/newsfirstlive-kannada/media/media_files/2025/08/21/dating-app-fir-2025-08-21-21-40-38.jpg)
ಬೆಂಗಳೂರು: ನೀವು ಡೇಟಿಂಗ್ ಆ್ಯಪ್​ ನಂಬಿ ಜೀವನ ಸಂಗಾತಿ ಹುಡುಕಾಟದಲ್ಲಿದ್ದೀರಾ? ಹಾಗಿದ್ರೆ ಈ ಸ್ಟೋರಿ ನೀವು ಓದಲೇಬೇಕು. ಹಾಗೇನಾದ್ರೂ ನೀವು ಯಾಮಾರಿದ್ರೆ ಇದೇ ರೀತಿ ಪೊಲೀಸ್​ ಸ್ಟೇಷನ್​ಗೆ ಹೋಗಿ ಕಣ್ಣೀರು ಹಾಕ್ಬೇಕಾಗುತ್ತೆ ಹುಷಾರ್​.
ಇದನ್ನೂ ಓದಿ:ಅನನ್ಯ ಭಟ್ ಬಗ್ಗೆ ಸುಜಾತ ಭಟ್ ರಿಂದ ಗೊಂದಲ, ಅಸ್ಪಷ್ಟ ಹೇಳಿಕೆ, ಉತ್ತರ ಸಿಗದ 15 ಪ್ರಶ್ನೆಗಳು
ಅಯಲ್​ (Aisle) ಇದು ಡೇಟಿಂಗ್​ ಆ್ಯಪ್​. ಜೀವನ ಸಂಗಾತಿ ಹುಡುಕಾಟದಲ್ಲಿ ಇರೋರಿಗೆ ಬೆಸ್ಟ್​ ಆಪ್ಶನ್​. ಆದ್ರೀಗ ಇದೇ ಡೇಟಿಂಗ್ ಆ್ಯಪ್​ ಬಳಸಿ ಲೈಫ್​ ಪಾರ್ಟನರ್​ಗಾಗಿ ಸರ್ಚ್​​ ಮಾಡಿದ್ದ ಅವಳು ಇದೀಗ ಕತ್ತಲ ಕೋಣೆಯಲ್ಲಿ ಕಣ್ಣೀರು ಸುರಿಸುವಂತಾಗಿದೆ. ಎಲ್ಲವನ್ನೂ ಕಳೆದುಕೊಂಡ ಆ ಚೆಲುವೆ ಈ ನ್ಯಾಯಕ್ಕಾಗಿ ಪೊಲೀಸ್​ ಸ್ಟೇಷನ್​ ಸುತ್ತವಂತಾಗಿದೆ.
ಅವಳು ಲೈಫ್​ ಪಾರ್ಟನರ್​ಗಾಗಿ ಎದುರು ನೋಡ್ತಾ ಬೆಟ್ಟದಷ್ಟು ಕನಸು ಕಂಡಿದ್ಲು. ಅದಕ್ಕಾಗಿ ಅಯಲ್​​​ (Aisle) ಆ್ಯಪ್​ ಬಳಸಿ ಸರ್ಚ್​​ ಮಾಡ್ತಿದ್ದಾಗ ಮದನ್​ ಅನ್ನೋನ ಪ್ರೊಫೆಲ್​ ಅಕ್ಟ್ರ್ಯಾಟ್​​ ಮಾಡಿತ್ತು. ಜೋಡಿ ಹಕ್ಕಿಗಳು ಹಾರಾಡ್ತಾ 2ವರೆ ವರ್ಷ ಕಳೀತು ಅಂದಾಗ ಅವಳು ನೋಡಿದ ಅದೊಂದು ಫೋಟೋ ಹಾರ್ಟ್​​ ಅನ್ನ ಬ್ರೇಕ್​ ಮಾಡಿದೆ.
