/newsfirstlive-kannada/media/media_files/2025/08/16/belagavi-flight-2025-08-16-14-21-26.jpg)
ಬೆಳಗಾವಿ: ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಸ್ಟಾರ್ ಏರ್ ವಿಮಾನ (Star Air Flight) ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದ ಸಿಬ್ಬಂದಿ ಸೇರಿ ಒಟ್ಟು 48 ಪ್ರಯಾಣಿಕರಿದ್ದರು.
ಸ್ಟಾರ್ ಏರ್ನ S5111 ವಿಮಾನವು ಬೆಳಗಾವಿಯಿಂದ ಮುಂಬೈಗೆ ಹೊರಟ್ಟಿತ್ತು. ಈ ವೇಳೆ ವಿಮಾನದ ಎಂಜಿನ್ನಲ್ಲಿ ಪೆಟ್ರೋಲ್ ಲೀಕ್ ಆಗುತ್ತಿರೋದು ಗೊತ್ತಾಗಿದೆ. ಹೀಗಾಗಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಅಜಯ್ ಸುತಾರ್, ವೈಷ್ಣವ ಶಾನಭಾಗ, ನಾರಾಯಣ ಡೆಲ್ ಸೇರಿದಂತೆ ಸುಮಾರು 48 ಪ್ರಯಾಣಿಕರು ವಿಮಾನದಲ್ಲಿದ್ದರು. ಪೈಲೆಟ್ ಹಾಗೂ ವಿಮಾನ ಸಿಬ್ಬಂದಿಯ ಜಾಗೃತೆಯಿಂದಾಗಿ ಭಾರೀ ದೊಡ್ಡ ಅನಾಹುತವೊಂದು ತಪ್ಪಿದೆ.
ಇದನ್ನೂ ಓದಿ: ಇನ್ಮುಂದೆ ವಿದ್ಯಾರ್ಥಿಗಳು ರಾಜಕೀಯ, ಊರ ಗಣ್ಯರ ಪ್ರೋಗ್ರಾಂಗೆ ಹೋಗಂಗಿಲ್ಲ..!
ಟೇಕ್ ಆಫ್ ಆದ 15 ನಿಮಿಷದಲ್ಲಿ ಮತ್ತೆ ಏರ್ಪೋರ್ಟ್ಗೆ ಲ್ಯಾಂಡ್ ಆಗಿದೆ. ಮಧ್ಯಾಹ್ನ 2.30ಕ್ಕೆ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಿ ಸ್ಟಾರ್ ಏರ್ ಕಂಪನಿ ಪ್ರಯಾಣಿಕರನ್ನು ಕೊಂಡೊಯ್ದಿದೆ. ವಿಮಾನ ಮೇಲಕ್ಕೆ ಹಾರುತ್ತಿದ್ದಂತೆ ತಾಂತ್ರಿಕ ದೋಷ ಕಂಡು ಬಂದಿದೆ. ಈ ವಿಚಾರ ಪ್ರಯಾಣಿಕರಿಗೆ ಗೊತ್ತಾದಾಗ ಗಾಬರಿಯಾದರು ಎಂದು ತಿಳಿದುಬಂದಿದೆ. ತಾಂತ್ರಿಕ ದೋಷದ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಪ್ಲ್ಯಾಟ್ ಖರೀದಿದಾರರಿಗೆ ಅಸಲು ಜೊತೆಗೆ ಬಡ್ಡಿಯನ್ನು ಪಾವತಿಸಲು ರೇರಾ ನ್ಯಾಯಾಧೀಕರಣದ ಆದೇಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