/newsfirstlive-kannada/media/media_files/2025/11/07/bengaluru-panatturu-1-2025-11-07-21-03-47.jpg)
ಬೆಂಗಳೂರಿನ ಮಾನ, ರಸ್ತೆ ಗುಂಡಿಗಳಲ್ಲಿ ಹರಾಜು ಆಗ್ತಿದೆ. ಇದಕ್ಕೆ ಈ ಸ್ಟೋರಿ ನೇರ ನಿದರ್ಶನ. ರಸ್ತೆಯಲ್ಲಿ ಓಡಾಡಬೇಕಾದ ಬೈಕ್ ಸವಾರರು ರಸ್ತೆ ಇಲ್ಲದೇ ಚರಂಡಿಯ ಗುಂಡಿಯಲ್ಲಿ ಓಡಾಡ್ತಿದ್ದಾರೆ. ಇದು ಪಣತ್ತೂರು ರಸ್ತೆ ದುರಸ್ತಿ ಕಾಮಗಾರಿಯ ಪ್ರಗತಿಯಿಂದ ಉಂಟಾದ ಫಜೀತಿ. ಸವಾರರ ಸಂಚಾರದ ಅಪಾಯಕಾರಿ ದೃಶ್ಯ ನಿಜಕ್ಕೂ ಆತಂಕ ಹುಟ್ಟಿಸಿದೆ.
ಪಣತ್ತೂರು ರಸ್ತೆ ಕಾಮಗಾರಿ ಪ್ರಗತಿ.. ಸವಾರರಿಗೆ ಫಜೀತಿ
ಒಂದು ಕಡೆ ಕಣಿವೆಯಲ್ಲಿ ಸವಾರರ ಸರ್ಕಸ್.. ಮತ್ತೊಂದೆಡೆ ರೈಲ್ವೇ ಕಾಂಪೌಡ್ ಹಾರ್ತಿರುವ ಜನರು.. ನಡೆದುಕೊಂಡು ಹೋಗಿ ರೈಲ್ವೆ ಕಾಂಪೌಂಡ್ ಜಂಪ್ ಮಾಡ್ತಿರುವ ಜನರು.. ಬೆಂಗಳೂರಿನ ಟ್ರಾಫಿಕ್, ರಸ್ತೆ ಗುಂಡಿಗಳಿಂದ ಬೇಸತ್ತ ಬೈಕ್ ಸವಾರರು ಚರಂಡಿಯಲ್ಲಿ ಓಡಾಡುವಂತಾಗಿದೆ. ಇದು ಮಹಾದೇವಪುರ ವಿಧಾನಸಭಾ ಕ್ಷೇತ್ರದ ಪಣತ್ತೂರು ರಸ್ತೆಯ ಡೆಡ್ಲಿ ಸೀನ್.
ಪಣತ್ತೂರು, ವರ್ತೂರು, ಗುಂಜೂರು ಕಡೆಯಿಂದ ಕಾಡುಬೀಸನಹಳ್ಳಿ ಕಡೆ ಸಂಪರ್ಕ ಕಲ್ಪಿಸುವ ರಸ್ತೆಯಿದು. ಪಣತ್ತೂರಿನಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನಲೆ, ರೈಲ್ವೆ ಸರ್ವಿಸ್ ರಸ್ತೆಯಲ್ಲಿ ಬೈಕ್ ಸವಾರರು ಓಡಾಡ್ತಿದ್ದಾರೆ. ಈ ರಸ್ತೆಯಲ್ಲಿ ಟ್ರಾಫಿಕ್​ನಲ್ಲಿ ಸಿಲುಕಿ ಬೈಕ್ ಸವಾರರು ನಿತ್ಯ ನರಕ ಅನುಭವಿಸ್ತಿದ್ದಾರೆ. ಕಾಮಗಾರಿಯ ವೇಳೆ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡದ ಕಾರಣ, ಈ ರೀತಿಯ ಸಮಸ್ಯೆ ಸೃಷ್ಟಿಯಾಗಿದೆ.
