ಬೀಸೋ ದೊಣ್ಣೆಯಿಂದ ದರ್ಶನ್ ಜಸ್ಟ್ ಮಿಸ್.. ಇವತ್ತು ಏನೆಲ್ಲ ಆಗುತ್ತೆ..?

ರೇಣುಕಾಸ್ವಾಮಿ ಕೊ* ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದರ್ಶನ್ ಮತ್ತೆ ಜೈಲು ಪಾಲಾಗಿದ್ದಾರೆ. ನಟನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೋರ್ಟ್​ ವಜಾ ಮಾಡಿದೆ. ಇದರ ಬೆನ್ನಲ್ಲೇ ಜೈಲಾಧಿಕಾರಿಗಳ ಮುಂದಿನ ನಡೆ ಹೇಗಿರಲಿದೆ ಅನ್ನೋದ್ರ ವಿವರ ಇಲ್ಲಿದೆ.

author-image
Ganesh Kerekuli
Darshan (6)

ಆರೋಪಿ ದರ್ಶನ್

Advertisment

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊ* ಕೇಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ದರ್ಶನ್​ಗೆ ಜೈಲಿನ ನಿಯಮಗಳ ಪ್ರಕಾರವೇ ಕನಿಷ್ಠ ಸೌಲಭ್ಯ ನೀಡುವಂತೆ 64ನೇ ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ. ಇದರ ಜೊತೆಗೆ ಬಳ್ಳಾರಿ ಜೈಲಿಗೆ ವರ್ಗಾವಣೆ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ವಜಾ ಮಾಡಿದೆ. ಬಳ್ಳಾರಿ ಜೈಲಿನಲ್ಲಿ ಕಠಿಣ ಕಾರಾಗೃಹ ವಾಸ ಕಂಡಿದ್ದ ದರ್ಶನ್​ಗೆ, ಈಗ ಅರ್ಜಿ ವಜಾ ಮಾಡಿರೋದು ಬೀಸೋ ದೊಣ್ಣೆಯಿಂದ ಪಾರಾದಂತೆ ಆಗಿದೆ.  

ಇವತ್ತು ಏನಾಗಲಿದೆ..? 

ಇಂದು ಕೋರ್ಟ್ ಆದೇಶದ ಪ್ರತಿ ಜೈಲು ಅಧಿಕಾರಿಗಳಿಗೆ ತಲುಪಲಿದೆ. ಈ ವಿಚಾರವಾಗಿ ಇವತ್ತು ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಸಭೆ ನಡೆಸಲಿದ್ದಾರೆ. ದರ್ಶನ್​ನ ಜೈಲಿನೊಳಗೆ ಶಿಫ್ಟ್  ಮಾಡುವುದಾ? ಕ್ವಾರಂಟೈನ್ ಸೆಲ್​​​ನಲ್ಲಿಯೇ ಇರಿಸೋದಾ ಅನ್ನೋದ್ರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಜೊತೆಗೆ ಬೆಡ್​ಶೀಟ್ ಹಾಗೂ ದಿಂಬು ಕೊಡುವುದರ ಬಗ್ಗೆಯೂ ನಿರ್ಣಯ ತೆಗೆದುಕೊಳ್ಳಲಿದ್ದಾರೆ. 

ಇದನ್ನೂ ಓದಿ:ಜೈಲಿನಲ್ಲಿ ನಟ ದರ್ಶನ್ ನಂಥ ವಿಚಾರಣಾಧೀನ ಖೈದಿಗಳಿಗೆ ಏನೇನು ಸೌಲಭ್ಯ ನೀಡಬೇಕು? ಕಾರಾಗೃಹ ಕಾಯಿದೆಯಲ್ಲಿ ಇರೋದೇನು?

actor darshan pavithra photos

ಒಂದು ವೇಳೆ ಸೆಕ್ಯೂರಿಟಿ ಬ್ಯಾರಕ್​​ಗೆ ಶಿಫ್ಟ್​ ಮಾಡಿದ್ರೆ ದರ್ಶನ್ ಇದ್ದಲ್ಲಿಗೆ ಹೆಚ್ಚು ಕೈದಿಗಳು ಜಮಾವಣೆ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕ್ವಾರಂಟೈನ್ ಸೆಲ್​​ನಲ್ಲೇ ಇರಿಸಲು ಸಿದ್ಧತೆ ನಡೆದಿದೆ ಎನ್ನಲಾಗಿದೆ. ಇದಲ್ಲದೇ ಮೈದಾನದಲ್ಲಿ ಅಥವಾ ಬ್ಯಾರಕ್ ಬಳಿಯ ಹೊರಾಂಗಣದಲ್ಲಿ ದರ್ಶನ್​ಗೆ ವಾಕ್ ಮಾಡಲು ಅನುಮತಿ ನೀಡುವ ಸಾಧ್ಯತೆಯಿದೆ. ನ್ಯಾಯಾಧೀಶರ ಮುಂದೆ ತನಗೆ ಫಂಗಸ್ ಇದೆ ದರ್ಶನ್ ಹೇಳಿದ್ದಾರೆ. ಹೀಗಾಗಿ ನಿನ್ನೆ ರಾತ್ರಿ ಜೈಲಿನ ವೈದ್ಯರು ತಪಾಸಣೆ ಮಾಡಿದ್ದಾರೆ. ಮತ್ತೊಂದ್ಕಡೆ ಇವತ್ತು ದರ್ಶನ್ ಕುಟುಂಬಸ್ಥರು ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. 

ಇದನ್ನೂ ಓದಿ:ಪಾ*ಸನ್ ಕೊಡಿ ಎಂದಿದ್ದ ದರ್ಶನ್​ ಬಗ್ಗೆ ನಟ ರಾಜವರ್ಧನ್ ಹೇಳಿದ ಒಳ್ಳೆಯ ಮಾತುಗಳು ಇಲ್ಲಿವೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Darshan in jail Sudeep Darshan friendship Actor Darshan
Advertisment