ಬೆಳಗಾವಿ 400 ಕೋಟಿ ರೂ. ರಾಬರಿ ಕೇಸ್​ಗೆ ಬಿಗ್​ ಟ್ವಿಸ್ಟ್! ಅದು ಗುಜರಾತ್ ರಾಜಕಾರಣಿಯ ಕಪ್ಪು ಹಣ..?

ಕರ್ನಾಟಕ-ಗೋವಾ ಗಡಿಯ ಛೋರ್ಲಾ ಘಾಟ್‌ನಲ್ಲಿ ನಡೆದಿದ್ದ 400 ಕೋಟಿ ರೂಪಾಯಿ ದರೋಡೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಆರಂಭದಲ್ಲಿ ಕೇವಲ ದರೋಡೆ ಎಂದು ಬಿಂಬಿತವಾಗಿದ್ದ ಈ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.

author-image
Ganesh Kerekuli
belagavi 400 crore robbery (2)
Advertisment

ಬೆಳಗಾವಿ: ಕರ್ನಾಟಕ-ಗೋವಾ ಗಡಿಯ ಛೋರ್ಲಾ ಘಾಟ್‌ನಲ್ಲಿ ನಡೆದಿದ್ದ 400 ಕೋಟಿ ರೂಪಾಯಿ ದರೋಡೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಆರಂಭದಲ್ಲಿ ಕೇವಲ ದರೋಡೆ ಎಂದು ಬಿಂಬಿತವಾಗಿದ್ದ ಈ ಪ್ರಕರಣದ ಆಳಕ್ಕೆ ಇಳಿದ ಮಹಾರಾಷ್ಟ್ರ ಎಸ್‌ಐಟಿ (SIT) ಅಧಿಕಾರಿಗಳಿಗೆ ಈಗ ರಾಜಕೀಯ ನಂಟು ಮತ್ತು ಬೃಹತ್ ಮನಿ ಲಾಂಡರಿಂಗ್ ಜಾಲದ ವಾಸನೆ ಬಡಿದಿದೆ.

ಗುಜರಾತ್ ರಾಜಕಾರಣಿಯ ಹಣ?

ಈ ದರೋಡೆಗೀಡಾದ 400 ಕೋಟಿ ರೂಪಾಯಿ ಹಣ ಗುಜರಾತ್‌ನ ಅತ್ಯಂತ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದ್ದು ಎಂಬ ಸ್ಫೋಟಕ ಮಾಹಿತಿ ತನಿಖೆಯಲ್ಲಿ ಹೊರಬಿದ್ದಿದೆ. ನಿಷೇಧಿತ 2000 ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳನ್ನು ಗೋವಾದಿಂದ ಸಾಗಿಸಲಾಗುತ್ತಿತ್ತು. ಮಹಾರಾಷ್ಟ್ರದ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಸಾಳ್ವೆ ಅಲಿಯಾಸ್ ಶೇಟ್ ಈ ವ್ಯವಹಾರದ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಭಯಾನಕ ರಾಬರಿ.. 400 ಕೋಟಿ ಮೌಲ್ಯದ ನೋಟುಗಳಿದ್ದ ಕಂಟೇನರ್ ಹೈಜಾಕ್..!

belagavi 400 crore robbery (1)

ಬ್ಲ್ಯಾಕ್ ಟು ವೈಟ್: ಬಾಲಾಜಿ ಟ್ರಸ್ಟ್ ಪ್ಲ್ಯಾನ್!

ದರೋಡೆಯಾದ ಈ 400 ಕೋಟಿ ರೂಪಾಯಿ ಹಣವನ್ನು ಬೆಳಗಾವಿ ಮಾರ್ಗವಾಗಿ ತೆಲಂಗಾಣದ 'ಬಾಲಾಜಿ ಟ್ರಸ್ಟ್'ಗೆ ಸಾಗಿಸುವ ಹೂನ್ನಾರ ನಡೆಸಲಾಗಿತ್ತು. ಬಾಲಾಜಿ ಟ್ರಸ್ಟ್‌ಗೆ ಕಪ್ಪು ಹಣವನ್ನು ನೀಡಿ, ಅದನ್ನು ಹಂತ ಹಂತವಾಗಿ ವೈಟ್ ಮನಿ (ಕಾನೂನುಬದ್ಧ ಹಣ) ಆಗಿ ಪರಿವರ್ತಿಸುವ ಬೃಹತ್ ಸ್ಕೆಚ್ ಹಾಕಲಾಗಿತ್ತು. ಈ ಮೂಲಕ ಬೇನಾಮಿ ಆಸ್ತಿಗಳನ್ನು ಮಾಡಲು ಕಿಶೋರ್ ಶೇಟ್ ಮತ್ತು ತಂಡ ಪ್ಲ್ಯಾನ್ ರೂಪಿಸಿತ್ತು ಎನ್ನಲಾಗಿದೆ. 

ಕಂಟೇನರ್ ಸಮೇತ ಮಾಯವಾದ 'ಕಿಂಗ್‌ಪಿನ್' ವಿರಾಟ್ ಹುಡುಗರು!

