/newsfirstlive-kannada/media/media_files/2026/01/25/belagavi-400-crore-robbery-1-2026-01-25-13-18-03.jpg)
ಬೆಳಗಾವಿ: ಇಡೀ ದೇಶಾದ್ಯಂತ ಸಂಚಲನ ಮೂಡಿಸಿರುವ 400 ಕೋಟಿ ರೂಪಾಯಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಕೆ. ರಾಮರಾಜನ್ ಇಂದು ಮಹತ್ವದ ಸುದ್ದಿಗೋಷ್ಠಿ ನಡೆಸಿದರು. ಈ ದರೋಡೆ ಪ್ರಕರಣದ ಮೂಲ ಮತ್ತು ಸದ್ಯ ನಡೆಯುತ್ತಿರುವ ತನಿಖೆಯ ಹಂತಗಳ ಬಗ್ಗೆ ಅವರು ಮಾಹಿತಿಗಳನ್ನು ಹಂಚಿಕೊಂಡರು.
ನಾಸಿಕ್ ಎಸ್ಪಿಯಿಂದ ಬಂದ ಪತ್ರದಲ್ಲೇನಿತ್ತು?
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಬಳಿ 400 ಕೋಟಿ ರೂಪಾಯಿ ರಾಬರಿ ನಡೆದಿರುವ ಬಗ್ಗೆ ಮಾಹಿತಿ ನೀಡಿ ನಾಸಿಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜನವರಿ 6 ರಂದು ಬೆಳಗಾವಿ ಎಸ್ಪಿಗೆ ಪತ್ರ ಬರೆದಿದ್ದರು. ಈ ಪತ್ರದ ಆಧಾರದ ಮೇಲೆ ಬೆಳಗಾವಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ.
ಕಿಡ್ನ್ಯಾಪ್‌ನಿಂದ ಹೊರಬಂತು ದರೋಡೆ ರಹಸ್ಯ
ಎಸ್ಪಿ ರಾಮರಾಜನ್ ಅವರು ನೀಡಿದ ಮಾಹಿತಿ ಪ್ರಕಾರ, ಈ ಪ್ರಕರಣ ಬೆಳಕಿಗೆ ಬಂದಿದ್ದು ಒಂದು ಅಪಹರಣ ಪ್ರಕರಣದಿಂದ. 2025ರ ಅಕ್ಟೋಬರ್ 22 ರಂದು ಸಂದೀಪ್ ದತ್ತಾ ಪಾಟೀಲ್ ಎಂಬುವವರನ್ನು ವಿಶಾಲ್ ನಾಯ್ಡು ಮತ್ತು ಸಹಚರರು ಫಾರ್ಚುನರ್ ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದರು. ಈ ಕಿಡ್ನ್ಯಾಪ್‌ಗೆ ಮಾಸ್ಟರ್ ಮೈಂಡ್ ವಿರಾಟ್ ಗಾಂಧಿ ಎನ್ನಲಾಗಿದೆ.
ಕಿಡ್ನ್ಯಾಪ್ ಮಾಡಿದ ಬಳಿಕ, ‘ನೀನೇ ಆ 400 ಕೋಟಿ ರೂಪಾಯಿ ರಾಬರಿ ಮಾಡಿದ್ದೀಯಾ’ ಎಂದು ಸಂದೀಪ್ ಪಾಟೀಲ್ ಮೇಲೆ ಹಲ್ಲೆ ನಡೆಸಲಾಗಿತ್ತು. ನಂತರ ಪೊಲೀಸರ ವಿಚಾರಣೆ ವೇಳೆ ಸಂದೀಪ್ ಪಾಟೀಲ್, "ನಾನು ರಾಬರಿ ಮಾಡಿಲ್ಲ, ಆದರೆ 400 ಕೋಟಿ ರಾಬರಿ ಆಗಿದೆ ಎಂದು ಕಿಡ್ನ್ಯಾಪರ್ಸ್ ಹೇಳುತ್ತಿದ್ದರು ಎಂದು ಹೇಳಿಕೆ ನೀಡಿದ್ದಾನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪತ್ನಿ ಜೀವ ತೆಗೆದು ಸ್ವಿಮ್ಮಿಂಗ್ ಪೂಲ್​ಗೆ ಎಸೆದ ಆರೋಪ; ಇಬ್ಬರು ಮುದ್ದಾದ ಮಕ್ಕಳು ಅನಾಥ..!
