/newsfirstlive-kannada/media/media_files/2025/08/24/bmtc4-2025-08-24-18-55-41.jpg)
ಬೆಂಗಳೂರು: ಮೊನ್ನೆಯಷ್ಟೇ ಕಿಲ್ಲರ್​ BMTC ಬಸ್​ 5ನೇ ತರಗತಿಯ ವಿದ್ಯಾರ್ಥಿನಿ ತಲೆಯ ಮೇಲೆ ಹರಿದು ಹೋಗಿತ್ತು. ಪರಿಣಾಮ ತನ್ವೀ ಕೃಷ್ಣ (10) ಜೀವಬಿಟ್ಟಿದ್ದಳು. ಈ ಘಟನೆ ಮಾಸುವ ಮುನ್ನವೇ ಬಿಎಂಟಿಸಿಗೆ ಮತ್ತೊಂದು ಮಗುವಿನ ಜೀವ ಹೋಗಿದೆ.
/filters:format(webp)/newsfirstlive-kannada/media/media_files/2025/08/24/bmtc5-2025-08-24-19-05-11.jpg)
ನಗರದ ಕೆ.ಆರ್ ಮಾರ್ಕೆಟ್ ಬಳಿ KA 57F 6456 ನಂಬರಿನ ಬಿಎಂಟಿಸಿ ಬಸ್​ ಮತ್ತೊಂದು ಮಗುವಿನ ಜೀವ ಬಲಿ ಪಡೆದುಕೊಂಡಿದೆ. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಸದ್ಯ ಸ್ಥಳೀಯರು ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕನನ್ನು ಹಲಸೂರು ಗೇಟ್ ಸಂಚಾರಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ದಿನೇ ದಿನೇ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಕಿಲ್ಲರ್​ ಎಂದೇ ಅಪಖ್ಯಾತಿಗೆ ಒಳಗಾಗಿರೋ ಬಿಎಂಟಿಸಿ, ಸುರಕ್ಷತಾ ಚಾಲನೆಯತ್ತ ಗಮನವನ್ನು ಹರಿಸದ ಚಾಲಕರನ್ನು ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಖಡಕ್​ ಸಂದೇಶ ರವಾನಿಸಿತ್ತು. ಆ ಬೆನ್ನಲ್ಲೇ ಮತ್ತೊಂದು ಅಪಘಾತ ನಡೆದಿದೆ.
ಇದನ್ನೂ ಓದಿ: BMTC ಬಸ್​ ಚಾಲಕರೇ ಎಚ್ಚರ.. ಅಪ್ಪಿತಪ್ಪಿ ಈ ತಪ್ಪುಗಳು ಮಾಡಿದ್ರೆ ವಜಾ ಗ್ಯಾರಂಟಿ; ಏನದು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us