/newsfirstlive-kannada/media/media_files/2025/10/27/belagavi-case-2025-10-27-16-42-07.jpg)
ಅವರಿಬ್ಬರದ್ದು ಒಂದೇ ಊರು. ಚಿಕ್ಕವರಿದ್ದಾಗಿನಿಂದಲೂ ಆಡಿ ಬೆಳೆದವರು. ದೊಡ್ಡವರಾದ ಮೇಲೆ ಜೊತೆಗೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಳ್ತಿದ್ದವರು. ಆದರೆ ಅದೊಂದು ವಿಚಾರಕ್ಕೆ ಸ್ನೇಹಿತರ ನಡುವೆ ಜಗಳವಾಗಿದೆ. ಈಗ ಪ್ರಕರಣ ಕೊ*ಲೆಯಲ್ಲಿ ಅಂತ್ಯವಾಗಿದೆ.
ಮಂಜುನಾಥ್ ಗೌಡರ್ (27) ಜೀವ ಕಳೆದುಕೊಂಡ ವ್ಯಕ್ತಿ. ಈತ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗಿರಿಯಾಲ್ ಗ್ರಾಮದ ನಿವಾಸಿ. ಇನ್ನೂ ಮದುವೆಯಾಗದ ಈತ, ಮನೆಗೆ ಆಧಾರವಾಗಿದ್ದ. ಮಂಜುನಾಥ್ ನಿನ್ನೆ ತನ್ನೂರಿನ ಹೊರ ವಲಯದಲ್ಲಿ ಬರ್ಬರವಾಗಿ ಹ*ತ್ಯೆ ಯಾಗಿದ್ದಾನೆ. ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಮಂಜುನಾಥ್​ನನ್ನು ಕೂಡಲೇ ಹಿರೇಬಾಗೇವಾಡಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತಾದ್ರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸುದ್ದಿ ಕೇಳಿ ಮನೆಯವರಿಗೆ ಬರ ಸಿಡಿಲು ಬಡಿದಂತಾಗಿದೆ. ಮಗನ ಮುಗಿಸಿದ ಅಪರಾಧಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಓರ್ವ ಸ್ಟಾರ್​ ಆಟಗಾರನ ಬಿಟ್ಟುಕೊಡಲು RCB ರೆಡಿ.. ಬಿಗ್​ ಕ್ಯಾಶ್ ಡೀಲ್..!
/filters:format(webp)/newsfirstlive-kannada/media/media_files/2025/10/27/belagavi-case-1-2025-10-27-16-42-25.jpg)
ಘಟನೆ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ್ದ ಬೈಲಹೊಂಗಲ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು. ಇತ್ತ, ಹಿರೇಬಾಗೇವಾಡಿ ಆಸ್ಪತ್ರೆಯಿಂದ ಶವವನ್ನ ಬೆಳಗಾವಿ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಶಿಪ್ಟ್ ಮಾಡಿಸಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ..?
ಇಲ್ಲಿ ಕೊಲೆಯಾದ ವಿಚಾರವನ್ನು ಆರೋಪಿಯೇ ಖುದ್ದು ಪೊಲೀಸರಿಗೆ ಹೇಳಿದ್ದಾನೆ. ಹ*ತ್ಯೆ ಮಾಡಿ ನೇರವಾಗಿ ಬೈಲಹೊಂಗಲ ಠಾಣೆಗೆ ಹೋಗಿ ತಾನೂ ಸ್ನೇಹಿತನ ಮುಗಿಸಿರೋದಾಗಿ ಹೇಳಿದ್ದಾನೆ. ಕೂಡಲೇ ಪೊಲೀಸರು ಆತನನ್ನ ಕಸ್ಟಡಿಯಲ್ಲಿರಿಸಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಕೇಸ್ ದಾಖಲಿಸಿ ತನಿಖೆ ಶುರು ಮಾಡಿದ್ದರು.
/filters:format(webp)/newsfirstlive-kannada/media/media_files/2025/10/27/belagavi-case-2-2025-10-27-16-42-38.jpg)
ಅಂದ್ಹಾಗೆ ಆರೋಪಿ ಹೆಸರು ದಯಾನಂದ್ ಗುಂಡ್ಲೂರ. ಈತ ಕೂಡ ಗಿರಿಯಾಲ್ ಗ್ರಾಮದ ನಿವಾಸಿ. ಮಂಜುನಾಥ್ ಹಾಗೂ ದಯಾನಂದ್ ಇಬ್ಬರು ಸ್ನೇಹಿತರಾಗಿದ್ದು ಜೊತೆಗೂಡಿಯೇ ಗಾರೆ ಕೆಲಸ ಮಾಡಿಕೊಂಡಿದ್ದರು. ಒಟ್ಟಿಗೆ ಬೆಳೆದ ಇಬ್ಬರು ಒಟ್ಟಿಗೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಮಂಜುನಾಥ್ ಕುಡಿತದ ದಾಸನಾಗಿದ್ದ. ಹೀಗಾಗಿ ದಯಾನಂದ್ ಕೆಲವು ದಿನಗಳಿಂದ ಕೆಲಸಕ್ಕೆ ಕರೆದುಕೊಂಡು ಹೋಗೋದನ್ನು ಬಿಟ್ಟಿದ್ದ. ವಾರದ ಹಿಂದೆ ಮತ್ತೆ ಕೆಲಸಕ್ಕೆ ಬರ್ತೇನಿ ಅಂತಾ ಹೇಳಿ ದಯಾನಂದ್ ಕಡೆ ಎರಡು ಸಾವಿರ ಹಣ ಸಾಲವಾಗಿ ಮಂಜುನಾಥ್ ಇಸ್ಕೊಂಡಿದ್ದ.
