/newsfirstlive-kannada/media/media_files/2025/08/01/dharmasthala-case16-2025-08-01-16-18-31.jpg)
ಮಂಗಳೂರು: ಧರ್ಮಸ್ಥಳ ಪ್ರಕರಣ ಬೆನ್ನು ಹತ್ತಿರುವ ಎಸ್ಐಟಿ ಅಧಿಕಾರಿಗಳು ಮೃತದೇಹಗಳ ಮಣ್ಣು ಮಾಡಿದ ಸ್ಥಳವನ್ನು ಅಗೆದು ಅವಶೇಷಗಳಿಗಾಗಿ ಹುಡುಕಾಟ ನಡೆಸ್ತಿದ್ದಾರೆ. ಈಗಾಗಲೇ ಗುರುತಿಸಿರುವ 10 ಕಡೆಗಳಲ್ಲಿ ಅಗೆದು ಶೋಧ ನಡೆಸಿದ್ದಾರೆ.
ಐದು ದಿನಗಳಿಂದ ನಡೆದ ಈ ಕಾರ್ಯಾಚರಣೆಗೆ ಎಸ್ಐಟಿ ಎಷ್ಟು ರೂಪಾಯಿ ಖರ್ಚು ಮಾಡ್ತಿದೆ ಎಂಬ ಪ್ರಶ್ನೆ ಸದ್ಯ ಹುಟ್ಟಿಕೊಂಡಿದೆ. SIT ದಿನದ ಅಂದಾಜು ಖರ್ಚು ಬರೋಬ್ಬರಿ 1.50 ಲಕ್ಷ ರೂಪಾಯಿ ಆಗಿದೆ. ಅದರಲ್ಲಿ ಯಾವೆಲ್ಲ ಖರ್ಚುಗಳು ಸೇರಿವೆ ಅನ್ನೋದ್ರ ವಿವರ ಹೀಗಿದೆ.
ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ.. ಇಂದು 3 ಪಾಯಿಂಟ್ಗಳಲ್ಲಿ ಆಪರೇಷನ್, ಇಲ್ಲಿವರೆಗೆ ಸಿಕ್ಕಿದ್ದು ಏನೇನು?
ಯಾವುದಕ್ಕೆ ಎಷ್ಟು ಖರ್ಚು..?
- ಅಧಿಕಾರಿಗಳ ಊಟ, ತಿಂಡಿ, ವಿಶ್ರಾಂತಿಗಾಗಿ ಲಾಡ್ಜ್ ವೆಚ್ಚ (ದಿನಕ್ಕೆ 10 ಸಾವಿರ)
- ಗುಂಡಿ ಅಗೆಯುವವರಿಗೆ ಒಬ್ಬೊಬ್ಬರಿಗೂ ದಿನಗೂಲಿ 2 ಸಾವಿರ ರೂ. (15 ಜನ) ದಿನಕ್ಕೆ 30 ಸಾವಿರ
- ಪೊಲೀಸ್, ವೈದ್ಯರ ಓಡಾಟಕ್ಕೆ ವಾಹನ, ಪೆಟ್ರೋಲ್ ಬಳಕೆ ಖರ್ಚು (20 ಸಾವಿರ)
- SIT ಕಚೇರಿಗೆ ಹೊಸ ಕಂಪ್ಯೂಟರ್, ಕುರ್ಚಿ, ಪ್ರಿಂಟರ್.. ಇತ್ಯಾದಿ ವೆಚ್ಚ
( 3 ಪ್ರಿಂಟರ್, 5 ಕಂಪ್ಯೂಟರ್, 20 ಕುರ್ಚಿ, ಇತ್ಯಾದಿ ಸೇರಿ 40 ಸಾವಿರ) - ಫೊರೆನ್ಸಿಕ್ ವೈದ್ಯರ ತಂಡಕ್ಕಾಗಿ ವಿಶೇಷ ಉಪಕರಣಗಳ ಬಳಕೆ ವೆಚ್ಚ (ದಿನಕ್ಕೆ 3 ರಿಂದ 4 ಸಾವಿರ)
- SIT ಟೀಂ ಜೊತೆ ಇರುವ ಒಟ್ಟಾರೆ ತಂಡಕ್ಕೆ 3 ಹೊತ್ತು ಊಟ, ತಿಂಡಿ (10 ಸಾವಿರ)
- ಗುಂಡಿ ಸಿಕ್ಕ ಕಡೆ ನಿರ್ಮಿಸುವ ತಾತ್ಕಾಲಿಕ ಟೆಂಟ್ಗಳ ವೆಚ್ಚ (ದಿನಕ್ಕೆ 3 ರಿಂದ 4 ಸಾವಿರ)
- ಒಟ್ಟು ಅಂದಾಜು ದಿನದ ಖರ್ಚು ಒಂದು ಲಕ್ಷದ ಐವತ್ತು ಸಾವಿರ ರೂಪಾಯಿ
ಎಸ್ಐಟಿ ಅಧಿಕಾರಿಗಳು ಕೇಸ್ನ ತನಿಖೆಗಾಗಿ ಒಟ್ಟು 260 ಸಿಬ್ಬಂದಿಯನ್ನ ಬಳಸಿಕೊಳ್ತಿದೆ. ಎಸ್ಐಟಿ ಟೀಂನಲ್ಲಿ 26, FSL- 5, SOCO- 5, ಪೌರ ಕಾರ್ಮಿಕರು- 15, ಪೊಲೀಸ್ ಸಿಬ್ಬಂದಿ-200, ಎಸಿ-1, ತಹಶೀಲ್ದಾರ್-1, ಸ್ಥಳೀಯಾಡಳಿತ ಅಧಿಕಾರಿಗಳು-05 ಮಂದಿ ಇದ್ದಾರೆ.
ಇದನ್ನೂ ಓದಿ: ಅನ್ನದಾತರಿಗೆ ಶಾಕಿಂಗ್ ನ್ಯೂಸ್.. ಹವಾಮಾನ ಇಲಾಖೆಯಿಂದ ಆತಂಕಕಾರಿ ಮಾಹಿತಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