/newsfirstlive-kannada/media/media_files/2025/08/04/mohammed-siraj-catch-2025-08-04-07-11-18.jpg)
ಒಂದು ಕ್ಯಾಚ್ ಮೊಹಮ್ಮದ್ ಸಿರಾಜ್ ಕೆಂಗ್ಗಣ್ಣಿಗೆ ಗುರಿಯಾಗಿಸಿದೆ. ಟೀಮ್ ಇಂಡಿಯಾ ಅಭಿಮಾನಿಗಳ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಈ ಒಂದೇ ಒಂದು ಮಹಾ ಯಡವಟ್ಟಿನಿಂದ ಟೀಕಾಕಾರರಿಗೆ ಆಹಾರವಾಗಿದ್ದಾರೆ. ಟೀಮ್ ಇಂಡಿಯಾಗೆ ಅಲ್ಲ. ಅಭಿಮಾನಿಗಳ ಪಾಲಿನ ವಿಲನ್ ಆಗಿದ್ದಾರೆ. ಹಾಗಿದ್ದರೆ ನಿಜಕ್ಕೂ ಸಿರಾಜ್ ವಿಲನ್ನಾ? ಈ ಕುರಿತ ಸ್ಟೋರಿ ಇಲ್ಲಿದೆ.
ಸಿರಾಜ್ ಒಬ್ಬ ವಾರಿಯರ್. ನಿಜವಾದ ಹೋರಾಟಗಾರ. ಅವರಂಥ ವ್ಯಕಿತ್ವ ಹೊಂದಿರುವ ಆಟಗಾರ ತಂಡದಲ್ಲಿರಲು ಎಲ್ಲರೂ ಬಯಸುತ್ತಾರೆ. ಭಾರತಕ್ಕಾಗಿ ತಮ್ಮ ಸರ್ವಸ್ವವನ್ನೂ ನೀಡ್ತಾರೆ. ಅದಕ್ಕಾಗಿ ಅವರಿಗೆ ಶ್ರೇಯ ಸಲ್ಲಬೇಕು. ಕೆಲವೊಮ್ಮೆ ನಕಲಿ ಕೋಪ ಪ್ರದರ್ಶಿಸುತ್ತಾರೆ. ಅದು ನಮಗೆ ಅರ್ಥವಾಗುತ್ತದೆ. ನಿಜವಾಗಿಯೂ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದಾರೆ. ಕಠಿಣ ಪ್ರಯತ್ನ ಮಾಡುತ್ತಾರೆ. ಸಿರಾಜ್ ಕೌಶಲ್ಯಯುತ ಬೌಲರ್ ಆಗಿದ್ದು, ಅದರಿಂದಲೇ ಅಷ್ಟೊಂದು ವಿಕೆಟ್ ಗಳಿಸಲು ಸಾಧ್ಯವಾಗಿದೆ.
ಇದನ್ನೂ ಓದಿ: RCB ಯಶ್ ದಯಾಳ್ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ನಿರ್ಧಾರ.. ಬೌಲರ್ಗೆ ಢವಢವ!
ಸಿರಾಜ್ ವಿಲನ್ ಅಲ್ಲ.. ದಿ ರಿಯಲ್ ವಾರಿಯರ್..!
