ಥತ್ತೇರಿಕೆ.. ಚಿರತೆಗೆ ಅಂತಾ ಬೋನ್​ ಇಟ್ರೆ ಸಿಕ್ಕಿಬಿದ್ದಿದ್ದು ಈ ಪ್ರಾಣಿ..! ಅದೆಂಗೆ..?

‘ಪಾಪಿ ಚಿರಾಯು..’ ಎನ್ನುವಂತೆ.. ಈ ಮನುಷ್ಯನ ಟೈಮು ಎಷ್ಟು ಕರಾಬು ಇತ್ತು ನೋಡಿ.. ಚಿರತೆ ಬೋನಿನಲ್ಲಿ ಲಾಕ್ ಆಗಿ ವಿಲ ವಿಲ ಅಂತಾ ಒದ್ದಾಡಿದ ಕಿಟ್ಟಿಯ ಕತೆ ಇದು. ಆತ ಹೆಂಗೆ ಲಾಕ್ ಆದ ಅಂತಾ ತಿಳಿದುಕೊಳ್ಳಲು ಈ ಸ್ಟೋರಿ ಓದಿ..

author-image
Chandramohan
Man inside leopard cage (1)
Advertisment
  • ಚಿರತೆ ಸೆರೆಗೆ ಇಟ್ಟಿದ್ದ ಬೋನಿನೊಳಗೆ ಹೋಗಿ ಸಿಕ್ಕಿ ಬಿದ್ದ ಕಿಟ್ಟಿ!
  • ಕುತೂಹಲಕ್ಕೆಂದು ಬೋನುನೊಳಗೆ ಹೋಗಿದ್ದ ಕಿಟ್ಟಿ
  • ಬೋನಿನೊಳಗೆ ಹೋಗುತ್ತಿದ್ದಂತೆ, ಬೋನಿನ ಗೇಟ್ ಲಾಕ್

ಇರಲಾರದೇ ಇರುವೆ ಬಿಟ್ಕೊಂಡ ಕತೆ ಇದು.. ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕು ಯಳಂದೂರು ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ಚಿರತೆ ಹಾವಳಿ ಹೋರಾಗಿತ್ತು. ಮನೆಯಲ್ಲಿ ಸಾಕಿದ್ದ ನಾಯಿ, ಕರು, ಮೇಕೆ, ಕೋಳಿ ಎಲ್ಲವೂ ಮಾಯಾ ಆಗ್ತಿದ್ದವು.. ಆಗಾಗ ಮನುಷ್ಯರ ಮೇಲೆ ದಾಳಿಗೆ ಯತ್ನಿಸಿದ್ದೂ ಉಂಟು..!
 
ಹೀಗೆ ಚಿರತೆಯಿಂದ ಕಂಗೆಟ್ಟಿದ್ದ ಜನ, ಅರಣ್ಯ ಇಲಾಖೆ ಅಧಿಕಾರಿಗಳ ಮುಂದೆ ದಂಬಾಲು ಬಿದ್ದಿದ್ದರು. ಅಯ್ಯೋ ದೇವರೇ, ಊರಲ್ಲಿ ಬದುಕೋದೇ ಕಷ್ಟ ಆಗೈತಿ. ಮಕ್ಕಳು, ಮರಿ ಓಡಾಡೋದು ಕಷ್ಟ ಆಗೈತಿ. ಹೆಂಗಾರ ಮಾಡಿ, ಚಿರತೆನಾ ಹೊತ್ಕೊಂಡು ಹೋಗಿ ಸಾಕಪ್ಪ ಸಾಕು ಅಂತಾ ಕೈಮುಗಿದ್ದರು.

ಇದನ್ನೂ ಓದಿ: ಬೆಂಗಳೂರಿನಿಂದ ಮಂಗಳೂರು ಮೂಲಕ ಗೋವಾಗೆ ವಂದೇ ಭಾರತ್ ಟ್ರೇನ್ ಆರಂಭಿಸಿ: ಕೇಂದ್ರ ರೈಲ್ವೇ ಸಚಿವರಿಗೆ ಎಚ್‌ಡಿಕೆ ಪತ್ರ ಬರೆದು ಒತ್ತಾಯ

Man inside leopard cage

ಗ್ರಾಮಸ್ಥರು ಜಪ್ಪಯ್ಯ ಅಂದ್ರೂ ಬಿಡದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳಿಗೆ ಅನಿವಾರ್ಯವಾಗಿತ್ತು. ಗ್ರಾಮಕ್ಕೆ ಹೋಗಿ ಬೋನ್ ಇಟ್ಟು ಚಿರತೆ ಸೆರೆಗೆ ಪ್ಲಾನ್ ಮಾಡಿದ್ದರು. ಚಿರತೆ ಇವತ್ತು ಬೀಳುತ್ತೆ, ನಾಳೆ ಬೀಳುತ್ತೆ ಎಂದು ಕಾದಿದ್ದರು. ಊರಿನ ಗ್ರಾಮಸ್ಥರೂ ಕೂಡ ಪಾಪಿ ಚಿರತೆಯ ಹೆಡೆಮುರಿ ಕಟ್ಟಲು ಟೊಂಕ ಕಟ್ಟಿ ಕಾದು ಕೂತಿದ್ದರು. ಆದರೆ ಅಲ್ಲಿ ಆಗಿದ್ದೇ ಬೇರೆ..
 
