Advertisment

‘ತಿಂಗಳಿಗೆ 4 ಲಕ್ಷ ಸಾಕಾಗ್ತಿಲ್ಲ’ ಎಂದು ಕೋರ್ಟ್​ಗೆ ಬಂದ ಶಮಿ ಮಾಜಿ ಪತ್ನಿ.. ಎಲ್ಲೇ ಮೀರಿದ್ರಾ?

ಒಂದು ತಿಂಗಳಿಗೆ ತಾಯಿ ಮತ್ತು ಮಗುವಿನ ಖರ್ಚಿಗೆ ಎಷ್ಟು ಹಣ ಬೇಕು? 50 ಸಾವಿರ? 1 ಲಕ್ಷ? ಹೋಗ್ಲಿ 4 ಲಕ್ಷ ಸಾಕಾಗುತ್ತಾ? ಆದ್ರೆ ಕ್ರಿಕೆಟರ್‌ ಮಹಮದ್‌ ಶಮಿಯ ಮಾಜಿ ಪತ್ನಿಯ ಪ್ರಕಾರ 4 ಲಕ್ಷ ಸಾಕಾಗಲ್ವಂತೆ. ಖರ್ಚಿಗೆ 4 ಲಕ್ಷ ಸಾಕಾಗ್ತಿಲ್ಲ ಅಂತಾ ಸುಪ್ರೀಂ ಕೋರ್ಟ್‌ ಮೊರೆ ಹೋಗುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.

author-image
Ganesh Kerekuli
ಮೊಹ್ಮದ್ ಶಮಿಗೆ ಹೈಕೋರ್ಟ್​ನಲ್ಲಿ ಹಿನ್ನಡೆ.. ಪತ್ನಿ, ಮಗಳಿಗೆ ಜೀವನಾಂಶದ ಒಟ್ಟು ಮೊತ್ತ ಕೇಳಿ ದಂಗು..!
Advertisment

ಹಸೀನ್‌ ಜಹಾನ್‌.. ಬಹುಶ ಕ್ರಿಕೆಟರ್‌ ಮೊಹಮ್ಮದ್‌ ಶಮಿಯನ್ನ ಮದುವೆಯಾಗಿಲ್ಲ ಅಂದಿದ್ರೆ ಈಕೆಯ ಹೆಸರು ಕೊಲ್ಕತ್ತಾದ ಆಚೆಗೆ ಯಾರಿಗೂ ಗೊತ್ತಿರ್ತಾ ಇರ್ಲಿಲ್ವೇನೋ.. ಕೊಲ್ಕತ್ತಾ ನೈಟ್‌ ರೈಡರ್ಸ್‌ ತಂಡದ ಚಿಯರ್‌ ಲೀಡರ್‌ ಆಗಿದ್ದ ಹಸೀನ್‌ ಜಹಾನ್‌ಳ 'ಹಸೀನ್‌ ಚಹರೆ'ಯನ್ನ ನೋಡಿ ಬೋಲ್ಡಾದ ಶಮಿ ಮದುವೆಯೇನೋ ಆದ್ರು. ಆದ್ರೆ ಕಳೆದ ಕೆಲ ವರ್ಷಗಳಿಂದೀಚೆಗೆ ಶಮಿಗೆ 'ಏಕ್‌ ಹಸೀನಾ ಥೀ...' ಅನ್ನೋ ವಿರಹ ಗೀತೆಯೇ ಖಾಯಂ ಆಗೋಗಿದೆ. ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳಿಗಿಂತಾ ಹೆಚ್ಚಾಗಿ ಆಕೆಯೇ ದುಸ್ವಪ್ನವಾಗಿ ಕಾಡಿಬಿಟ್ಟಿದ್ದಾಳೆ. ಇಬ್ಬರೂ ಬೇರೆ ಬೇರೆಯಾಗಿದ್ದೂ ಆಯಿತು, ಕವಲು ದಾರಿಯನ್ನ ಆಯ್ದುಕೊಂಡಿದ್ದೂ ಆಯಿತು. ಆದರೂ ಶಮಿಗೆ ಕಾಟ ನಿಂತಿಲ್ಲ.