ಸಿರಾಜ್ ಕ್ಯಾಚ್ ಮಿಸ್ ಮಾಡಿದ್ಧಾರೆ. ಇದಕ್ಕೆ ಟೀಮ್ ಇಂಡಿಯಾ ಬೆಲೆ ತೆತ್ತಿದೆ ನಿಜ. ಇಡೀ ಸರಣಿಯಲ್ಲಿ ವಾರಿಯರ್ನಂತೆ ಹೋರಾಡಿದ್ದು. ದಣಿಯರಿಯದಂತೆ ಹೋರಾಡಿದ್ದು ಒನ್ ಆ್ಯಂಡ್ ಒನ್ಲಿ ಸಿರಾಜ್. ಇದು ಜಸ್ಟ್ ಜೋ ರೂಟ್ ಹೇಳಿಕೆಯನ್ನು ಉಲ್ಲೇಖಿಸ್ತಿಲ್ಲ. ಇಂಗ್ಲೆಂಡ್ ಸರಣಿಯುದ್ದಕ್ಕೂ ಮೊಹಮ್ಮದ್ ಸಿರಾಜ್, ಆನ್ಫೀಲ್ಡ್ನಲ್ಲಿ ತೋರಿದ ಹೋರಾಟದ ಗುಣವೇ ಸಿರಾಜ್ ದಿ ವಾರಿಯರ್ ಎಂಬ ಕಥೆ ಹೇಳ್ತಿದೆ.
ದಣಿವರಿಯದ ಲೀಡರ್ ಸಿರಾಜ್
ಇಂಗ್ಲೆಂಡ್ ಪ್ರವಾಸದಲ್ಲಿ ಪ್ರತಿ ಬೌಲರ್ಗೆ ರೆಸ್ಟ್ ಸಿಕ್ಕಿದೆ. ಪ್ರಮುಖವಾಗಿ ತಂಡದಲ್ಲಿರುವ ಪ್ರತಿ ವೇಗಿ 2 ಪಂದ್ಯಗಳ ರೆಸ್ಟ್ ಪಡೆದಿದ್ದಾರೆ. ಒಂದೇ ಒಂದು ಪಂದ್ಯವನ್ನು ಮಿಸ್ ಮಾಡಿಕೊಳ್ಳದೆ, ಟೀಮ್ ಇಂಡಿಯಾ ಗೆಲುವಿಗಾಗಿ ಹೋರಾಟ ನಡೆಸಿದ್ದು ಒನ್ ಅಂಡ್ ಒನ್ಲಿ ಸಿರಾಜ್. ಬೂಮ್ರಾ ಅಲಭ್ಯತೆಯಲ್ಲಿ ಬೌಲಿಂಗ್ ಡಿಪಾರ್ಟ್ಮೆಂಟ್ನ ಮುನ್ನಡೆಸಿದ ಸಿರಾಜ್, ತಂಡಕ್ಕಾಗಿ ಎಲ್ಲವನ್ನೂ ಮಾಡಿದ ಲೀಡರ್. ಇದನ್ನ ಜಸ್ಟ್ ನಾವು ಹೇಳ್ತಿಲ್ಲ. ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಹೇಳ್ತಿದ್ದಾರೆ.
ಇದನ್ನೂ ಓದಿ: Poora Khol Diye Pasha; ಹೈದರಾಬಾದ್ ಸಂಸದನಿಗೆ ಬೌಲರ್ ಮೊಹಮ್ಮದ್ ಸಿರಾಜ್ ಕ್ಲಾಸಿ ಆನ್ಸರ್..?
ಸಿರಾಜ್‌ಗೆ ಮನ್ನಣೆ ಸಿಗುತ್ತಿರುವುದಕ್ಕೆ ಸಂತಸವಾಗಿದೆ. ಸಿರಾಜ್ ಡ್ರೆಸ್ಸಿಂಗ್ ರೂಮ್ನ ಚೇಂಜ್ ಮಾಡುವ ವ್ಯಕ್ತಿ. ಅವರೊಬ್ಬ ಸಹಜ ನಾಯಕ ಎಂದು ನಾನು ಭಾವಿಸುತ್ತೇನೆ. ಹೆಚ್ಚು ಮಾತನಾಡಲ್ಲ. ಆಟದಿಂದಲೇ ಎಲ್ಲವನ್ನು ತೋರಿಸ್ತಾರೆ. ಈ ಸರಣಿಯಲ್ಲಿ ಬಹಳಷ್ಟು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಏನಾದರೂ ಮಾಡಬೇಕಾದ ಅವಶ್ಯಕತೆ ಬಂದಾಗ ಮಾಡಿದ್ದಾರೆ. ಹೆಚ್ಚುವರಿ ಎರಡ್ಮೂರು ಓವರ್ ಬೌಲಿಂಗ್ ಮಾಡಿ ಅವಕಾಶ ಸೃಷ್ಟಿಸಿದ್ದಾರೆ. ಆತನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿರುವುದು ನೋಡಲು ಸಂತಸವಾಗುತ್ತೆ.
