/newsfirstlive-kannada/media/media_files/2025/10/03/badige-badidata-1-2025-10-03-11-41-49.jpg)
ಬಳ್ಳಾರಿ: ಕರ್ನಾಟಕ-ಆಂಧ್ರ ಪ್ರದೇಶ ಗಡಿಭಾಗವಾದ ದೇವರಗುಟ್ಟು ಗ್ರಾಮದಲ್ಲಿ (Devaragudda) ನಿನ್ನೆ ನಡೆದ ‘ಬಡಿಗೆ ಬಡಿದಾಟ ಜಾತ್ರೆ’ಯಲ್ಲಿ ದುರಂತ ಸಂಭವಿಸಿದೆ. ಬಡಿದಾಟದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದು, ವಿಜಯ ದಶಮಿಯ ಬನ್ನಿ ಜಾತ್ರೆಯಲ್ಲಿ (Banni festival) ರಕ್ತದ ಕೋಡಿ ಹರಿದಿದೆ.
ದೇವರಗುಡ್ಡದಲ್ಲಿರುವ ಮಾಳ ಮಲ್ಲೇಶ್ವರ ಸನ್ನಿಧಿಯಲ್ಲಿ ವಿಜಯದಶಮಿ ದಿನ ವಿಶಿಷ್ಟ ಜಾತ್ರೆ ನಡೆಯುತ್ತದೆ. ಜಾತ್ರೆಯ ದಿನ ಬಡಿಗೆ ಹಿಡಿದು ಒಬ್ಬರಿಗೊಬ್ಬರು ಹೊಡೆದುಕೊಂಡು ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ಅರಕೇರ ಮತ್ತು ನೇರಣಕಿ ಗ್ರಾಮದ ಜನರು ಮಾಳ ಮಲ್ಲೇಶ್ವರನ ಉತ್ಸವ ಮೂರ್ತಿಯನ್ನ ತಮ್ಮ, ತಮ್ಮ ಊರುಗಳಿಗೆ ಒಯ್ಯಲು ಬಡಿಗೆ ಹಿಡಿದು ಬಡಿದಾಡುತ್ತಾರೆ.
ಇದನ್ನೂ ಓದಿ:‘Black is..’ ಶ್ರೇಯಾಂಕ ಪಾಟೀಲ್ ಎಂಥ ಮಾತು ಹೇಳಿದ್ರು..? ಫೋಟೋಗಳು..!
ನಿನ್ನೆಯ ಜಾತ್ರೆಯಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಭಾಗಿಯಾಗಿದ್ದರು. ಹೊಡೆದಾಟದಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅವರಲ್ಲಿ ಇಬ್ಬರು ಇದೀಗ ಪ್ರಾಣ ಕಳೆದುಕೊಂಡಿದ್ದಾರೆ. ಅರಿಕೇರಾ ಗ್ರಾಮದ ತಿಮ್ಮಪ್ಪ, ಇನ್ನೋರ್ವ ಭಕ್ತ ಜೀವ ಕಳೆದುಕೊಂಡಿದ್ದಾರೆ.
ಗಾಯಗೊಂಡವರನ್ನು ಆಲೂರು, ಅದೋನಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ದೇವರಗುಡ್ಡದ ತಾತ್ಕಾಲಿಕ ಆಸ್ಪತ್ರೆಯಲ್ಲೂ ಹಲವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬನ್ನಿ ಹಬ್ಬದ ದೇವರುಗಟ್ಟನಲ್ಲಿ ಸಾಂಪ್ರದಾಯಿಕ ರಕ್ತಸಿಕ್ತವಾಗಿದೆ. ಕೊಲುಗಳು, ಮರ ತುಂಡುಗಳನ್ನ ಹಿಡಿದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಡೊಣ್ಣೆಗಳಿಂದ ಒಂದೂರಿನ ಜನರಿನಂದ ಮತ್ತೊಂದು ಜನರ ಪರಸ್ಪರ ಹಲ್ಲೆ ಮಾಡಿದ ಪರಿಣಾಮ ದುರಂತ ಸಂಭವಿಸಿದೆ. ಇನ್ನು ಆಂಧ್ರ ಸರ್ಕಾರದಿಂದ ಬಡಿಗೆ ಬಡಿದಾಟಕ್ಕೆ ನಿರ್ಬಂಧ ಹೇರಿದೆ. ಆದರೂ ಜಾತ್ರೆಯಲ್ಲಿ ಪ್ರತಿವರ್ಷ ಬಡಿದಾಡಿಕೊಳ್ತಾರೆ. ಸಾವಿರಾರು ಪೊಲೀಸರು ನಿಯೋಜನೆಗೊಂಡಿದ್ದರೂ ಯಾವುದೇ ಪ್ರಯೋಜನ ಆಗಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