Advertisment

ಇದನ್ನೂ ಓದಿ:RCB ಯಾರನ್ನೆಲ್ಲಾ ಉಳಿಸಿಕೊಂಡಿದೆ? ಕನ್ನಡತಿಯನ್ನು ಕೈಬಿಡದ ಡೆಲ್ಲಿ ಕ್ಯಾಪಿಟಲ್ಸ್..!

ಹಸೀನ್‌ ಜಹಾನ್‌ ಮತ್ತು ಮೊಹಮ್ಮದ್ ಶಮಿ ಸದ್ಯ ಜೊತೆಯಾಗಿಲ್ಲ. ಇಬ್ಬರೂ ಬೇರೆಯಾಗಿದ್ದಾರೆ. ಆದ್ರೆ ಇವರ ವಿಚ್ಛೇದನ ಕೇಸ್‌ ಇನ್ನೂ ಇತ್ಯರ್ಥವಾಗಿಲ್ಲ. ಈ ನಡುವೆ ಶಮಿಯಿಂದ ಜೀವನಾಂಶ ಕೋರಿದ್ದ ಹಸಿನ್‌ ಜಹಾನ್‌ ಕೇಸ್‌ ಕೊಲ್ಕತ್ತಾ ಹೈಕೋರ್ಟ್‌ವರೆಗೂ ತಲುಪಿತ್ತು. ಮಾಸಿಕ 4 ಲಕ್ಷ ನೀಡುವಂತೆ ನಿರ್ಧಾರವೂ ಆಗಿತ್ತು. ಹಸಿನ್‌ ಮತ್ತು ಮೊಹಮದ್‌ ಶಮಿಗೆ ಒಬ್ಬಾಕೆ ಮಗಳಿದ್ದಾಳೆ. ಮಗಳ ಖರ್ಚಿಗೆ 2.5 ಲಕ್ಷ ಹಾಗೇನೇ ಹಸೀನ್‌ ಜಹಾನ್‌ ಖರ್ಚಿಗೆ 1.5 ಲಕ್ಷದಂತೆ ಮೊತ್ತ ಪಾವತಿಗೆ ತೀರ್ಮಾನವಾಗಿತ್ತು. ಅದಕ್ಕೆ ಶಮಿ ಕೂಡ ಒಪ್ಪಿಕೊಂಡಿದ್ದರು. ಆದರೆ ಹಸೀನ್‌ ಸದ್ಯ ಹೊಸದೊಂದು ಬೌನ್ಸರ್‌ ಬಿಟ್ಟಿದ್ದಾಳೆ. ಶಮಿ ತನಗೆ ನೀಡ್ತಿರೋ ಮಾಸಿಕ 4 ಲಕ್ಷ ಮೊತ್ತ ಸಾಕಾಗ್ತಿಲ್ಲ ಅಂತಾ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾಳೆ.

ಇದನ್ನೂ ಓದಿ: ಸೂರ್ಯ ಪಡೆ T20 ಪಂದ್ಯ ಗೆಲ್ಲಲೇಬೇಕು.. ಬಲಿಷ್ಠ ಟೀಮ್ ಇಂಡಿಯಾದಲ್ಲಿ ಯಾರಿಗೆಲ್ಲಾ ಅವಕಾಶ..?

Advertisment

Shami_IND

ಹಸೀನ್‌-ಶಮಿ ಮದುವೆ ಕಹಾನಿ

  • ಹಸೀನ್ ಜಹಾನ್‌ಗೆ ಮೊಹಮ್ಮದ್‌ ಶಮಿ 2ನೇ ಪತಿ
  • ಶಮಿಗೂ ಮುನ್ನಾ ದಿನಸಿ ಮಳಿಗೆ ಮಾಲೀಕನ ಜೊತೆ ವಿವಾಹ
  • ಮೊದಲ ಪತಿಯಿಂದ ಹಸೀನ್‌ ಜಹಾನ್‌ಗೆ ಇಬ್ಬರು ಮಕ್ಕಳು
  • ಮೊದಲ ಪತಿಯಿಂದಲೂ ವಿಚ್ಛೇದನ ಪಡೆದಿದ್ದ ಹಸೀನ್‌
  • ಮಾಡೆಲ್ ಆಗಿದ್ದ ಹಸೀನ್‌ ಜಹಾನ್‌ ವೃತ್ತಿ ಮುಂದುವರಿಕೆ
  • ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್‌ ರೈಡರ್ಸ್‌ ಪರ ಚಿಯರ್‌ ಲೀಡರ್‌
  • 2012ರಲ್ಲಿ ಹಸೀನ್‌ಳನ್ನ ನೋಡಿ ಮೆಚ್ಚಿಕೊಂಡಿದ್ದ ಕ್ರಿಕೆಟರ್‌ ಶಮಿ
  • 2014ರಲ್ಲಿ ಮದುವೆ, 2018ರಲ್ಲಿ ಕೌಟುಂಬಿಕ ದೌರ್ಜನ್ಯ ಕೇಸ್‌

