/newsfirstlive-kannada/media/media_files/2025/09/09/bengalore-latha-2025-09-09-13-53-38.jpg)
ದುರಂತ ಅಂತ್ಯಕಂಡ ಯುವತಿ
ಬೆಂಗಳೂರು: ಪ್ರೇಮ ವೈಫಲ್ಯಕ್ಕೆ ದಿನಕ್ಕೆ ನೂರಾರು ಮಂದಿ ಬಲಿಯಾಗ್ತಿದ್ದಾರೆ. ಇದೀಗ ಬೆಂಗಳೂರಿನಲ್ಲಿ 25 ವರ್ಷದ ಯುವತಿಯೊಬ್ಬಳು ಆತ್ಮ*ತ್ಯೆ ಮಾಡಿಕೊಂಡಿದ್ದಾಳೆ.
ಏನಿದು ಪ್ರಕರಣ..?
ಲತಾ ಜೀವ ತೆಗೆದುಕೊಂಡ ಯುವತಿ. ಲತಾ ಕಳೆದ ಐದು ವರ್ಷಗಳಿಂದ ರಂಜಿತ್ ಎಂಬಾತನ ಪ್ರೀತಿಸಿದ್ದಳು. ಇಬ್ಬರೂ ಮೂಲತಃ ಮಂಡ್ಯ ಜಿಲ್ಲೆಯವರಾಗಿದ್ದು ರಂಜಿತ್ ಎಲೆಕ್ಟಿಷನ್ ಆಗಿ ಕೆಲಸ ಮಾಡುತ್ತಿದ್ದ. ಇನ್ನು ಲತಾ ಖಾಸಗಿ ಕ್ಲಿನಿಕ್ನಲ್ಲಿ ಕೆಲಸ ಮಾಡುತ್ತಿದ್ದ.
ಇವರಿಬ್ಬರ ಪ್ರೀತಿಗೆ ಮನೆಯವರ ಒಪ್ಪಿಗೆ ಕೂಡ ಸಿಕ್ಕಿತ್ತು. ಆದರೆ ರಂಜಿತ್ ಇತೀಚೆಗೆ…ಮದ್ವೆ ವಿಚಾರವನ್ನು ಪದೇ ಪದೆ ಮುಂದೂಡುತ್ತಿದ್ದ. ಆತನ ವರ್ತನೆಯಲ್ಲಿ ಲತಾ ಬದಲಾವಣೆ ಕಂಡು ಆತಂಕಗೊಂಡಿದ್ದಳು. ಅಲ್ಲದೇ ಇದೇ ವಿಚಾರಕ್ಕೆ ಇಬ್ಬರ ಮಧ್ಯೆ ಆಗಾಗ ಗಲಾಟೆ ಆಗ್ತಿತ್ತು.
ಇದನ್ನೂ ಓದಿ:ಕೈಲಾಸಕ್ಕೆ ಹೋಗಬೇಕು ಅಂತಾ ದೇಹತ್ಯಾಗ ಮಾಡಲು ಕಠಿಣ ವ್ರತ..
ನಿನ್ನೆ ಕೂಡ ಇಬ್ಬರ ನಡುವೆ ವಿಪರೀತ ಗಲಾಟೆಯಾಗಿದೆ. ಇದ್ರಿಂದ ಮನನೊಂದ ಲತಾ ಬೆಂಗಳೂರಿನ ರಾಜಾಜಿ ನಗರದನ ಸಮೀಪದಲ್ಲಿರುವ ಗಾಯಿತ್ರಿ ನಗರದ ಬಾಡಿಗೆ ಮನೆಯ ಫ್ಯಾನಿಗೆ ನೇಣುಬಿಗಿದುಕೊಂಡು ದುರಂತ ಅಂತ್ಯ ಕಂಡಿದ್ದಾಳೆ. ಸ್ಥಳಕ್ಕೆ ಸುಬ್ರಮಣ್ಯ ನಗರ ಠಾಣೆ ಪೊಲೀಸರು ಭೇಟಿ…ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಯುವತಿಯ ತಂದೆ…ಪೈಂಟರ್ ಆಗಿ ಕೆಲಸ ಮಾಡ್ತಿದ್ದು, ಮಗಳನ್ನ ಕಳೆದುಕೊಂbಡು ಕಂಗಾಲ್ ಆಗಿದ್ದಾರೆ.
ಇದನ್ನೂ ಓದಿ:ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿಗೆ ಬ್ರೇಕ್.. ಖಾಸಗಿ ಸಂಸ್ಥೆಯಿಂದ 3 ಡಿವೈಸ್!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