ಕೆಂಪೇಗೌಡ ಏರ್‌ಪೋರ್ಟ್ ರನ್‌ವೇಗೆ ನುಗ್ಗಿದ ಬೃಹತ್ ಬಲೂನ್..! ಸ್ವಲ್ಪದರಲ್ಲೇ ತಪ್ಪಿದ ಭಾರೀ ವಿಮಾನ ದುರಂತ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಭದ್ರತಾ ಲೋಪದ ಆತಂಕಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗುವ ಅತ್ಯಂತ ಸೂಕ್ಷ್ಮ ಪ್ರದೇಶವಾದ 'ರನ್‌ವೇ'ಗೆ (Runway) ಬೃಹತ್ ಗಾತ್ರದ ಬಲೂನ್ ಒಂದು ಹಾರಿ ಬಂದಿದ್ದು, ಭಾರೀ ಆತಂಕ ಸೃಷ್ಟಿಸಿತ್ತು.

author-image
Ganesh Kerekuli
KEA
Advertisment

ಬೆಂಗಳೂರು ಗ್ರಾಮಾಂತರ: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಭದ್ರತಾ ಲೋಪದ ಆತಂಕಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಆಗುವ ಅತ್ಯಂತ ಸೂಕ್ಷ್ಮ ಪ್ರದೇಶವಾದ 'ರನ್‌ವೇ'ಗೆ (Runway) ಬೃಹತ್ ಗಾತ್ರದ ಬಲೂನ್ ಒಂದು ಹಾರಿ ಬಂದಿದ್ದು, ಭಾರೀ ಆತಂಕ ಸೃಷ್ಟಿಸಿತ್ತು.

ಸ್ವಲ್ಪದರಲ್ಲೇ ತಪ್ಪಿದ ಅನಾಹುತ

ವಿಮಾನ ನಿಲ್ದಾಣದ ರನ್‌ವೇಯಲ್ಲಿ ಬಲೂನ್ ಬಿದ್ದ ವೇಳೆ, ಅದೃಷ್ಟವಶಾತ್ ಯಾವುದೇ ವಿಮಾನಗಳ ಸಂಚಾರ ಇರಲಿಲ್ಲ. ಒಂದು ವೇಳೆ ವಿಮಾನ ಟೇಕಾಫ್ ಅಥವಾ ಲ್ಯಾಂಡಿಂಗ್ ಆಗುವ ಸಮಯದಲ್ಲಿ ಈ ಬಲೂನ್ ಅಡ್ಡ ಬಂದಿದ್ದರೆ, ಊಹಿಸಲೂ ಸಾಧ್ಯವಾಗದ ದೊಡ್ಡ ಅನಾಹುತ ಸಂಭವಿಸುತ್ತಿತ್ತು. ರನ್‌ವೇಯಲ್ಲಿ ವಿಮಾನಗಳಿಲ್ಲದ ಕಾರಣ ಸಂಭಾವ್ಯ ದುರಂತವೊಂದು ತಪ್ಪಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ 3.5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಸೀಜ್! ಲಕಲಕ ಹೊಳೆಯೋ ಕಾರಿನ ಸುತ್ತ ರೋಚಕ ರಹಸ್ಯಗಳು..!

ಘಟನೆ ಯಾವಾಗ ನಡೆದಿದ್ದು?

ಈ ಘಟನೆ ಕಳೆದ 5ನೇ ತಾರೀಖಿನಂದು ನಡೆದಿದೆ. ಆದರೆ, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಏರ್‌ಪೋರ್ಟ್ ಸುತ್ತಮುತ್ತಲಿನ ಕಟ್ಟಡಗಳ ನಿರ್ಮಾಣದ ವೇಳೆ ಜಾಹೀರಾತು ಅಥವಾ ಗುರುತುಗಾಗಿ ಹಾರಿಬಿಡಲಾಗಿದ್ದ ಬೃಹತ್ ಬಲೂನ್ ಇದಾಗಿದೆ ಎನ್ನಲಾಗಿದೆ. ಬಲೂನ್ ಕಟ್ಟಿದ್ದ ದಾರ ತುಂಡಾಗಿ ಗಾಳಿಯ ರಭಸಕ್ಕೆ ನೇರವಾಗಿ ವಿಮಾನ ನಿಲ್ದಾಣದ ರನ್‌ವೇಗೆ ಬಂದು ಬಿದ್ದಿದೆ ಎಂದು ಶಂಕಿಸಲಾಗಿದೆ.

ಯಾರ ನಿರ್ಲಕ್ಷ್ಯ?

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಬಲೂನ್ 'ಬಿಸಿಡಿ ಕನ್ಸ್ಟ್ರಕ್ಷನ್' (BCD Construction) ಕಂಪನಿಗೆ ಸೇರಿದ್ದಾಗಿದೆ. ನಿರ್ಮಾಣ ಹಂತದ ಕಟ್ಟಡದ ಬಳಿ ಹಾರಬಿಟ್ಟಿದ್ದ ಬಲೂನ್ ರನ್‌ವೇಗೆ ಬಂದು ಬಿದ್ದಿರುವುದು ನಿರ್ಮಾಣ ಸಂಸ್ಥೆಯ ನಿರ್ಲಕ್ಷ್ಯವನ್ನು ಎತ್ತಿ ತೋರಿಸಿದೆ.

ವಿಮಾನ ನಿಲ್ದಾಣದ ಸುರಕ್ಷತೆಯ ದೃಷ್ಟಿಯಿಂದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಏರ್‌ಪೋರ್ಟ್ ಭದ್ರತಾ ಸಿಬ್ಬಂದಿ, ನಿರ್ಲಕ್ಷ್ಯ ವಹಿಸಿದ ಬಿಸಿಡಿ ಕನ್ಸ್ಟ್ರಕ್ಷನ್ ಕಂಪನಿ ವಿರುದ್ಧ ದೂರು ನೀಡಿದ್ದಾರೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:ಬೆಳಗಾವಿಯಲ್ಲಿ ಆಧುನಿಕ ಟಾರ್ಜನ್ : ಮರದ ಎಲೆ, ಸೊಪ್ಪು ತಿಂದು 10 ವರ್ಷ ಕಳೆದ ಯುವಕ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.

Airport
Advertisment