/newsfirstlive-kannada/media/media_files/2025/08/07/team-india-test-series-2025-08-07-21-56-57.jpg)
ಟೀಂ ಇಂಡಿಯಾ Photograph: (ಬಿಸಿಸಿಐ)
ಇಂಗ್ಲೆಂಡ್​ ಪ್ರವಾಸಕ್ಕೂ ಮುನ್ನ ಕ್ರಿಕೆಟ್ ಲೋಕದ ಹಲವು ದಿಗ್ಗಜರು ಟೀಮ್​ ಇಂಡಿಯಾ ಬಗ್ಗೆ ಏನೇನೋ ಹೇಳಿದ್ರು. ಕೊಹ್ಲಿ, ರೋಹಿತ್​ ಇಲ್ಲದ ತಂಡ ಏನ್​ ಮಹಾನ್​ ಮಾಡುತ್ತೆ ಅನ್ನೋ ದಾಟಿಯಲ್ಲಿ ಹೀಯಾಳಿಸಿದ್ರು. ಅಂದು ಮೌನವಾಗಿದ್ದ ಯಂಗ್​ ಇಂಡಿಯಾ ಇಂದು ಆಟದಿಂದ ಸರಿಯಾದ ಆನ್ಸರ್​ ಕೊಟ್ಟಿದೆ.
ಇಂಡೋ ಇಂಗ್ಲೆಂಡ್ ನಡುವಿನ ಟೆಸ್ಟ್​ ಸರಣಿ ಅಂತ್ಯಗೊಂಡಿದೆ. 2 ತಿಂಗಳ ಕಾಲ ನಡೆದ 5 ಪಂದ್ಯಗಳ ಟೆಸ್ಟ್ ಸರಣಿ ಡ್ರಾ ಮಾಡಿಕೊಳ್ಳುವಲ್ಲಿ ಯಂಗ್ ಇಂಡಿಯಾ ಸಕ್ಸಸ್​ ಕಂಡಿದೆ. ಈ ಟೆಸ್ಟ್​ ಸರಣಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ಬಗ್ಗೆ ದಿಗ್ಗಜರು ನುಡಿದ ಭವಿಷ್ಯಗಳು ಬೇರೆಯದ್ದೇ ಆಗಿತ್ತು. ರೋಹಿತ್, ವಿರಾಟ್​ ಇಲ್ಲದ ಟೀಮ್ ಇಂಡಿಯಾ ಬಗ್ಗೆ ದಿಗ್ಗಜ ಆಟಗಾರರು ಕೇವಲವಾಗಿ ಮಾತನಾಡಿದ್ದರು.
ಇದನ್ನೂ ಓದಿ: ಉಗ್ರರ ಟಾರ್ಗೆಟ್ ಆಗಿತ್ತು ಧರ್ಮಸ್ಥಳದ ಮಂಜುನಾಥ ದೇಗುಲ..
ಟೀಮ್ ಇಂಡಿಯಾ ನಿಜವಾಗಿಯೂ ಕಷ್ಟಪಡಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಆಸಿಸ್ ಮಾಜಿ ಕ್ರಿಕೆಟರ್ ಮ್ಯಾಥ್ಯೂ ಹೇಡನ್ ಹೇಳಿದ್ದರು. ಇಂಗ್ಲೆಂಡ್​ ಈಗ 4-0 ಅಂತರದಲ್ಲಿ ಗೆಲ್ಲಬಹುದು ಎಂದು ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾನ್ ಹೇಳಿದ್ದರು. ಇನ್ನು ಇಂಗ್ಲೆಂಡ್ ಕ್ರಿಕೆಟರ್​ ಗ್ರೇಮ್ ಸ್ವಾನ್, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇದು ಆ್ಯಷಸ್ ಟೆಸ್ಟ್​ ಸರಣಿಯ ವಾರ್ಮ್​ ಅಪ್ ಮ್ಯಾಚ್​ ಎಂದಿದ್ದರು.
ರೋಹಿತ್, ಕೊಹ್ಲಿ ಇಲ್ಲದೇ ಹೋರಾಟ
ರೋಹಿತ್, ವಿರಾಟ್​ ಇಲ್ದೇ ಇಂಗ್ಲೆಂಡ್ ಪ್ರವಾಸಕ್ಕೆ ಯಂಗ್ ಇಂಡಿಯಾ ಹಾರಿತ್ತು. ಬೂಮ್ರಾ ಕೇವಲ 3 ಪಂದ್ಯಗಳನ್ನಷ್ಟೇ ಆಡ್ತಾರೆ ಅನ್ನೋದು ಸ್ವತಃ ಸೆಲೆಕ್ಷನ್ ಕಮಿಟಿ ಹೇಳಿತ್ತು. ಹೀಗಾಗಿ ಯುವ ಪಡೆ ಆಂಗ್ಲರ ನಾಡಲ್ಲಿ ಫೈಪೋಟಿ ನೀಡುತ್ತಾ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿತ್ತು. ಛಲ ಬಿಡದ ಹೋರಾಟ ನಡೆಸಿದ ಟೀಮ್ ಇಂಡಿಯಾ, ಸರಣಿ ಸಮಬಲ ಮಾಡಿಕೊಳ್ತು. ಇದಕ್ಕೆ ಕಾರಣ ಟೀಮ್ ಇಂಡಿಯಾದ ಒಗ್ಗಟ್ಟಿನ ಹೋರಾಟ.