‘ಪಾಪಿ ಚಿರಾಯು..’ ಎನ್ನುವಂತೆ.. ಈ ಮನುಷ್ಯನ ಟೈಮು ಎಷ್ಟು ಕರಾಬು ಇತ್ತು ನೋಡಿ.. ಊರಲ್ಲಿ ಹಾಕಿಟ್ಟಿದ್ದ ಚಿರತೆ ಬೋನಿನ ಮೇಲೆ ಕಿಟ್ಟಿ ಕಣ್ಣು ಬಿದ್ದಿದೆ. ಚಿರತೆ ಹೆಂಗೆ ಲಾಕ್ ಆಗುತ್ತೆ? ಈ ಬೋನ್ ಹೇಗೆ ಕೆಲಸ ಮಾಡಿತ್ತು ಎಂಬ ಕ್ಯೂರಿಸಿಟಿ ಹೆಚ್ಚಿಸಿಕೊಂಡ. ‘ನೋಡೇ ಬಿಡುವಾ, ಒಳಗ್ ಹೋಗಿ..’ ಅಂತಾ ಯಾರೂ ಇಲ್ಲದ ವೇಳೆ ಹೊಲಕ್ಕೆ ದೌಡಾಯಿಸಿದ್ದ. 

ಇದನ್ನೂ ಓದಿ: ಈ ಲೇಡಿ ಪ್ರೊಫೆಸರ್ ಗೆ ವಾರದ ದಿನ ಟೀಚಿಂಗ್ ವೃತ್ತಿ , ವಾರಾಂತ್ಯ ಕಳ್ಳತನವೇ ಪ್ರವೃತ್ತಿ!! : ಈಗ ಪೊಲೀಸರಿಂದ ಆರೆಸ್ಟ್!

Ramanagara chirate (1)

ಪ್ಲಾನ್ ಪ್ರಕಾರವೇ, ಬೋನಿನೊಳಗೆ ಎಂಟ್ರಿಕೊಟ್ಟಿದ್ದಾನೆ. ಬೋನಿನೊಳಗೆ ಹೋಗ್ತಿದ್ದಂತೆಯೇ ‘ಥತ್ತರಿಕೆ ಶಿವಾ, ಶಿವಾ’ ಅದು ಲಾಕ್ ಆಗಿದೆ. ಅಯ್ಯಯ್ಯೋ, ಸಿಕ್ಕಿಬಿದ್ದೆ ಎಂದು ಗೇಟ್ ಓಪನ್ ಮಾಡಲು ಯತ್ನಿಸಿದ್ದಾನೆ. ಆದ್ರೆ ಗ್ರಹಚಾರಕ್ಕೆ ಲಾಕ್ ಓಪನ್ ಆಗಲೇ ಇಲ್ಲ. ಶಿವ ಶಿವ ಅಂತಾ ಬರೋಬ್ಬರಿ ಮೂರು ಗಂಟೆಗಳ ಕಾಲ ಬೋನ್​​ನಲ್ಲಿ ಒದ್ದಾಡಿದ್ದಾನೆ. 

ಮೂರು ಗಂಟೆಗಳ ಕಾಲ ಲಾಕ್​ನಲ್ಲಿದ್ದಾಗ.. ಊರಿನ ಜನ ಕೆಲಸ ನಿಮಿತ್ತ ಹೊಲದತ್ತ ಬರುತ್ತಿದ್ದರು.. ಆಗ ಜೋರಾಗಿ ಕೂಗಿ ಕಾಪಾಡಿ, ಕಾಪಾಡಿ ಎಂದಿದ್ದಾನೆ. ಬೋನಿನತ್ತ ಅವರು ಬರುತ್ತಿದ್ದಂತೆಯೇ, ನಗು, ನಗುತ್ತ.. ‘ಏನೋ ಮಾಡಲು ಹೋಗಿ ಸಿಕ್ಕಿಬಿದ್ಬಿಟ್ಟೆ ಸ್ವಾಮಿ.. ಹೆಂಗಾರು ಮಾಡಿ ಬಚಾವ್ ಮಾಡಿ..’ ಪುಣ್ಯಕಟ್ಕೊಳ್ಳಿ  ಎಂದು ಬೇಡಿದ್ದಾನೆ. ಆತನ ಮಾತ್ ಕೇಳಿ ನಗುವುದೋ, ಅಳುವುದೋ ಎಂದು ಗೊಳ್ ಅಂತಾ ನಕ್ಕಿದ್ದಾರೆ. ಕೊನೆಗೆ ಅನ್​ಲಾಕ್ ಮಾಡಿದ್ದಾರೆ. ‘ಬದುಕಿತು ಬಡಜೀವ’ ಅಂತಾ ಮನೆ ಕಡೆಗೆ ಓಡಿದ್ದಾನೆ ಕಿಟ್ಟಿ!

ಇದನ್ನೂ ಓದಿ: ಲೋಕಾಯುಕ್ತರಿಂದ ನಾಲ್ಕು ಜಿಲ್ಲೆಗಳಲ್ಲಿ ದಾಳಿ : ಆದಾಯ ಮೀರಿದ ಆಸ್ತಿ ಪತ್ತೆಗಾಗಿ ಶೋಧ ಕಾರ್ಯಾಚರಣೆ
   
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Man struck inside leopard cage at Chamaraja nagar
Advertisment