/newsfirstlive-kannada/media/media_files/2026/01/30/doddaballapura-lady-1-2026-01-30-13-10-14.jpg)
ದೊಡ್ಡಬಳ್ಳಾಪುರ: ಪ್ರೀತಿ, ಪ್ರೇಮ ಎನ್ನುತ್ತಾ ಯುವಕರನ್ನು ಬಲೆಗೆ ಬೀಳಿಸಿ, ಮದುವೆಯಾಗಿ ಲಕ್ಷಾಂತರ ರೂಪಾಯಿ ಹಣ ದೋಚುತ್ತಿದ್ದ ‘ಖತರ್ನಾಕ್’ ಮಹಿಳೆಯೊಬ್ಬಳ ಅಸಲಿ ಮುಖ ಬಯಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದಲ್ಲಿ ಪ್ರಕರಣ ನಡೆದಿದೆ.
ಯಾರು ಈ ಮಹಿಳೆ?
ದೊಡ್ಡಬಳ್ಳಾಪುರ ತಾಲೂಕಿನ ಅಣಬೆ ಗ್ರಾಮದ ಸುಧಾರಾಣಿ ಎಂಬಾಕೆಯೇ ಈ ವಂಚನೆ ಆರೋಪ ಎದುರಿಸುತ್ತಿರುವ ಮಹಿಳೆ. ಈಕೆಯ ವಿರುದ್ಧ ಆಕೆಯ ಇಬ್ಬರು ಗಂಡಂದಿರು ಈಗ ನ್ಯಾಯಕ್ಕಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಈಕೆ ಈಗಾಗಲೇ ಮೂವರನ್ನು ಮದುವೆಯಾಗಿದ್ದು, ಇನ್ನು ಹತ್ತಾರು ಜನರಿಗೆ ವಂಚಿಸಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ಎನ್‌ಸಿಪಿ ಎರಡು ಬಣಗಳ ವಿಲೀನಕ್ಕೆ ಅಜಿತ್ ಪವಾರ್ ಉತ್ಸುಕರಾಗಿದ್ದರು- ಅಜಿತ್ ಆಪ್ತ ಕಿರಣ್ ಗುಜಾರ್ ಸ್ಪಷ್ಟನೆ
/filters:format(webp)/newsfirstlive-kannada/media/media_files/2026/01/30/doddaballapura-lady-2026-01-30-13-11-53.jpg)
ಮೊದಲ ಗಂಡನಿಗೆ ನೀಡಿದ ಕಾರಣವೇ ವಿಚಿತ್ರ!
ಸುಧಾರಾಣಿ ಮೊದಲು ವೀರೆಗೌಡ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದಳು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಮದುವೆಯಾಗಿ ಕೆಲವು ವರ್ಷಗಳ ನಂತರ ಗಂಡ ಮತ್ತು ಮಕ್ಕಳನ್ನು ಬಿಟ್ಟು ಸುಧಾರಾಣಿ ಪರಾರಿಯಾಗಿದ್ದಳು. ಈ ಬಗ್ಗೆ ಕೇಳಿದರೆ, "ನನ್ನ ಗಂಡನಿಗೆ ಕಾರು ಮತ್ತು ಬುಲೆಟ್ ಓಡಿಸಲು ಬರಲ್ಲ, ಅದಕ್ಕೇ ಆತನನ್ನು ಬಿಟ್ಟು ಬಂದಿದ್ದೇನೆ" ಎಂಬ ವಿಚಿತ್ರ ಸಬೂಬು ನೀಡಿದ್ದಳು ಎಂದು ವೀರೆಗೌಡ ಆರೋಪಿಸಿದ್ದಾರೆ.
ಡೆಲಿವರಿ ಬಾಯ್‌ಗೆ ಸುಳ್ಳು ಹೇಳಿ ಎರಡನೇ ಮದುವೆ!
ಮೊದಲ ಗಂಡನನ್ನು ಬಿಟ್ಟ ಬಳಿಕ ಈಕೆ ಅನಂತಮೂರ್ತಿ ಎಂಬ ಡೆಲಿವರಿ ಬಾಯ್ ಜೊತೆ ಸ್ನೇಹ ಬೆಳೆಸಿದ್ದಳು. "ನನ್ನ ಗಂಡ ಸತ್ತು ಹೋಗಿದ್ದಾನೆ" ಎಂದು ಸುಳ್ಳು ಹೇಳಿ ಆತನ ನಂಬಿಕೆ ಗಳಿಸಿದ್ದಳು. ಆತನ ಪ್ರೀತಿಯನ್ನು ನಂಬಿದ ಅನಂತಮೂರ್ತಿ ದೇವಸ್ಥಾನದಲ್ಲಿ ಈಕೆಗೆ ತಾಳಿ ಕಟ್ಟಿದ್ದ. ಸುಮಾರು ಒಂದೂಕಾಲು ವರ್ಷ ಈಕೆಯ ಜೊತೆ ಸಂಸಾರ ಮಾಡಿದ್ದ ಅನಂತಮೂರ್ತಿಯಿಂದ ಬರೋಬ್ಬರಿ 15 ರಿಂದ 20 ಲಕ್ಷ ರೂಪಾಯಿ ಹಣವನ್ನು ಸುಧಾರಾಣಿ ಪೀಕಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ತಲೆ ಕೆಳಗಾದ ಗಂಭೀರ್​ ಲೆಕ್ಕಾಚಾರ, ಭಾರೀ ಮುಖಭಂಗ..!
ಈಗ ಮೂರನೇ ಗಂಡನ ಜೊತೆ ವಾಸ್ತವ್ಯ!
ಅನಂತಮೂರ್ತಿಯಿಂದ ಹಣ ದೋಚಿದ ಮೇಲೆ ಆತನನ್ನೂ ಕೈಬಿಟ್ಟ ಸುಧಾರಾಣಿ, ಈಗ ಕನಕಪುರ ಮೂಲದ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ ಎನ್ನಲಾಗಿದೆ. ಹಣವಿರುವವರನ್ನೇ ಟಾರ್ಗೆಟ್ ಮಾಡುವ ಈಕೆ, ಪ್ರೀತಿಯ ನಾಟಕವಾಡಿ ಮದುವೆಯಾಗಿ ಆಸ್ತಿ-ಹಣ ಲೂಟಿ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾಳೆ ಎಂದು ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸ್ ಠಾಣೆಯಲ್ಲಿ ದೂರು
ಈಗ ಸುಧಾರಾಣಿಯ ಮೊದಲ ಗಂಡ ವೀರೆಗೌಡ ಮತ್ತು ಎರಡನೇ ಗಂಡ ಅನಂತಮೂರ್ತಿ ಇಬ್ಬರೂ ಒಟ್ಟಾಗಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. "ನಮ್ಮಂತಹ ಅಮಾಯಕರನ್ನು ಬಲೆಗೆ ಬೀಳಿಸಿ ಹಣ ಲೂಟಿ ಮಾಡುತ್ತಿರುವ ಈಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಪ್ರೀತಿಯ ಹೆಸರಲ್ಲಿ ನಂಬಿಸಿ ವಂಚಿಸುವ ಇಂತಹ ಕಿಲಾಡಿ ಮಹಿಳೆಯರ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು.
ಇದನ್ನೂ ಓದಿ: ಅತ್ತಿಗೆಗೆ ಗುಂಡಿಡುವ ಮುನ್ನ ಅಣ್ಣನಿಗೆ ಕಾಲ್ ಮಾಡಿ ಕಮಾಂಡೋ ಹೇಳಿದ್ದೇನು ಗೊತ್ತಾ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us