ಶಮಿಯಿಂದ ಬೇರೆಯಾದ ಹಸೀನ್‌, ವರದಕ್ಷಿಣೆ ಕಿರುಕುಳ, ಹಲ್ಲೆ, ಅಶ್ಲೀಲ ವರ್ತನೆ ಸೇರಿದಂತೆ ನಾನಾ ಆರೋಪಗಳನ್ನ ಮಾಡಿದ್ದಳು. ಇದರಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಆರೋಪವೂ ಸೇರಿತ್ತು. ಈ ಸಂಬಂಧ ಶಮಿ ವಿಚಾರಣೆಯನ್ನೂ ಎದುರಿಸೋ ಹಾಗಾಗಿತ್ತು. ಸದ್ಯ ಎಲ್ಲಾ ತಣ್ಣಗಾಗ್ತಾ ಬರ್ತಿದೆ ಅನ್ನೋವಷ್ಟರಲ್ಲೇ ಶಮಿಗೆ ಮತ್ತೆ ಪರದಾಟ ಶುರುವಾಗಿದೆ. ತನಗೆ ಶಮಿಯಿಂದ ಸಿಕ್ತಾ ಇರೋ 4 ಲಕ್ಷ ಮಾಸಿಕ ಜೀವನಾಂಶ ಸಾಕಾಗುತ್ತಿಲ್ಲ ಅಂತಾ ಸುಪ್ರೀಂ ಕೋರ್ಟ್‌ ಮೊರೆ ಹೋಗಿರೋದು ತಲೆನೋವು ತಂದಿಟ್ಟಿದೆ.

ಇದನ್ನೂ ಓದಿ: ಇಂಡಿಯಾ A ತಂಡದಲ್ಲಿ ರೋಹಿತ್-ಕೊಹ್ಲಿ​ಗೆ ಸ್ಥಾನ ಇಲ್ಲ.. ಅರ್ಥವೇ ಆಗದ ಬಿಸಿಸಿಐ ನಡೆ..!

Advertisment

ಈ ಸಂಬಂಧ ಸದ್ಯ ಮೊಹಮದ್ ಶಮಿ ಹಾಗೂ ಪಶ್ಚಿಮ ಬಂಗಾಳ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. ನಾಲ್ಕು ವಾರಗಳ ಒಳಗಾಗಿ ನೋಟಿಸ್‌ಗೆ ಉತ್ತರಿಸುವಂತೆ ನಿರ್ದೇಶನ ನೀಡಲಾಗಿದೆ. ಶಮಿ ಹೇಗೆ ಡಿಫೆನ್ಸ್‌ ಮಾಡಿಕೊಳ್ತಾರೋ ನೋಡಬೇಕಿದೆ. ಒಟ್ನಲ್ಲಿ ಇನ್‌ಸ್ವಿಂಗ್‌, ಔಟ್‌ಸ್ವಿಂಗ್‌ ಮತ್ತು ಯಾರ್ಕರ್‌ ಪ್ರಯೋಗಿಸಿ ಜಗತ್ತಿನ ಬಲಾಢ್ಯ ಬ್ಯಾಟ್ಸ್‌ಮ್ಯನ್‌ಗಳನ್ನ ಪೆವಿಲಿಯನ್‌ಗೆ ಕಳುಹಿಸೋ ಶಮಿಗೆ, ಪತ್ನಿಯ ಬೌನ್ಸರ್‌ಗಳನ್ನ ಎದುರಿಸೋವಷ್ಟರಲ್ಲಿ ಸಾಕು ಸಾಕಾಗ್ತಾ ಇರೋದಂತೂ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Mohammed Shami
Advertisment
Advertisment
Advertisment