/newsfirstlive-kannada/media/media_files/2025/09/26/bagalakote-ladies-pg-2025-09-26-11-31-31.jpg)
ಬಾಗಲಕೋಟೆ: ಖಾಸಗಿ ಪಿಜಿಯಲ್ಲಿ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಪ್ರಾಣ ಬಿಟ್ಟಿದ್ದಾಳೆ. ಸೀಮಾ ರಾಠೋಡ (17) ಮೃತ ದುರ್ದೈವಿ.
ಬಾಗಲಕೋಟೆಯ ವಿದ್ಯಾಗಿರಿಯಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ. ಬಾಗಲಕೋಟೆ ವಾಗ್ದೇವಿ ಪಿಯು ಕಾಲೇಜ್ ಪ್ರಥಮ ವರ್ಷದ ಸೈನ್ಸ್ ವಿದ್ಯಾರ್ಥಿನಿ ಸೀಮಾ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಪಿಜಿಯಲ್ಲಿದ್ದ ಸೀಮಾ, ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ.
ಇದನ್ನೂ ಓದಿ:PSI ಪ್ರಶ್ನೆ ಪತ್ರಿಕೆ ಲೀಕ್ ರಹಸ್ಯ ಬಿಚ್ಚಿಟ್ಟ ಗಂಡ-ಹೆಂಡತಿ ಜಗಳ! ಕರ್ನಾಟಕದಲ್ಲಿ ಅಂದು ಅಸಲಿಗೆ ಆಗಿದ್ದೇನು..?
ವೈರಲ್ ಆಗಿರುವ ಸಿಸಿಟಿವಿ ವಿಡಿಯೋ ಒಂದು ಲಭ್ಯವಾಗಿದೆ. ಅದರಲ್ಲಿ ಸೀಮಾಳ ಕೆಟ್ಟ ನಿರ್ಧಾರವನ್ನು ನೋಡಿದ ಕೆಲವು ವಿದ್ಯಾರ್ಥಿನಿಯರು ಕಾಪಾಡುವಂತೆ ಜೋರಾಗಿ ಕೂಗಿದ್ದಾರೆ. ಈ ವೇಳೆ ಸೆಕ್ಯೂರಿಟಿ ಗಾರ್ಡ್​, ಓಡಿ ಹೋಗಿ ಆಕೆಯಿದ್ದ ರೂಮಿಗೆ ಧಾವಿಸಿದ್ದಾರೆ. ನಂತರ ಕೆಲವು ಹೆಣ್ಮಕ್ಕಳು ಗಾಬರಿಯಿಂದ ಓಡಿದ್ದಾರೆ.
ಕೂಡಲೇ ಆಕೆಯನ್ನು ರಕ್ಷಣೆ ಮಾಡುವ ಪ್ರಯತ್ನ ನಡೆದಿತ್ತು. ಆದರೆ ಆಕೆ ಬದುಕುಳಿಯಲಿಲ್ಲ. ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೋಷಕರು ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಕೇಸ್ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಮಹಿಳೆ ಮೇಲೆ ಅಮಾನುಷ ಹಲ್ಲೆ.. ಇಬ್ಬರ ಬಂಧನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.