ಇದನ್ನೂ ಓದಿ: ಮತ್ತೆ ಟೀಂ ಇಂಡಿಯಾದಲ್ಲಿ ರೋಹಿತ್ ಕೊಹ್ಲಿ ಬಗ್ಗೆ ಮಾತುಕತೆ.. ಶೀಘ್ರದಲ್ಲೇ ಶಾಕಿಂಗ್ ನ್ಯೂಸ್​..?
ಇಂಡಿಯಾ ಬೊಂಬಾಟ್ ಬ್ಯಾಟಿಂಗ್
3809 ರನ್​.. 12 ಶತಕ.. ಇದು ಕೇವಲ ರನ್ಸ್​ ಅಲ್ಲ.. ಟೀಮ್ ಇಂಡಿಯಾ, ಇಂಗ್ಲೆಂಡ್​ನಲ್ಲಿ ಪರದಾಡುತ್ತೆ ಎಂದು ಭವಿಷ್ಯ ನುಡಿದವರಿಗೆ ನೀಡಿದ ತಿರುಗೇಟು. ಇಂಗ್ಲೆಂಡ್​​ನಂಥ ಬೌನ್ಸಿ ಹಾಗೂ ಸ್ವಿಂಗ್ ಕಂಡೀಷನ್ಸ್​ನಲ್ಲಿ ಇಷ್ಟು ರನ್ ಕಲೆಹಾಕುವುದು ಸುಲಭವಲ್ಲ. ಇದನ್ನು ಸಾಧ್ಯವಾಗಿಸಿದ್ದು ಟೀಮ್ ಇಂಡಿಯಾದ ಬ್ಯಾಟ್ಸ್​ಮನ್​​ಗಳು.
ಟೀಮ್ ಇಂಡಿಯಾ ಬ್ಯಾಟಿಂಗ್
ಈ ಸರಣಿಯಲ್ಲಿ ರನ್ ಹೊಳೆ ಅರಿಸಿದ ಶುಭ್​ಮನ್ ಗಿಲ್, 4 ಶತಕ ಒಳಗೊಂಡ 754 ರನ್ ಕೊಳ್ಳೆ ಹೊಡೆದ್ರೆ. ಆರಂಭಿಕನಾಗಿ ಕನ್ನಡಿಗ ಕೆ.ಎಲ್.ರಾಹುಲ್, 2 ಶತಕ ಒಳಗೊಂಡ 532 ರನ್​ ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದ್ರು. ಜಡೇಜಾ 1 ಶತಕ, 5 ಅರ್ಧಶತಕದೊಂದಿಗೆ 516 ರನ್​ಗಳ ಕಾಣಿಕೆ ನೀಡಿದ್ರು. ಇದು ತಂಡಕ್ಕೆ ಬಿಗ್ ಇಂಪ್ಯಾಕ್ಟ್​ ನೀಡ್ತು. ರಿಷಭ್ ಪಂತ್ ಕೌಂಟರ್ ಅಟ್ಯಾಕ್​​ನಿಂದ 2 ಶತಕ ಒಳಗೊಂಡ 479 ರನ್ ಗಳಿಸಿದ್ರೆ. ಜೈಸ್ವಾಲ್ ಸ್ಪೋಟಕ ಬ್ಯಾಟಿಂಗ್​ನಿಂದ 411 ರನ್​ ಕಲೆಹಾಕಿದರು.
ಇದನ್ನೂ ಓದಿ: ಇನ್ಮುಂದೆ IPL ಆಡುತ್ತೇನೆ ಎಂದು ಭಾವಿಸಬೇಡಿ.. ಫ್ಯಾನ್ಸ್​ಗೆ ಶಾಕಿಂಗ್ ಹೇಳಿಕೆ ಕೊಟ್ಟ ಎಂ.ಎಸ್ ಧೋನಿ!
ವಾಷಿಗ್ಟಂನ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ್ರು. ಒಟ್ಟಾರೆ ಈ ಸರಣಿಯಲ್ಲಿ 12 ವೈಯಕ್ತಿಕ ಶತಕ, 28 ಅರ್ಧಶತಕ, 11 ಶತಕಗಳ ಜೊತೆಯಾಟಗಳು, 470 ಬೌಂಡರಿಗಳು, ಇದು ಟೀಮ್ ಇಂಡಿಯಾ ಬ್ಯಾಟರ್​​ಗಳ ಗುಣಮಟ್ಟದ ಆಟಕ್ಕಿಡಿದ ಕೈಗನ್ನಡಿಯಾಗಿದೆ.