/filters:format(webp)/newsfirstlive-kannada/media/media_files/2025/08/21/dating-app-fir2-2025-08-21-21-47-49.jpg)
2ವರೆ ವರ್ಷದ ಹಿಂದೆ ಯುವತಿನಾ ಭೇಟಿಯಾದ ಮದನ್​​, ನನಗೆ ಆಲ್​ರೆಡಿ ಮದುವೆ ಆಗಿದೆ. ಆದ್ರೆ ಮಕ್ಕಳಿಲ್ಲ, ನಮ್ಮಿಬ್ಬರದ್ದು ಡಿಪೋರ್ಸ್​ ಆಗಿದೆ ಎಂದಿದ್ದ. ಇದನ್ನ ನಂಬಿದ್ದ ಅವಳು ಮನೆಯವರ ಒಪ್ಪಿಗೆ ಮೇರೆಗೆ ಅಕ್ಟೋಬರ್​​ 23 2023ರಂದು ಮದನ್​ ಕೈ ಹಿಡಿದಿದ್ಲು. ವರದಕ್ಷಿಣೆಯಾಗಿ ಚಿನ್ನಾಭರಣ 5 ಲಕ್ಷ ರೂಪಾಯಿ ಹಣವನ್ನೂ ಕೊಟ್ಟು ಗ್ರ್ಯಾಂಡ್​ ಆಗಿಯೇ ಮಗಳ ಮದುವೆಯೂ ಮಾಡಿಸಿದ್ದರು.
ಎಲ್ಲವೂ ಚನ್ನಾಗೇ ನಡೀತಾ ಹೋಗ್ತಿತ್ತು ಅನ್ನುವಾಗ 2 ವರೆ ವರ್ಷ ಆಗ್ತಿದ್ದಂತೆ ಅವಳ ಕೈಗೆ ಪತಿ ಮದನ್​ ಜೊತೆ ಯಾವುದೋ ಮಗು ಇರೋ ಫೋಟೋ ಸಿಕ್ಕಿತ್ತು. ಅದನ್ನ ನೋಡಿ ಯಾರು ಇದು ಕೇಳಿದಾಗ, ಇವನು ನನ್ನ ಮಗ, ನಾನು ಮೊದಲ ಪತ್ನಿಗೆ ಡಿಪೋರ್ಸ್​​ ಕೊಟಿಲ್ಲ ಅಂತ ಒಪ್ಪಿಕೊಂಡಿದ್ನಂತೆ. ಇದ್ರಿಂದ ಶಾಕ್​ಗೆ ಒಳಗಾಗಿದ್ದ ಅವಳು ಪ್ರಶ್ನಿಸಲು ಹೋದಾಗ ಸಂಬಂಧಿಕರು ಹಲ್ಲೆ ಮಾಡಿರೋ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ವಿವಾಹಿತೆ.. ಕಾರು ಸಮೇತ ಕೆರೆಗೆ ತಳ್ಳಿ ಜೀವ ತೆಗೆದನಾ ಕಿರಾತಕ..?
/filters:format(webp)/newsfirstlive-kannada/media/media_files/2025/08/21/dating-app-fir1-2025-08-21-21-47-49.jpg)
ಸದ್ಯ ನಂಬಿ ಮೋಸಕ್ಕೆ ಒಳಗಾದ ಯುವತಿ ನ್ಯಾಯಕ್ಕಾಗಿ ಸೌತ್ ವುಮೇನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ನನ್ನ ಹಣ, ಒಡವೆ ದುರುಪಯೋಗ ಪಡಿಸಿಕೊಂಡು ವಂಚನೆ ಮಾಡಿರೋದಾಗಿ ದೂರು ​​ ಕೊಟ್ಟಿದ್ದಾಳೆ. ಸದ್ಯ ಕೇಸ್​ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಏನೇ ಹೇಳಿ ಡೇಟಿಂಗ್​ ಆ್ಯಪ್​ ಬಳಸುವಾಗ ಸ್ವಲ್ಪ ಎಚ್ಚರದಿಂದಿರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us