ಇದನ್ನೂ ಓದಿ: ‘ತಿಂಗಳಿಗೆ 4 ಲಕ್ಷ ಸಾಕಾಗ್ತಿಲ್ಲ’ ಎಂದು ಕೋರ್ಟ್​ಗೆ ಬಂದ ಶಮಿ ಮಾಜಿ ಪತ್ನಿ.. ಎಲ್ಲೇ ಮೀರಿದ್ರಾ?
A viral video from Panathur, Bengaluru, shows techies navigating muddy, broken roads on bikes turning their daily commute into an off-road adventure#bengaluru#roads#panathur#adventure#viralvideo#trending#latest#viral2025#bikeridepic.twitter.com/VXOFsV1Fol
— Manchh (@Manchh_Official) November 7, 2025
ಹೀಗೆ ಚರಂಡಿಯಲ್ಲೇ ಬೈಕ್ ಸವಾರಿ ಮಾಡೋದಕ್ಕೆ ಮೇನ್​ ರೀಜನ್​ ಮುಖ್ಯ ರಸ್ತೆಯಲ್ಲಿ ಹೋದ್ರೆ ಎರಡು ಗಂಟೆ ಬೇಕು ಅನ್ನೋದು. ಇದೇ ಕಾರಣಕ್ಕೆ ಪುಟ್ಟ ಪುಟ್ಟ ಮಕ್ಕಳನ್ನ ಎದೆಗೆ ಕಟ್ಟಿಕೊಂಡು ಕಿತ್ತೋಗಿರೋ ರಸ್ತೆಯಲ್ಲಿಯೇ ಓಡಾಡ್ತಿದ್ದು, ಈ ದುಸ್ಥಿತಿ ಕಂಡು ಸ್ಥಳೀಯರು ಕಿಡಿಕಾರಿದ್ದಾರೆ.
ಈ ಭಾಗದಲ್ಲಿ ನೂರಾರು ಐಟಿ ಕಂಪನಿಗಳಿದ್ದು, ಕಂಪನಿಯ ಕ್ಯಾಬ್​ಗಳು ಓಡಾಡಲು ಆಗುತ್ತಿಲ್ಲ. ಹೀಗಾಗಿ ಆಫೀಸ್ ಕ್ಯಾಬ್​ಗಳನ್ನ ಬಿಟ್ಟು ನಡ್ಕೊಂಡೆ ಆಫೀಸ್​ಗಳಿಗೆ ಜನ ಹೋಗ್ತಿದ್ದಾರೆ. ಇನ್ನ ವಿಪಯಾರ್ಸ ಅಂದ್ರೆ ಕೆಲವರು ರೈಲ್ವೆ ಕಾಂಪೌಂಡ್ ಹಾರಿದ ದೃಶ್ಯ ಕೂಡ ಕಂಡು ಬಂದಿದೆ.
ಒಟ್ಟಿನಲ್ಲಿ ಮೂಲ ಸೌಕರ್ಯಕ್ಕಾಗಿ ಈಗಾಗಲೇ ಪಣತ್ತೂರು, ವರ್ತೂರು, ಬೆಳಗೆರೆಯ ಜನರು ಸಾಲು ಸಾಲು ಹೋರಾಟ ಮಾಡಿದ್ದಾರೆ. ಇದೀಗ ಮತ್ತೊಂದು ಸುತ್ತಿನ ಹೋರಾಟ ಮಾಡ್ಬೇಕಾದ ಅನಿವಾರ್ಯ ಪರಿಸ್ಥಿತಿ ರಸ್ತೆ ಸಮಸ್ಯೆಯಿಂದ ಬಂದೊದಗಿದೆ.
ಇದನ್ನೂ ಓದಿ:ಕಾವ್ಯ ಗೌರವಕ್ಕೆ ದಕ್ಕೆ ತಂದ್ರಾ ಧ್ರುವಂತ್? ಗಿಲ್ಲಿ ಟೀಕಿಸೋ ಭರದಲ್ಲಿ ತಪ್ಪು ಮಾಡಿದ್ರಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us