/newsfirstlive-kannada/media/media_files/2025/08/07/virat-kohli-rohit-sharma-2025-08-07-18-20-17.jpg)
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ Photograph: (ಬಿಸಿಸಿಐ)
ಇಂಡೋ-ಇಂಗ್ಲೆಂಡ್ ಟೆಸ್ಟ್ ಸರಣಿ ಅಂತ್ಯ ಕಂಡಿದೆ. ಕೊನೆಯ ಟೆಸ್ಟ್ನಲ್ಲಿ ರೋಚಕ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಸರಣಿ ಸಮಬಲ ಸಾಧಿಸಿ ಇಂಗ್ಲೆಂಡ್ ಟಾಟಾ ಹೇಳಿದೆ. ಐತಿಹಾಸಿಕ ಸಾಧನೆ ಮಾಡಿದ ಯಂಗ್ ಇಂಡಿಯಾ ಭಾರತದ ನೆಲದಲ್ಲಿ ಲ್ಯಾಂಡ್ ಆಗೋಕೆ ಮುನ್ನವೇ ಬಿಸಿಸಿಐ ವಲಯದಲ್ಲಿ ಬೆಳವಣಿಗೆಗಳು ಗರಿಗೆದರಿವೆ. ಸೀನಿಯರ್ಸ್ ಭವಿಷ್ಯ ಈಗ ಅಡಕತ್ತರಿಗೆ ಸಿಲುಕಿದೆ.
2027ರ ಏಕದಿನ ವಿಶ್ವಕಪ್ಗೆ ಸಿದ್ಧತೆ ಶುರು
ಇಂಗ್ಲೆಂಡ್ ಪ್ರವಾಸದಲ್ಲಿ ಯಂಗ್ ಇಂಡಿಯಾಗೆ ಸಕ್ಸಸ್ ಸಿಕ್ಕ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಸೀನಿಯರ್ಗಳ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ಟೆಸ್ಟ್ನಂತೆ ಏಕದಿನ ಫಾರ್ಮೆಟ್ಗೂ ಯುವ ತಂಡ ಕಟ್ಟುವ ಬಗ್ಗೆ ಚರ್ಚೆಗಳು ಶುರುವಾಗಿವೆ. ಇನ್ನೆರಡು ವರ್ಷಗಳಲ್ಲಿ ಮಹತ್ವದ ಏಕದಿನ ವಿಶ್ವಕಪ್ ಟೂರ್ನಿಯಿದೆ. 2027ರ ಟೂರ್ನಿಗೆ ಸಿದ್ಧತೆಯ ದೃಷ್ಟಿಯಿಂದ ಈಗಿನಿಂದಲೇ ಈಗಿನಿಂದಲೇ ಕೋರ್ ಟೀಮ್ ಕಟ್ಟುವ ಪ್ರಯತ್ನಗಳು ಆರಂಭವಾಗಿವೆ. ಹೀಗಾಗಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಭವಿಷ್ಯದ ಚರ್ಚೆ ಎದ್ದಿದೆ.
ಬಿಸಿಸಿಐ ಕಚೇರಿಯಲ್ಲಿ ಶೀಘ್ರದಲ್ಲೇ ಮೀಟಿಂಗ್
ಇಂಗ್ಲೆಂಡ್ನಿಂದ ಟೀಮ್ ಮ್ಯಾನೇಜ್ಮೆಂಟ್ ವಾಪಾಸ್ಸಾದ ಬಳಿಕ ಬಿಸಿಸಿಐ ಕಚೇರಿಯಲ್ಲಿ ಸಭೆಯೊಂದು ನಡೆಯಲಿದೆ ಅನ್ನೋದು ಸದ್ಯದ ಮಾಹಿತಿ. ಸೆಲೆಕ್ಷನ್ ಕಮಿಟಿ ಚೇರ್ಮನ್ ಅಜಿತ್ ಅಗರ್ಕರ್, ಹೆಡ್ ಕೋಚ್ ಗೌತಮ್ ಗಂಭೀರ್ ಬಾಸ್ಗಳ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇಂಗ್ಲೆಂಡ್ ಪ್ರವಾಸದ ಬಗ್ಗೆ ರಿವ್ಯೂ ಜೊತೆಗೆ ಮುಂದಿನ ಏಕದಿನ ವಿಶ್ವಕಪ್ಗೆ ಸಿದ್ಧತೆಯೂ ಕೂಡ ಸಭೆಯ ಅಜೆಂಡಾ ಆಗಿದೆ. ಇದ್ರಲ್ಲೇ ರೋಹಿತ್, ಕೊಹ್ಲಿ ಭವಿಷ್ಯವೂ ಚರ್ಚೆಯಾಗಲಿದೆ.
