/newsfirstlive-kannada/media/media_files/2025/12/11/satish-jarakiholi-2025-12-11-09-31-20.jpg)
ಬೆಳಗಾವಿ: ಖರ್ಚಿ ಕಿತ್ತಾಟದ ಮಧ್ಯೆಯೇ ಬೆಳಗಾವಿಯಲ್ಲೂ ‘ಡಿನ್ನರ್ ಪಾಲಿಟಿಕ್ಸ್’ ಸದ್ದು ಜೋರಾಗಿದೆ. ಮಾಜಿ ಶಾಸಕ ಫಿರೋಜ್ ಸೇಠ್ ಮನೆಯಲ್ಲಿ ಅಹಿಂದ ನಾಯಕರ ಭೋಜನ ಕೂಟ ಆಯೋಜನೆ ಆಗಿತ್ತು.
ಬೆಳಗಾವಿಯ ಟಿವಿ ಸೆಂಟರ್‌ನಲ್ಲಿರುವ ಫಿರೋಜ್ ಸೇಠ್ ಮನೆಯಲ್ಲಿ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ ಖಾದರ್, ಸಚಿವರಾದ ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ರಹೀಮ್ ಖಾನ್, ಹೆಚ್.ಸಿ. ಮಹಾದೇವಪ್ಪ, ಭೈರತಿ ಸುರೇಶ್​ ಸೇರಿ ಹಲವು ನಾಯಕರು ಔತಣದಲ್ಲಿ ಭಾಗಿಯಾದ್ದಾರೆ. ತರಹೇವಾರಿ ಮೀನಿನ ಊಟ, ಮಟನ್ ಚಾಪ್ಸ್, ಮಟನ್ ಬಿರಿಯಾನಿ, ಚಿಕನ್ ಬಿರಿಯಾನಿ, ಮಟನ್ ಕೀಮಾ, ಸೇರಿ 30ಕ್ಕೂ ಅಧಿಕ ಖಾದ್ಯಗಳನ್ನ ಉಣಬಡಿಸಲಾಗಿದೆ.
ಇದನ್ನೂ ಓದಿ: ಅನುದಾನಕ್ಕಾಗಿ ಬೇಡಿಕೆಯಿಟ್ಟ ಶಾಸಕರು.. ಸಿಎಂ ಹೇಳಿದ ಕಿವಿ ಮಾತು ಏನು..?
ವಾಲ್ಮೀಕಿ ಶಾಸಕರ ಪ್ರತ್ಯೇಕ ಸಭೆ
ಒಂದ್ಕಡೆ ಡಿನ್ನರ್​​​ ಮೀಟಿಂಗ್​​​ಗಳು ನಡೀತಿದ್ರೆ, ಇನ್ನೊಂದ್ಕಡೆ ವಾಲ್ಮೀಕಿ ಶಾಸಕರ ಪ್ರತ್ಯೇಕ ಸಭೆ ನಡೆದಿದೆ. ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಬೆಳಗಾವಿ ನಗರದ ಖಾಸಗಿ ಹೋಟೆಲ್​ನಲ್ಲಿ ಮೀಟಿಂಗ್​​​ ಆಗಿದೆ. ವಾಲ್ಮೀಕಿ ಜಾತ್ರೆ, ಸಮಾಜದ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ಆಗಿದೆ. ಸಭೆಯಲ್ಲಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ಶಾಸಕರಾದ ಗಣೇಶ್, ಚಳ್ಳಕೆರೆ ರಘು, ಬಸನಗೌಡ ತುರ್ವಿಹಾಳ್, ಬಸನಗೌಡ ದದ್ದಲ್ ಭಾಗಿ ಆಗಿದ್ರು.. ಇನ್ನು, ಈ ಸಭೆಯ ಬಳಿಕ ಸತೀಶ್ ಜಾರಕಿಹೊಳಿಯನ್ನ ಐಪಿಎಸ್ ರವಿ ಚನ್ನಣ್ಣನವರ್ ಭೇಟಿ ಆಗಿದ್ದು ಕುತೂಹಲಕ್ಕೆ ಕಾರಣ ಆಯ್ತು.
ಇದನ್ನೂ ಓದಿ:ಸದ್ದು ಗದ್ದಲ ಜೊತೆಗಿಷ್ಟು ಸ್ವಾರಸ್ಯಕರ ಮಾತುಕತೆ: ಡೇ 3 ಬೆಳಗಾವಿ ಅಧಿವೇಶನದ ಹೈಲೈಟ್ಸ್ ಏನೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us