/newsfirstlive-kannada/media/media_files/2025/08/04/bmtc-strike-2025-08-04-12-49-12.jpg)
ಬೆಂಗಳೂರು: ಸಾರಿಗೆ ನೌಕರರು ನಾಳೆ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಇದರಿಂದ 4 ನಿಗಮಗಳಿಗೆ ಕೋಟಿ ಕೋಟಿ ನಷ್ಟವಾಗುವುದರ ಜೊತೆಗೆ ಪ್ರಯಾಣಿಕರು ಕೂಡ ಸಂಕಷ್ಟಕ್ಕೆ ಸಿಲುಕುವ ಆತಂಕ ಇದೆ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಾರಿಗೆ ನೌಕರರ ಒಕ್ಕೂಟ ಹಾಗೂ ಇಲಾಖೆಯ ಜೊತೆ ಮಹತ್ವದ ಸಭೆ ನಡೆಸ್ತಿದ್ದಾರೆ. ಹೀಗಾಗಿ ನಾಳೆ ಬಿಎಂಟಿಸಿ, ಕೆಎಸ್ಆರ್ಟಿಸಿ, ಎನ್ಡಬ್ಲೂಕೆಆರ್ಟಿಸಿ, ಕೆಕೆಆರ್ಟಿಸಿ ಬಸ್ಗಳು ರಸ್ತೆಗೆ ಇಳಿಯುತ್ವಾ? ಇಲ್ವಾ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಕರ್ಲಿ ಹೇರ್ ಸ್ಟೈಲ್‌ನಲ್ಲಿ ಕಿಚ್ಚ.. ಸುದೀಪ್ ಹೊಸ ಲುಕ್ನ ಸಿಕ್ರೇಟ್ ಏನು..?
ಸರ್ಕಾರದ ಸಾಧ್ಯತೆ ನಿರ್ಧಾರಗಳೇನು?
- ಬೇಡಿಕೆ ಈಡೇರಿಕೆಗೂ ಮುನ್ನ ನೌಕರರ ಮನವೊಲಿಕೆಗೆ ಮುಂದಾಗುವ ಸಾಧ್ಯತೆ
- ಸ್ವಲ್ಪ ಸಮಯವಕಾಶ ಕೇಳುವ ಸಾಧ್ಯತೆ
- ಕನಿಷ್ಠ ಸಮಯಾವಕಾಶಕ್ಕೆ ಮನವಿ ಮಾಡಬಹುದು
- ಹಂತ ಹಂತವಾಗಿ ಅರಿಯರ್ಸ್ ಬಿಡುಗಡೆ ಮಾಡುವುದಾಗಿ ಭರವಸೆ ನೀಡಬಹುದು
- ಅರಿಯರ್ಸ್ ಬದಲಾಗಿ ಸಂಬಳ ಹೆಚ್ಚಳ ಮಾಡುವುದಾಗಿ ತಿಳಿಸಬಹುದು.
- ವಜಾಗೊಂಡಿರುವ ನೌಕರರ ಮರುನೇಮಕಕ್ಕೆ ಸೂಚನೆ ನೀಡುವ ಸಾಧ್ಯತೆ
- ಸದ್ಯಕ್ಕೆ ಬೀಸೋದೊಣ್ಣೆಯಿಂದ ತಪ್ಪಿಸಿಕೊಳ್ಳುವ ಯತ್ನ ಸಾಧ್ಯತೆ.
ಸಾರಿಗೆ ನೌಕರರ ಬೇಡಿಕೆಗಳು?
- 38 ತಿಂಗಳ ವೇತನದ ಅರಿಯರ್ಸ್ ಬಾಕಿ ಹಣ ನೀಡಬೇಕು
- ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ ನೀಡಬೇಕು
- ಖಾಸಗೀಕರಣ ಭ್ರಷ್ಟಾಚಾರ ಕಾರ್ಮಿಕರ ಕಿರುಕುಳ ನಿಲ್ಲಬೇಕು
- ನಗದು ರಹಿತ ವೈದ್ಯಕೀಯ ಸೌಲಭ್ಯ
- ನಮ್ಮ ಹಕ್ಕಿನ ರಜೆ
- 1-1-2024 ರಿಂದ ವೇತನ ಜಾರಿಗೊಳಿಸುವುದು
- ಉತ್ತಮ ಕ್ಯಾಂಟೀನ್ ವ್ಯವಸ್ಥೆ
- ಈ ಹಿಂದೆ 2020 ಮತ್ತು 2021 ರ ಸಾರಿಗೆ ಮುಷ್ಕರ ಸಂದರ್ಭದಲ್ಲಿ ನೌಕರರ ಮೇಲೆ ಹಾಕಲಾಗಿರುವ
- ಎಲ್ಲಾ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಬೇಕು
- ಸಾರಿಗೆ ನಿಗಮದ ವಿದ್ಯುತ್ ಬಸ್‌ಗಳಲ್ಲಿ ಸಂಸ್ಥೆಯ ಚಾಲಕರನ್ನೇ ಚಾಲನಾ ಕೆಲಸಕ್ಕೆ ನಿಯೋಜಿಸಬೇಕು
- ಈ ಬಸ್‌ಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ನೀಡುವ ಪದ್ದತಿ ಕೈಬಿಡಬೇಕು
ಇದನ್ನೂ ಓದಿ:ಧರ್ಮಸ್ಥಳ ಬುರುಡೆ ರಹಸ್ಯ ತಿಳಿಯಲು SIT ಒಂದು ದಿನಕ್ಕೆ ಎಷ್ಟು ಲಕ್ಷ ಖರ್ಚು ಮಾಡ್ತಿದೆ ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