/filters:format(webp)/newsfirstlive-kannada/media/media_files/2026/01/25/belagavi-robbery-2-2026-01-25-10-35-53.jpg)
ಬೆಳಗಾವಿ ಪೊಲೀಸರ ತಂಡ ನಾಸಿಕ್‌ಗೆ
ವಿಷಯ ತಿಳಿದ ತಕ್ಷಣ ಬೆಳಗಾವಿ ಎಸ್ಪಿಯವರು ಒಬ್ಬರು ಸಬ್ ಇನ್ಸ್​ಪೆಕ್ಟರ್ ಮತ್ತು ಮರಾಠಿ ಭಾಷೆ ಬಲ್ಲ ಮೂವರು ಪೊಲೀಸರ ತಂಡವನ್ನು ನಾಸಿಕ್‌ಗೆ ಕಳುಹಿಸಿದ್ದರು. ಜನವರಿ 21 ರಂದು ನಾಸಿಕ್ ತಲುಪಿದ ತಂಡವು ಅಲ್ಲಿನ ಎಸ್‌ಐಟಿ (SIT) ಅಧಿಕಾರಿಗಳನ್ನು ಭೇಟಿ ಮಾಡಿದೆ. ಆದರೆ, ಅಪಹರಣಕಾರರನ್ನು (Kidnappers) ವಿಚಾರಣೆ ನಡೆಸಲು ಮಹಾರಾಷ್ಟ್ರ ಪೊಲೀಸರು ಸದ್ಯಕ್ಕೆ ಅವಕಾಶ ನೀಡಿಲ್ಲ ಎಂದು ಎಸ್ಪಿ ತಿಳಿಸಿದರು.
ಪ್ರಮುಖ ಅಂಶಗಳು
- No Eye Witness:ಸಂದೀಪ್ ಪಾಟೀಲ್ ಈ ದರೋಡೆಯನ್ನು ಕಣ್ಣಾರೆ ಕಂಡಿಲ್ಲ. ಆತ ಕೇವಲ ಕಿಡ್ನ್ಯಾಪರ್ಸ್ ಹೇಳಿದ್ದನ್ನು ಪೊಲೀಸರಿಗೆ ತಿಳಿಸಿದ್ದಾನೆ. ಪ್ರಕರಣದ ‘ಐ ವಿಟ್ನೆಸ್’ ಅಥವಾ ದರೋಡೆಯಾದ ಮಾಲೀಕರು ಇನ್ನು ಮುಂದೆ ಬಂದಿಲ್ಲ.
- ಹಳೆಯ ನೋಟುಗಳು: ದರೋಡೆಯಾದ ಹಣವು ಹಿಂತೆಗೆದುಕೊಂಡಿರುವ ಹಳೆಯ 2000 ಮುಖಬೆಲೆಯ ನೋಟುಗಳು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
- ಮೂರು ರಾಜ್ಯಗಳ ನಂಟು: ದರೋಡೆ ನಡೆದಿದೆ ಎನ್ನಲಾದ ಚೋರ್ಲಾ ಘಾಟ್ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿಯಲ್ಲಿದೆ.
- ಕೇಸ್ ದಾಖಲು: ಸದ್ಯ ಮಹಾರಾಷ್ಟ್ರದಲ್ಲಿ 198 BNSS ಅಡಿ ಪ್ರಕರಣ ದಾಖಲಾಗಿದ್ದು, ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಅನುಬಂಧ ವೇದಿಕೆಯಲ್ಲಿ ಸಪ್ತಪದಿ ತುಳಿದು.. ಸಂಧ್ಯಾಗೆ 7 ಪ್ರಾಮೀಸ್ ಕೊಟ್ಟ ಉಗ್ರಂ ಮಂಜು..!
/filters:format(webp)/newsfirstlive-kannada/media/media_files/2026/01/25/belagavi-robbery-1-2026-01-25-10-34-33.jpg)
ಸಹಕಾರಕ್ಕೆ ಬೆಳಗಾವಿ ಪೊಲೀಸರು ಸಿದ್ಧ
ಈ ದರೋಡೆ ನಮ್ಮ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಯಾರಾದರೂ ದೂರು ನೀಡಿದರೆ ಅಥವಾ ಪ್ರತ್ಯಕ್ಷದರ್ಶಿಗಳು ಬಂದು ಸಾಕ್ಷ್ಯ ನೀಡಿದರೆ ನಾವು ತಕ್ಷಣವೇ ಕೇಸ್ ದಾಖಲಿಸಿ ತನಿಖೆ ಮಾಡುತ್ತೇವೆ. ಮಹಾರಾಷ್ಟ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ ಎಂದು ಎಸ್ಪಿ ಕೆ. ರಾಮರಾಜನ್ ಸ್ಪಷ್ಟಪಡಿಸಿದ್ದಾರೆ. ಚೆಕ್ ಪೋಸ್ಟ್ ಗಳಲ್ಲಿ ಸಿಸಿಟಿವಿ ಅಳವಡಿಕೆ ಹಾಗೂ ಭದ್ರತೆಯ ಬಗ್ಗೆಯೂ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಇದನ್ನೂ ಓದಿ: ಇಂದೇ T20 ಸರಣಿ ಗೆಲ್ಲುತ್ತಾ ಟೀಮ್ ಇಂಡಿಯಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us