ಇದನ್ನೂ ಓದಿ: ಇನ್ಮುಂದೆ IPL ಆಡುತ್ತೇನೆ ಎಂದು ಭಾವಿಸಬೇಡಿ.. ಫ್ಯಾನ್ಸ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಎಂ.ಎಸ್ ಧೋನಿ!
/filters:format(webp)/newsfirstlive-kannada/media/media_files/2025/08/07/virat-kohli-rohit-sharma-1-2025-08-07-18-25-55.jpg)
‘ಈ ಬಗ್ಗೆ ಶೀಘ್ರದಲ್ಲೇ ಚರ್ಚೆಯಾಗಲಿದೆ’
ಹೌದು.! ಈ ಬಗ್ಗೆ ಶೀಘ್ರದಲ್ಲೇ ಚರ್ಚೆಯಾಗಲಿದೆ. ಮುಂದಿನ ವಿಶ್ವಕಪ್ಗೆ ಇನ್ನೂ 2 ವರ್ಷಗಳಿವೆ. ಕೊಹ್ಲಿ ಮತ್ತು ರೋಹಿತ್ ವಯಸ್ಸು ಆಗ 40ರ ಹತ್ತಿರ ಇರಲಿದೆ. ಹೀಗಾಗಿ ಪ್ರಮುಖ ಟೂರ್ನಿಗೂ ಮುನ್ನ ಸ್ಪಷ್ಟವಾದ ಯೋಜನೆ ಬೇಕಿದೆ. 2011ರಲ್ಲಿ ನಾವು ಕೊನೆಯದಾಗಿ ಗೆದ್ದಿದ್ದು. ಕೆಲವು ಯುವ ಆಟಗಾರರನ್ನ ಆಡಿಸಬೇಕಿದೆ-BCCI ಅಧಿಕಾರಿ
ರೋಹಿತ್ಗೆ ಕೊಕ್.. ಏಕದಿನಕ್ಕೂ ಗಿಲ್ ನಾಯಕ..?
ಮೊದಲನೇಯದಾಗಿ ಬಿಸಿಸಿಐ ವಲಯದಲ್ಲಿ ನಡೀತಾ ಇರೋ ಮೊದಲ ಚರ್ಚೆಯೇ ನಾಯಕತ್ವದ ಬದಲಾವಣೆ. 2027ರ ಏಕದಿನ ವಿಶ್ವಕಪ್ ಗುರಿಯಾಗಿಸಿಕೊಂಡಿರೋ ಬಿಸಿಸಿಐ ಬಾಸ್ಗಳು ಯುವ ನಾಯಕನನ್ನ ನೇಮಿಸೋ ಲೆಕ್ಕಾಚಾರದಲ್ಲಿದ್ದಾರೆ. ಟೆಸ್ಟ್ ಕ್ಯಾಪ್ಟನ್ ಆಗಿ ಸಕ್ಸಸ್ ಕಂಡಿರೋ ಶುಭ್ಮನ್ ಗಿಲ್ಗೆ ಪಟ್ಟ ಕಟ್ಟೋ ಬಗ್ಗೆ ಚರ್ಚೆ ನಡೆದಿದೆ. ಈಗಲೇ ಗಿಲ್ ಏಕದಿನ ನಾಯಕತ್ವ ನೀಡಿದ್ರೆ, 2027ರ ಏಕದಿನ ವಿಶ್ವಕಪ್ಗೂ ಮುನ್ನ ಪಳಗಲು ಸಹಾಯವಾಗಲಿದೆ. ಅನುಭವದ ಜೊತೆಗೆ ಟೀಮ್ ಬಿಲ್ಡ್ ಮಾಡಲು ಟೈಮ್ ಸಿಗುತ್ತೆ. ಹೀಗಾಗಿ ಬಿಸಿಸಿಐ ರೋಹಿತ್ನ ಕೆಳಗಿಳಿಸಿ ಗಿಲ್ಗೆ ನಾಯಕತ್ವ ನೀಡೋ ನಿರ್ಧಾರ ಮಾಡಿದೆ.
ಇದನ್ನೂ ಓದಿ: ಹೈದರಾಬಾದ್ ಸಂಸದನಿಗೆ ಬೌಲರ್ ಮೊಹಮ್ಮದ್ ಸಿರಾಜ್ ಕ್ಲಾಸಿ ಆನ್ಸರ್..?
ಏಕದಿನ ಫಾರ್ಮೆಟ್ನಿಂದಲೇ ರೋಹಿತ್ ಶರ್ಮಾ ಔಟ್?
