದ ಹೆಮ್ಮೆಯ ಮಗಳು. ಏಕೆಂದರೆ ಒಂದು ಸರ್ಕಾರಿ ಶಾಲೆಯಲ್ಲಿ ಓದೋದು ಅಂದ್ರೆನೇ ಬಹಳಷ್ಟು ಜನ ಮೂಗನ್ನು ಮುರಿಯುತ್ತಾರೆ. ಅದೇ ಸರ್ಕಾರಿ ಶಾಲೆಯಲ್ಲಿ ಓದಿ ನಮ್ಮ ಅಂಕಿತಾ 625ಕ್ಕೆ 625 ಪಡೆದುಕೊಂಡಿದ್ದಾಳೆ. ನಿಜವಾಗಲೂ ಹೆಮ್ಮೆ ಮತ್ತು ಸಂತೋಷ ಆಗುತ್ತೆ. ಅಂಕಿತಾ ನಮ್ಮ ಭಾಗದ ಹೆಣ್ಣು ಮಗಳು. ನಾನು ಕೂಡ ಧಾರವಾಡ ಜಿಲ್ಲೆಯ ಶಿಗ್ಗಾಂವ್​ ಸರ್ಕಾರಿ ಶಾಲೆಯಲ್ಲಿ ಓದಿದ್ದೇನೆ. ಎಂಎಸ್​ಸಿ ಫಿಸಿಕ್ಸ್​ ಕೂಡ ಮಾಡಿದ್ದೇನೆ. ಹಾಗಾಗಿ ಸರ್ಕಾರಿ ಶಾಲೆಯಲ್ಲಿ ಓದುವುದು ತಪ್ಪಲ. ಎಲ್ಲರೂ ಅಂಕಿತಾಳನ್ನು ಉದಾಹರಣೆಯಾಗಿ ಇಟ್ಟುಕೊಂಡು ಯಾರು ಬೇಕಾದರೂ ಸಾಧನೆ ಮಾಡಬಹುದು.

ಮೇಧಿನಿ ಉದಯ್​ ಗರುಡಾಚಾರ್​, ಗರುಡಾ ಫೌಂಡೇಷನ್​ ಸಂಸ್ಥಾಪಕರು

ಒಟ್ಟಾರೆಯಾಗಿ ಸರ್ಕಾರಿ ಶಾಲೆಯ ಆಗಲಿ. ಖಾಸಗಿ ಶಾಲೆಯೇ ಸಾಗಲಿ, ಸಾಧನೆ ಮಾಡುವ ಮನಸ್ಸು ಛಲ ಎರಡೂ ಇರಬೇಕು. ಐಎಎಸ್​ ಆಗುವ ಆಸೆ ಹೊಂದಿರುವ ಅಂಕಿತಾ ಕನಸು ನನಸಾಗಲಿ ಎಂದು ಹಾರೈಸೋಣ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SSLCಯಲ್ಲಿ ರಾಜ್ಯಕ್ಕೆ ಪ್ರಥಮ ಬಂದ ಅಂಕಿತಾ ಬಸಪ್ಪಗೆ ನ್ಯೂಸ್​ಫಸ್ಟ್​ ವತಿಯಿಂದ ಕಿರುಕಾಣಿಕೆ

https://newsfirstlive.com/wp-content/uploads/2024/05/ankitha5.jpg

Load More