/newsfirstlive-kannada/media/media_files/2025/08/07/belagavi-soldier-2-2025-08-07-22-21-52.jpg)
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದ ವೀರಯೋಧ ಕಿರಣ್ರಾಜ್ ಕೇದಾರಿ ತೆಲಸಂಗ (23) ಪಂಜಾಬ್‌ನ ಪಟಿಯಾಲ್ ರೆಜೀಮೆಂಟ್ನಲ್ಲಿ ಸೇವೆ ಸಲ್ಲಿಸ್ತಿದ್ದರು. ಕಳೆದ ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದರು.
ಪಾರ್ಥಿವ ಶರೀರವನ್ನು ಹುಟ್ಟೂರಾದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮಕ್ಕೆ ಗುರುವಾರ ಮದ್ಯಾಹ್ನ 1 ಗಂಟೆಗೆ ಅಥಣಿ ಪಟ್ಟಣಕ್ಕೆ ಆಗಮಿಸಿ, ತಾಲೂಕಾ ಆಡಳಿತ ಹಾಗೂ ಮಾಜಿ ಸೈನಿಕರ ಸಂಘದಿಂದ ಪುಷ್ಪ ನಮನ ಗೌರವ ಸಲ್ಲಿಸಿದ ನಂತರ ಹಲ್ಯಾಳ ರಸ್ತೆಯ ನೀರಿನ ಟ್ಯಾಂಕ್‌ದಿoದ ಶಿವಯೋಗಿ ವೃತ್ತದ ಮಾರ್ಗವಾಗಿ ಸಂಗೋಳ್ಳಿ ರಾಯಣ್ಣನ ವೃತ್ತದವರೆಗೆ ಅಂತಿಮ ಯಾತ್ರೆ ಮೂಲಕ ಗ್ರಾಮಕ್ಕೆ ಬಿಳ್ಕೊಡಲಾಯಿತು.
ಇದನ್ನೂ ಓದಿ: ಯಂಗ್ ಇಂಡಿಯಾ ಪವರ್! ಸರಣಿಗೂ ಮುನ್ನ ಆಡಿಕೊಂಡವ್ರಿಗೆ ಕೊಟ್ಟ ಉತ್ತರ ಹೇಗಿತ್ತು?
ಅಥಣಿಯಿಂದ ಯಕ್ಕಂಚಿ, ಯಲಿಹಡಲಗಿ, ಅಡಹಳ್ಳಿ, ಕೋಹಳ್ಳಿ ಈ ಗ್ರಾಮಗಳಲ್ಲಿ ಗ್ರಾಪಂ ಆಡಳಿತದಿಂದ ಹಾಗೂ ಗ್ರಾಮಸ್ಥರು ಅಂತಿಮ ನಮನ ಸಲ್ಲಿಸಿದರು. ನಂತರ ಕೋಹಳ್ಳಿ ಗ್ರಾಮದಿಂದ ಐಗಳಿ ಸ್ವ-ಗ್ರಾಮಕ್ಕೆ ಆಗಮಿಸುತ್ತಿದ್ದ ವಾಹನವನ್ನು ಗ್ರಾಮಸ್ಥರು, ಶಾಲಾ ಮಕ್ಕಳಿಂದ ಪುಷ್ಪಾರ್ಚನೆ ಮಾಡುವ ಮೂಲಕ ವಿಜೃಂಭಣೆಯಿoದ ಸ್ವಾಗತಿಸಿದರು. ಆದರ್ಶ ಶಾಲೆಯಲ್ಲಿ ಅಂತಿಮ ದರ್ಶನ ಪಡೆಯಲು ಸುತ್ತ ಮುತ್ತಲಿನ ಹಳ್ಳಿಗಳಿಂದ ಸಾವಿರಾರು ಜನರು ಸೇರಿದ್ದರು. ಬೋಲೋ ಭಾರತ ಮಾತಾಕಿ ಜೈ, ಒಂದೇ ಮಾತರಂ, ಕಿರಣರಾಜ್ ಅಮರ್ ರಹೇ ಎಂಬ ಜಯಘೋಷಣೆ ಮುಗಿಲು ಮುಟ್ಟಿತ್ತು.
ಸೈನಿಕನ ತಂದೆ ಕೇದಾರಿ, ತಾಯಿ ರೇಣುಕಾ, ಅಜ್ಜ ಸತ್ಯಪ್ಪ, ಅಜ್ಜಿ ಯಲ್ಲವ್ವ, ಅಣ್ಣ ರವಿ, ಸಹೋದರಿ ನಿವೇದಿತಾ ಹಾಗೂ ಬಂಧು ಬಳದವರ ರೋಧನ ಮುಗಿಲು ಮುಟ್ಟಿತ್ತು. ಕಿರಣರಾಜ್‌ನ ಮೃತದೇಹ ಹೊತ್ತು ವಾಹನ ಗ್ರಾಮದಲ್ಲಿ ಬರುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ ಜನರ ದುಃಖ, ಆಕ್ರಂದನ ಕರಳು ಚಿರ್ ಎನಿಸುವಂತಿತ್ತು. ತಂದೆ-ತಾಯಿ, ತಮ್ಮ ಮಗನ ಮುಖದರ್ಶನ ಮಾಡುವಾಗ ಬಿಕ್ಕಿ-ಬಿಕ್ಕಿ ಅಳುತ್ತಿದ್ದ ದೃಶ್ಯ ಕರಳು ಕರಗಿ ನೀರಾಗುವಂತಿತ್ತು.
ಇದನ್ನೂ ಓದಿ:ರಾಜ್ಯದಲ್ಲಿ ಮತ್ತೊಂದು ಹುಲಿ ಅಸಹಜ ಸಾವು; 7 ವರ್ಷದ ಹೆಣ್ಣು ಹುಲಿಯ ಕಳೇಬರ ಪತ್ತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