ರೋಹಿತ್ ಶರ್ಮಾ ಟೀಮ್ ಇಂಡಿಯಾದ ಸಕ್ಸಸ್ ಫುಲ್ ಕ್ಯಾಪ್ಟನ್ ಅಂಡ್ ಓಪನರ್ ಅನ್ನೋದ್ರಲ್ಲಿ ಎರಡನೇ ಮಾತೇ ಇಲ್ಲ. ಮುಂದಿನ ಏಕದಿನ ವಿಶ್ವಕಪ್ ವೇಳೆಗೆ ರೋಹಿತ್ ಶರ್ಮಾ ವಯಸ್ಸು 40 ಆಗಿರುತ್ತೆ. ಫಿಟ್ನೆಸ್ ಕಾಯ್ದುಕೊಂಡು ಇಂಜುರಿ ಫ್ರೀ ಆಗಿರೋದು, ಅದರ ಜೊತೆಗೆ ಫಾರ್ಮ್ ಉಳಿಸಿಕೊಳ್ಳುವುದು ದೊಡ್ಡ ಚಾಲೆಂಜ್ ಆಗಲಿದೆ. ಯುವ ಪಡೆಯನ್ನ ಕಟ್ಟೋ ಲೆಕ್ಕಾಚಾರ ಹಾಕಿರೋ ಬಿಸಿಸಿಐ, ರೋಹಿತ್ನ ಉಳಿಸಿಕೊಳ್ಳೋದು ಅನುಮಾನವೇ.
ಇದನ್ನೂ ಓದಿ: RCB ಯಶ್ ದಯಾಳ್ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ನಿರ್ಧಾರ.
/filters:format(webp)/newsfirstlive-kannada/media/media_files/2025/08/07/virat-kohli-rohit-sharma-2-2025-08-07-18-26-21.jpg)
ಕಿಂಗ್ ವಿರಾಟ್ ಕೊಹ್ಲಿ ಸ್ಥಾನಕ್ಕೂ ಬಂದಿದೆ ಕಂಟಕ..!
ರೋಹಿತ್ ಶರ್ಮಾ ಜೊತೆಗೆ ವಿರಾಟ್ ಕೊಹ್ಲಿ ಸ್ಥಾನಕ್ಕೂ ಸಮಸ್ಯೆ ಎದುರಾಗಿದೆ. ರೋಹಿತ್ಗಿಂತ ಕೊಹ್ಲಿ ಫಿಟ್ & ಫೈನ್ ಆಗಿದ್ರೂ ಕೊಹ್ಲಿಯ ಫಾರ್ಮ್ ಬಗ್ಗೆ ಪ್ರಶ್ನೆಯಿದೆ. ಕೊಹ್ಲಿಗೀಗ 36 ವರ್ಷ. 2027 ವಿಶ್ವಕಪ್ ವೇಳೆಗೆ ವಯಸ್ಸು 36 ಆಗಲಿದೆ. ಇನ್ನು, ಟೆಸ್ಟ್, ಟಿ20ಯಿಂದ ದೂರವಾಗಿರೋ ಕೊಹ್ಲಿ, ಏಕದಿನಕ್ಕೆ ಮಾತ್ರ ಸೀಮಿತವಾಗಿದ್ದು ವರ್ಷದಲ್ಲಿ ಕೆಲವೇ ಕೆಲವು ಪಂದ್ಯವನ್ನಾಡ್ತಾರೆ. ಮೈದಾನಕ್ಕಿಂತ ಆಫ್ ಫೀಲ್ಡ್ನಲ್ಲಿ ಹೆಚ್ಚು ಉಳಿಯೋ ಕೊಹ್ಲಿ ಬ್ಯಾಟಿಂಗ್ ಫಾರ್ಮ್ ಹೇಗೆ ಕಾಯ್ದುಕೊಳ್ತಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ, ಇಂಗ್ಲೆಂಡ್ ಪ್ರವಾಸ ಅಂತ್ಯದ ಬೆನ್ನಲ್ಲೇ ಬಿಸಿಸಿಐ ಬಾಸ್ಗಳು ಮಹತ್ವದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಕೊಹ್ಲಿ, ರೋಹಿತ್ ಭವಿಷ್ಯ ಏನಾಗಲಿದೆ ಅನ್ನೋದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ಮೀಟಿಂಗ್ ಮುಗಿಯೋವರೆಗೂ ಕಾಯಬೇಕಷ್ಟೇ.!
ಇದನ್ನೂ ಓದಿ: ಅದೊಂದು ಕ್ಯಾಚ್ ಕಂಗೆಡಿಸಿಬಿಟ್ಟಿತ್ತು.. ಕೊನೆಯಲ್ಲಿ ರಿಯಲ್ ವಾರಿಯರ್ ಎಂದು ಸಿರಾಜ್ ನಿರೂಪಿಸಿದ್ದೇಗೆ?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