/newsfirstlive-kannada/media/media_files/2025/08/04/bengalore-gandhar-2025-08-04-13-23-31.jpg)
ಮೃತ ಬಾಲಕ ಗಂಧಾರ್
ಬೆಂಗಳೂರು: 13 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಸಿ.ಕೆ.ಅಚ್ಚುಕಟ್ಟುವಿನಲ್ಲಿ ನಡೆದಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಇಂಥ ಕಠಿಣ ನಿರ್ಧಾರ ಎಲ್ಲರಲ್ಲೂ ಆತಂಕವನ್ನುಂಟು ಮಾಡಿದೆ.
ಗಂಧಾರ್, ಆತ್ಮಹತ್ಯೆಗೆ ಶರಣಾದ ಬಾಲಕ. ಈತ 7 ನೇ ತರಗತಿ ಓದುತ್ತಿದ್ದ. ಬೆಳಗ್ಗೆ ಎದ್ದ ತಂದೆ ಬಾಲಕ ಮಲಗಿದ್ದ ರೂಮ್ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ‘Forgive Me’ ಎಂದು ಬರೆಯಲಾಗಿರುವ ಡೆತ್ ನೋಟ್ ಸಿಕ್ಕಿದೆ. ಸಿ.ಕೆ.ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಡೆತ್ನೋಟ್ನಲ್ಲಿ ಏನಿದೆ..?
ನಾನು ಮಾಡಿದ ಪಾಪ ಹಾಗೂ ತಪ್ಪನ್ನ ಕ್ಷಮಿಸಿ. ದಯವಿಟ್ಟು ಅಳಬೇಡಿ, ನಾನು ಈಗಾಗಲೇ ಸ್ವರ್ಗದಲ್ಲಿದ್ದೇನೆ. ಮನೆ ಚೆನ್ನಾಗಿರಲಿ ಅಂತಾ ಈ ನಿರ್ಧಾರ ಕೈಗೊಂಡಿದ್ದೇನೆ. ನಂಗೊತ್ತು ನಿಮಗೆ ಕೋಪ ಬರಲು ಕಾರಣನಾಗಿದ್ದೆ. ನನ್ನ ಉದ್ದೇಶ ಸಾವಾಗಿರಲಿಲ್ಲ, ದಯವಿಟ್ಟು ನನ್ನನ್ನು ಕ್ಷಮಿಸಿ. 14 ವರ್ಷ ಖುಷಿಯಾಗಿದ್ದೆ, ಈಗ ಸ್ವರ್ಗದಲ್ಲಿ ಖುಷಿಯಾಗಿದ್ದೇನೆ. ಸ್ನೇಹಿತರೆಲ್ಲರಿಗೂ ಹೇಳಿ, ನಾನು ಖುಷಿಯಾಗಿದ್ದೇನೆ ಎಂದು. ಗುಡ್ಬಾಯ್ ಅಮ್ಮ ಎಂದು ಪತ್ರ ಬರೆದು ಸಾವಿಗೆ ಶರಣಾಗಿದ್ದಾನೆ.
ಬಾಲಕನ ತಂದೆಯ ಹೆಸರು ಗಣೇಶ್ ಪ್ರಸಾದ್. ಇವರು ಮ್ಯೂಜಿಕ್ ಆರ್ಟಿಸ್ಟ್. ಹಾಗೂ ತಾಯಿ ಹೆಸರು ಸವಿತಾ, ಇವರು ಜಾನಪದ ಗಾಯಕಿ. ಸವಿತಾ ಅವರು ಕಳೆದ ಶುಕ್ರವಾರ ಕಾರ್ಯಕ್ರಮದ ಮೇಲೆ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಹೀಗಾಗಿ ಸವಿತಾ ಬರುವವರೆಗೂ ಮರಣೋತ್ತರ ಪರೀಕ್ಷೆ ನಡೆಸದಿರಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ ತಿಳಿಯಲು SIT ಒಂದು ದಿನಕ್ಕೆ ಎಷ್ಟು ಲಕ್ಷ ಖರ್ಚು ಮಾಡ್ತಿದೆ ಗೊತ್ತಾ..?
ಮೃತ ಬಾಲಕನ ತಂದೆ ಗಣೇಶ್ ಪ್ರಸಾದ್ ಮಾಧ್ಯಮಗಳಿಗೆ ಮಾತನಾಡಿ.. ನಾನು ನನ್ನ ದೊಡ್ಡ ಮಗ ಹಾಗೂ ಗಾಂಧಾರ್ ಮನೆಯಲ್ಲಿದ್ವಿ. ಬೆಳಗ್ಗೆ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಲು ಮುಂದಾಗಿದ್ದೆ. ಈ ವೇಳೆ ಆತ ರೂಮ್ನಲ್ಲಿ ಆತ್ಮಹತ್ಯೆಗೆ ಮಾಡಿಕೊಂಡಿರೋದು ಗೊತ್ತಾಗಿದೆ. ಆತ ಮನೆ ಹಾಗೂ ಶಾಲೆಯಲ್ಲಿ ತುಂಬಾ ಚೆನ್ನಾಗಿಯೇ ಇದ್ದ ಎಂದು ಗಣೇಶ್ ಪ್ರಸಾದ್ ಕಣ್ಣೀರು ಇಟ್ಟಿದ್ದಾರೆ.
ಇದನ್ನೂ ಓದಿ:ನಾಳೆ BMTC, KSRTC ರಸ್ತೆಗೆ ಇಳಿಯೋದು ಡೌಟು.. ಕುತೂಹಲ ಮೂಡಿಸಿದ ಸಿಎಂ ಸಭೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