ಆದರೆ ಮಂಜುನಾಥ್ ಕೆಲಸಕ್ಕೂ ಹೋಗಿರಲಿಲ್ಲ. ಹಣವನ್ನೂ ವಾಪಸ್ ನೀಡಿರಲಿಲ್ಲ. ಮೊನ್ನೆ ಸಂಜೆ ಹಣ ಕೊಡುವಂತೆ ದಯಾನಂದ್, ಮಂಜುನಾಥ್​​ಗೆ ಕೇಳಿದ್ದಾನೆ. ಆಗ ನಶೆಯಲ್ಲಿದ್ದ ಮಂಜುನಾಥ್ ಆರೋಪಿ ದಯಾನಂದ್​ಗೆ ಬೈಯ್ದಿದ್ದಾನೆ. ತಾಯಿ, ಕುಟುಂಬ ತೆಗೆದುಕೊಂಡು ಬೈಯ್ದಿದ್ದರಿಂದ ಇಬ್ಬರ ನಡುವೆ ರಾತ್ರಿ ಸಣ್ಣ ಗಲಾಟೆಯಾಗಿದೆ. ಸಿಟ್ಟಿಟ್ಟುಕೊಂಡ ದಯಾನಂದ್ ಬೆಳಗ್ಗೆ ಎದ್ದು ಮಂಜುನಾಥ್​ಗೆ ಕರೆ ಮಾಡಿ ಊರ ಹೊರಗಿನ ರಸ್ತೆಗೆ ಬಾ ಮಾತಾಡೋಣ ಎಂದಿದ್ದಾನೆ.
ಇದನ್ನೂ ಓದಿ: ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಳಸಿ ಸೋದರಿಯರ ನಗ್ನ ಪೋಟೋ ಸೃಷ್ಟಿ : ಬ್ಲಾಕ್ ಮೇಲ್, ಮಾನಕ್ಕೆ ಹೆದರಿ ಯುವಕ ಆತ್ಮಹತ್ಯೆ
ಬೈಕ್ ಮೇಲೆ ಹೋಗಿದ್ದ ಮಂಜುನಾತ್​ಗೆ ರಾತ್ರಿ ಬೈಯ್ದ ವಿಚಾರದ ಕುರಿತು ಕೇಳಿದ್ದಾನೆ. ಈ ವೇಳೆ ಮತ್ತೆ ಇಬ್ಬರ ನಡುವೆ ವಾಗ್ವಾದ ಆಗಿದೆ. ಆಗ ಮಂಜುನಾಥ್ ಮೇಲೆ ಕುಡಗೋಲಿನಿಂದ ದಯಾನಂದ್ ಹಲ್ಲೆ ಮಾಡಿದ್ದಾನೆ. ಕಾಲಿಗೆ ಕುಡಗೋಲಿನಿಂದ ಹಲ್ಲೆ ಆಗ್ತಿದ್ದಂತೆ ತೀವ್ರ ರಕ್ತಸ್ರಾವವಾಗಿ ಕೆಳಗೆ ಬಿದ್ದಿದ್ದಾನೆ. ಇದನ್ನ ಗಮನಿಸಿದ ಸ್ಥಳೀಯರು ಓಡೋಡಿ ಬಂದು ಮಂಜುನಾಥ್​ನನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಮಾರ್ಗ ಮಧ್ಯದಲ್ಲೇ ಮಂಜುನಾಥ್ ಜೀವ ಬಿಟ್ಟಿದ್ದಾನೆ. ಇತ್ತ ಗೆಳೆಯನ ಸುದ್ದಿ ಗೊತ್ತಾಗ್ತಿದ್ದಂತೆಯೇ ದಯಾನಂದ್ ಪೊಲೀಸರಿಗೆ ಶರಣಾಗಿದ್ದ. ಘಟನೆ ಬಗ್ಗೆ ಕೇಸ್ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ವಿಶೇಷ ವರದಿ: ಶ್ರೀಕಾಂತ ಕುಬಕಡ್ಡಿ ನ್ಯೂಸ್ ಫಸ್ಟ್ ಬೆಳಗಾವಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us