ಸಿರಾಜ್ ಕೇವಲ ಪಂದ್ಯಗಳನ್ನಷ್ಟೇ ಆಡಲಿಲ್ಲ. ಟೀಮ್ ಇಂಡಿಯಾ ಪರ ಇಂಪ್ಯಾಕ್ಟ್ ಫುಲ್ ಪ್ರದರ್ಶನ ನೀಡಿದರು. ಓರ್ವ ಲೀಡರ್ನಂತೆ ಪ್ರತಿ ಸಲ ತಂಡದ ಸಂಕಷ್ಟದಲ್ಲಿ ನೆರವಿಗೆ ಬರ್ತಿದ್ದ ಸಿರಾಜ್, ಈ ಸರಣಿಯಲ್ಲಿ ಬರೋಬ್ಬರಿನ 185.1 ಓವರ್ ಬೌಲಿಂಗ್ ಮಾಡಿದ್ದಾರೆ. 1111 ಎಸೆತ ಎಸೆದಿರುವ ಸಿರಾಜ್, ಸರಣಿಯೊಂದರಲ್ಲಿ ಸಾವಿರಕ್ಕೂ ಅಧಿಕ ಎಸೆತಗಳನ್ನು ಎಸೆದ ಬೌಲರ್ ಎಂಬ ಹೆಗ್ಗಳಿಕೆಗೂ ಭಾಜನರಾಗಿದ್ದಾರೆ. ಸರಣಿಯಲ್ಲಿ ಬರೋಬ್ಬರಿ 22 ವಿಕೆಟ್ ಬೇಟೆಯಾಡಿದ್ದಾರೆ. ಸಿರಾಜ್ ಇಷ್ಟೆಲ್ಲಾ ಓವರ್ ಬೌಲಿಂಗ್ ಮಾಡಿದ್ರು. ಸರಣಿಯ ಅಂತ್ಯದ ತನಕ ಅದೇ ಫೈರ್, ಅದೇ ಎನರ್ಜಿಯನ್ನೇ ಹೊಂದಿದ್ದು ಸುಳ್ಳಲ್ಲ.
ಇದನ್ನೂ ಓದಿ: ಇನ್ಮುಂದೆ IPL ಆಡುತ್ತೇನೆ ಎಂದು ಭಾವಿಸಬೇಡಿ.. ಫ್ಯಾನ್ಸ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಎಂ.ಎಸ್ ಧೋನಿ!
ಇಡೀ ಸರಣಿಯುದ್ದಕ್ಕೆ ಸಿರಾಜ್, ಸಿಡಿಗುಂಡಿನ ದಾಳಿಯನ್ನೇ ಸಂಘಟಿಸಿದರು. ಗೆಲುವಿಗಾಗಿ ಹೋರಾಡಿದ್ದರು.ಇಂಗ್ಲೆಂಡ್ ಎದುರಿನ ಇದೊಂದು ಸರಣಿಯಲ್ಲೇ ಅಲ್ಲ. ಈ ಹಿಂದಿನ ಆಸ್ಟ್ರೇಲಿಯಾ ಪ್ರವಾಸದಲ್ಲೂ ಸಿರಾಜ್ ಕೆಚ್ಚೆದೆಯ ಹೋರಾಟ ನಡೆಸಿದ್ರು. 20 ವಿಕೆಟ್ ಪಡೆದು ಮಿಂಚಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