ಅನುಬಂಧ ವೇದಿಕೆಯಲ್ಲಿ ಸಪ್ತಪದಿ ತುಳಿದು.. ಸಂಧ್ಯಾಗೆ 7 ಪ್ರಾಮೀಸ್ ಕೊಟ್ಟ ಉಗ್ರಂ ಮಂಜು..!

ಜನವರಿ 23 ರಂದು ಉಗ್ರಂ ಮಂಜು ಅವರು ಸಾಯಿ ಸಂಧ್ಯಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಗುರು, ಹಿರಿಯ ಆಶೀರ್ವಾದದೊಂದಿಗೆ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

author-image
Ganesh Kerekuli
ugram Manju (4)
Advertisment

ಜನವರಿ 23 ರಂದು ಉಗ್ರಂ ಮಂಜು ಅವರು ಸಾಯಿ ಸಂಧ್ಯಾ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಗುರು, ಹಿರಿಯ ಆಶೀರ್ವಾದದೊಂದಿಗೆ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

ಇನ್ನು, ನಿನ್ನೆ ಕಲರ್ಸ್ ಕನ್ನಡದ ಅನುಬಂಧ ವೇದಿಕೆಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಜರುಗಿದೆ. ಮದುವೆಗೂ ಮುಂಚೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಂಜು ಮತ್ತು ಸಂಧ್ಯಾಗೆ ಕಲರ್ಸ್ ಕನ್ನಡ ಮರೆಯಲಾಗದ ಗಿಫ್ಟ್ ನೀಡಿದೆ. 

ಇದನ್ನೂ ಓದಿ: ಧರ್ಮಸ್ಥಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಉಗ್ರಂ ಮಂಜು

ugram Manju (2)

ಇಬ್ಬರೂ ವೇದಿಕೆಯಲ್ಲಿ ಹಾರ ಮತ್ತು ರಿಂಗ್ ಬದಲಾಯಿಸಿಕೊಂಡರು. ಬಳಿಕ ಇಬ್ಬರು ತಮ್ಮ ಸಂತೋಷದ ಕ್ಷಣವನ್ನು ಹಂಚಿಕೊಂಡರು. ಈ ವೇಳೆ ಮಾತನ್ನಾಡಿರುವ ಮಂಜು ಪತ್ನಿ ಸಂಧ್ಯಾ, ನಾವಿಬ್ಬರು ಮ್ಯೂಚುವಲ್ ಫ್ರೆಂಡ್ ಮೂಲಕ ಪರಿಚಯವಾದ್ವಿ. ಪರಿಚಯದ ಬಳಿಕ ಭೇಟಿಯಾದ್ವಿ. ನಂತರ ಲಾಂಗ್ ಡ್ರೈವ್​ಗೆ ಹೋದ್ವಿ. ಈ ವೇಳೆ ನನ್ನನ್ನು ಮದುವೆ ಆಗ್ತೀಯಾ ಎಂದು ಮಂಜು ಕೇಳಿದ್ದ. ಅದಕ್ಕೆ ನಾನು 15 ದಿನಗಳ ಕಾಲಾವಕಾಶ ಕೇಳಿದ್ದೆ ಎಂದಿದ್ದಾರೆ. 

ಇದನ್ನೂ ಓದಿ: ಉಗ್ರಂ ಮಂಜುಗೆ ಮದುವೆ ಸಂಭ್ರಮ.. ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ ಸ್ಟಾರ್‌..!

ugram Manju (5)

ಹೆಂಡ್ತಿಗೆ 7 ಪ್ರಾಮೀಸ್ ಮಾಡಿದ ಮಂಜಣ್ಣ..!

  • Promise 1: ಸಂಜೆ ಆದ್ರೆ ಬಾರ್​ಗೆ ಬಾಯ್​ ಬಾಯ್, ಸಂಧ್ಯಾಗೆ ಹಾಯ್ ಹಾಯ್
  • Promise 2: ತಪ್ಪು ನಿಂದೆ ಆಗಿದ್ದರೂ ಸಾರಿ ಮಾತ್ರ ನಂದೇ ಸಂಧ್ಯಾ
  • Promise 3: ಮಂಜು ಅಂದ್ರೆ ನಿಂಗೆ ಮಾತ್ರ ಚಿನ್ನ, ಮಿಕ್ಕಿದವ್ರಿಗೆಲ್ಲ ಅಣ್ಣ
  • Promise 4: ಬಿಗ್​ ಬಾಸ್​ನಲ್ಲಿ ನಾಯಕ, ಮನೆಯಲ್ಲಿ ಸಂಧ್ಯಾಗೆ ಸೇವಕ
  • Promise 5: ಕೇಳಿದಾಗೆಲ್ಲ ಮಾಡ್ತೀನಿ ಅಡುಗೆ, ಇದೇ ನಾನು ಕೊಡುವ ಕೊಡುಗೆ
  • Promise 6: ಕೈಯಲ್ಲಿ ಕಟ್ಟಿರೋ ವಾಚ್ ಯಾರದ್ದೇ ಆಗಿದ್ದರೂ ನನ್ನ ಟೈಮ್ ನಿಂದೇ
  • Promise 7: ಆಗಲ್ಲ ಪೋಲಿ, ಆದಷ್ಟು ಬೇಗ ಹಾಡೋಣ ಲಾಲಿ

ಇದನ್ನೂ ಓದಿ: ಬೈಕ್ ಟ್ಯಾಕ್ಸಿಗೆ ಅನುಮತಿ ಬೆನ್ನಲ್ಲೇ ವರಸೆ ಬದಲಿಸಿದ ಆಟೋ ಚಾಲಕರು.. ಸರ್ಕಾರಕ್ಕೆ ಹೊಸ ಟೆನ್ಷನ್..!

ugram Manju (3)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ugram Manju
Advertisment