/newsfirstlive-kannada/media/media_files/2026/01/25/ramanagara-3-2026-01-25-12-45-52.jpg)
ರಾಮನಗರ: ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಹಿಳೆಯೊಬ್ಬರ ಶವ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದು, ಪತಿಯೇ ಆಕೆಯನ್ನು ಕೊ* ಮಾಡಿ ಪೂಲ್‌ಗೆ ಎಸೆದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ತೋಟದ ಮನೆಯಲ್ಲಿ ಪತ್ತೆಯಾದ ಶವ
ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಬೆಟ್ಟೆಗೌಡನಪಾಳ್ಯ ಗ್ರಾಮದ ಹೊರವಲಯದ ತೋಟದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. 29 ವರ್ಷದ ಪ್ರತಿಭಾ ಸಾವನ್ನಪ್ಪಿದ ದುರ್ದೈವಿ. ಈ ಕುಟುಂಬವು ಕಳೆದ ಕೆಲವು ದಿನಗಳಿಂದ ಇದೇ ತೋಟದ ಮನೆಯಲ್ಲಿ ವಾಸವಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ:ಬೈಕ್ ಟ್ಯಾಕ್ಸಿಗೆ ಅನುಮತಿ ಬೆನ್ನಲ್ಲೇ ವರಸೆ ಬದಲಿಸಿದ ಆಟೋ ಚಾಲಕರು.. ಸರ್ಕಾರಕ್ಕೆ ಹೊಸ ಟೆನ್ಷನ್..!
/filters:format(webp)/newsfirstlive-kannada/media/media_files/2026/01/25/ramanagara-2-2026-01-25-12-47-43.jpg)
ಪತಿ ಬಾಬು ಮೇಲೆ ಕುಟುಂಬಸ್ಥರ ಅನುಮಾನ
ಮೃತ ಪ್ರತಿಭಾ ಅವರ ಕುಟುಂಬಸ್ಥರು ಪತಿ ಬಾಬು ಮೇಲೆ ನೇರವಾದ ಆರೋಪ ಮಾಡುತ್ತಿದ್ದಾರೆ. ಬಾಬು ನನ್ನ ಮಗಳನ್ನು ಕೊ* ಮಾಡಿ, ನಂತರ ಸಾಕ್ಷ್ಯ ನಾಶಪಡಿಸಲು ಸ್ವಿಮ್ಮಿಂಗ್ ಪೂಲ್‌ಗೆ ಎಸೆದಿದ್ದಾನೆ ಎಂದು ಪ್ರತಿಭಾ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಬಾಬುಗೆ ಪ್ರತಿಭಾ ಎರಡನೇ ಪತ್ನಿಯಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಪೊಲೀಸ್ ವಶದಲ್ಲಿ ಪತಿ
ಘಟನೆ ಸಂಭವಿಸಿದ ಕೂಡಲೇ ಸ್ಥಳಕ್ಕೆ ಕೋಡಿಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಮಹಿಳೆಯ ಪೋಷಕರ ದೂರಿನ ಅನ್ವಯ ಪತಿ ಬಾಬುನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಇದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ಕೊ*ಯೇ ಅಥವಾ ಆಕಸ್ಮಿಕವಾಗಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿದ್ದು ಸಾ* ಸಂಭವಿಸಿದೆಯೇ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಅಧಿಕೃತವಾಗಿ ತಿಳಿದುಬರಬೇಕಿದೆ. ಕೋಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅನುಬಂಧ ವೇದಿಕೆಯಲ್ಲಿ ಸಪ್ತಪದಿ ತುಳಿದು.. ಸಂಧ್ಯಾಗೆ 7 ಪ್ರಾಮೀಸ್ ಕೊಟ್ಟ ಉಗ್ರಂ ಮಂಜು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us