ಟೀಮ್ ಇಂಡಿಯಾದ ಬ್ಯಾಟಿಂಗ್ ಮಾತ್ರವಲ್ಲ. ಬೌಲಿಂಗ್ ಅಟ್ಯಾಕ್ ಸಹ ದಿಗ್ಗಜರ ಕನಸು ಸುಳ್ಳಾಗಿಸಿತ್ತು. ಬೂಮ್ರಾ ಹೊರತಾದ ಬೌಲಿಂಗ್ ಟೊಳ್ಳು ಎಂದವರಿಗೆ ಗೆಲುವಿನ ಉತ್ತರ ನೀಡಿದ್ರು.. ಬೂಮ್ರಾ ಇಲ್ಲದೆಯೇ ಪಂದ್ಯ ಗೆದ್ದು ವಿಶ್ವಕ್ಕೆ ಸಂದೇಶ ಸಾರಿತ್ತು. ಸಾಧ್ಯವಾಗಿಸಿದ್ದು ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ ಕೆಚ್ಚೆದೆಯ ಹೋರಾಟ. ಇದೊಂದು ಪಂದ್ಯ ಮಾತ್ರವಲ್ಲ ಇಡೀ ಸರಣಿಯಲ್ಲಿ ಇದೇ ಹಸಿವಿತ್ತು.
ಟೀಮ್ ಇಂಡಿಯಾ ಬೌಲರ್ಸ್
ಸಿರಾಜ್, 5 ಪಂದ್ಯಗಳಿಂದ 23 ವಿಕೆಟ್ ಬೇಟೆಯಾಡಿದ್ರೆ, ಬೂಮ್ರಾ 3 ಪಂದ್ಯಗಳಿಂದ 14 ವಿಕೆಟ್ ಉರುಳಿಸಿದ್ರು. ಪ್ರಸಿದ್ದ್​ ಕೃಷ್ಣ ಓವವಲ್​​ನ ಡು ಆರ್​ ಡೈ ಮ್ಯಾಚ್​ನಲ್ಲಿ 8 ವಿಕೆಟ್ ಸಹಿತ 14 ವಿಕೆಟ್ ಉರುಳಿಸಿದ್ರೆ. ಆಕಾಶ್ ದೀಪ್​ 3 ಪಂದ್ಯಗಳಿಂದ 13 ವಿಕೆಟ್ ಉರುಳಿಸಿದ ಇಂಪ್ಯಾಕ್ಟ್​ ಫುಲ್ ಪರ್ಫಾಮೆನ್ಸ್​ ನೀಡಿದ್ರು.
ಒಗ್ಗಟ್ಟಿನಲ್ಲಿ ಬಲ..
ಒಗ್ಗಟ್ಟಿನ ಬಲ.. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​ ಇಂಗ್ಲೆಂಡ್ ಸರಣಿ ಅನ್ನೊದ್ರಲ್ಲಿ ಡೌಟಿಲ್ಲ. ಗೆಲುವಿಗಾಗಿ ಟೀಮ್ ಇಂಡಿಯಾ ಒಂದಿಬ್ಬರನ್ನೇ ನಂಬಿಕೊಳ್ಳಲಿಲ್ಲ. ಪ್ರತಿ ಮ್ಯಾಚ್​​ನಲ್ಲಿ ಬ್ಯಾಟರ್​​, ಬೌಲರ್​​ಗಳ ಒಗ್ಗಟ್ಟಿನ ಆಟ ಇತ್ತು. ಪ್ರತಿ ಹಂತದಲ್ಲಿ ಛಲ ಬಿಡದ ಹೋರಾಟದ ನಡುವೆ ಕಂಪ್ಲೀಟ್, ಟೀಮ್​ ಪರ್ಫಾಮೆನ್ಸ್ ಇತ್ತು. ಸ್ಟಾರ್​ ಆಟಗಾರರಲ್ಲ. ಒಗ್ಗಟ್ಟಿನಲ್ಲಿ ಬಲವಿದೆ ಎಂಬುವುದನ್ನು ನಿರೂಪಿಸಿತು. ಯಂಗ್ ಇಂಡಿಯಾ ಪವರ್ ತೋರಿಸಿದ ಟೀಮ್ ಇಂಡಿಯಾ, ವಿಶ್ವ ಕ್ರಿಕೆಟ್ ಲೋಕಕ್ಕೆ ಕೇವಲ ನೀಡಿದ್ದು ಗೆಲುವಿನ ಸಂದೇಶವಲ್ಲ. ಎಚ್ಚರಿಕೆ ಸಂದೇಶವಾಗಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us