ಹಣ ಸಾಗಾಟದ ಜವಾಬ್ದಾರಿಯನ್ನು ಆರೋಪಿ ವಿರಾಟ್ ಎಂಬಾತನಿಗೆ ನೀಡಲಾಗಿತ್ತು. ಹಣ ತುಂಬಿದ್ದ ಕಂಟೇನರ್ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಛೋರ್ಲಾ ಘಾಟ್ ಮೂಲಕ ಸಾಗುವಾಗ ವಿರಾಟ್‌ನ ಹುಡುಗರು ಹಣದ ಸಮೇತ ನಾಪತ್ತೆಯಾಗಿದ್ದಾರೆ. ಇದು ಕಿಶೋರ್ ಶೇಟ್‌ಗೆ ದೊಡ್ಡ ಶಾಕ್ ನೀಡಿದ್ದು, ಈ 'ದರೋಡೆ' ಆಂತರಿಕವಾಗಿಯೇ ನಡೆದಿದೆಯೇ ಎಂಬ ಅನುಮಾನ ಮೂಡಿದೆ.

belagavi robbery (1)
Photograph: (AI)

ವೈರಲ್ ಆಯ್ತು ವಾಟ್ಸಪ್ ಕಾಲ್ ಸಂಭಾಷಣೆ!

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳಾದ ವಿರಾಟ್ ಗಾಂಧಿ ಮತ್ತು ಜಯೇಶ್ ಕದಂ ನಡುವಿನ ವಾಟ್ಸಪ್ ಕಾಲ್ ಸಂಭಾಷಣೆ ಲಭ್ಯವಾಗಿದೆ. ಇದರಲ್ಲಿ ಹಣದ ವ್ಯವಹಾರ ಮತ್ತು ಆಶ್ರಮದ (ಟ್ರಸ್ಟ್) ನಂಟಿನ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಆ ಸಂಭಾಷಣೆಯ ಸಾರಾಂಶ ಇಲ್ಲಿದೆ

  • ವಿರಾಟ್: "ಕಿಶೋರ್ ಭಾಯಿಗೆ ಎಲ್ಲಾ ಪೂರಾವೆ ಕೊಟ್ಟಿದ್ದೇನೆ. ಆಶ್ರಮದ ಜೊತೆ ಮೀಟಿಂಗ್ ಮಾಡುತ್ತಿದ್ದೇನೆ. ಡೀಲ್ ಆದರೆ 170 ಕೋಟಿ ಬರುತ್ತೆ, ನಮಗೆ 10% ಸಿಗುತ್ತೆ."
  • ಜಯೇಶ್: "ಈ ತಿಂಗಳ ಕೊನೆಯೊಳಗೆ ಪೇಮೆಂಟ್ ಸಿಗುತ್ತಾ?"
  • ವಿರಾಟ್: "ಜನವರಿ 5 ಅಥವಾ 10 ರೊಳಗೆ ಆಗಬಹುದು. ಟೆನ್ಷನ್ ಮಾಡಬೇಡ, ಮಾಲ್ ರಿಟರ್ನ್ ಕೇಳುತ್ತಿದ್ದಾರೆ ಆದರೆ ಪೇಮೆಂಟ್ ರಿಟರ್ನ್ ಆಗಲ್ಲ. ಕಂಪನಿ (ಆಶ್ರಮ) ಅಡ್ರೆಸ್ ಕಳುಹಿಸು, ಬೇಗ ಮೀಟಿಂಗ್ ಮಾಡೋಣ."

ತನಿಖೆ ಚುರುಕುಗೊಳಿಸಿದ ಎಸ್‌ಐಟಿ..!

ಸದ್ಯ ಮಹಾರಾಷ್ಟ್ರ ಪೊಲೀಸರು ವಿರಾಟ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 2000 ಮುಖಬೆಲೆಯ ಈ ಬೃಹತ್ ಮೊತ್ತ ಈಗ ಎಲ್ಲಿದೆ? ಗುಜರಾತ್ ರಾಜಕಾರಣಿಯ ಪಾತ್ರವೇನು? ಮತ್ತು ಈ ಮನಿ ಲಾಂಡರಿಂಗ್ ಮಾಫಿಯಾದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ. ದೇಶದ ಅತಿದೊಡ್ಡ ದರೋಡೆ ಪ್ರಕರಣದ ಹಿಂದೆ ಅಡಗಿರುವ ದೊಡ್ಡ ತಿಮಿಂಗಿಲಗಳು ಶೀಘ್ರದಲ್ಲೇ ಬಲೆಗೆ ಬೀಳುವ ಸಾಧ್ಯತೆಯಿದೆ.

ಇದನ್ನೂ ಓದಿ: ನಾಸಿಕ್ ಪೊಲೀಸರ ಪತ್ರದಿಂದ 400 ಕೋಟಿ ರಾಬರಿ ರಹಸ್ಯ ರಿವೀಲ್.. 4 ಪ್ರಮುಖ ಅಪ್​ಡೇಟ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

400 Crore Robbery
Advertisment