/newsfirstlive-kannada/media/media_files/2025/10/19/bengaluru-tunnel-project-2025-10-19-22-52-41.jpg)
ಬೆಂಗಳೂರಲ್ಲಿ ಟನಲ್ ರಸ್ತೆ ಸುರಂಗ ಆರಂಭಕ್ಕೂ ಮುನ್ನವೇ ಹಲವು ವಿಘ್ನಗಳನ್ನ ಎದುರಿಸ್ತಿದೆ. ಟನಲ್ ರಸ್ತೆಯಿಂದ ಲಾಲ್​​ಬಾಗ್​​ಗೆ ಸಮಸ್ಯೆ ಆಗುತ್ತೆ ಎಂದು ದೊಡ್ಡ ಚರ್ಚೆಯಾಗಿತ್ತು. ಈಗ ಬೆಂಗಳೂರಿನ ಮತ್ತೊಂದು ಕೆರೆಗೂ ಟನಲ್ ರಸ್ತೆಯಿಂದ ಟ್ರಬಲ್ ಆಗುತ್ತೆ ಎಂಬ ವಿಚಾರ ಬೆಳಕಿಗೆ ಬಂದಿದ್ದು, ವಿರೋಧ ವ್ಯಕ್ತವಾಗ್ತಿದೆ.
ಟನಲ್ ರಸ್ತೆ ಪ್ರಾಜೆಕ್ಟ್​​ಗೆ ಮತ್ತೊಂದು ಟ್ರಬಲ್?
ಬೆಂಗಳೂರಿನ ಬಹು ನಿರೀಕ್ಷಿತ, ಬಹು ಚರ್ಚಿತ ಹಾಗೂ ವಿವಾದಾತ್ಮಕ ಸುರಂಗ ರಸ್ತೆ ಯೋಜನೆ ಆರಂಭಕ್ಕೂ ಮುನ್ನವೇ ಹತ್ತು ಹಲವು ವಿಘ್ನಗಳನ್ನ ಎದುರಿಸ್ತಿದೆ. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಮಾರ್ಗವಾಗಿ ನಿರ್ಮಾಣ ಆಗಬೇಕಿರುವ 16 ಕಿ.ಮೀಟರ್ ಉದ್ದದ ಈ ಟನಲ್ ರಸ್ತೆಯಿಂದ ಸಿಲಿಕಾನ್ ಸಿಟಿ ಟ್ರಾಫಿಕ್ ನಿಯಂತ್ರಣ ಆಗುತ್ತೆ ಅನ್ನೋದು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಜಿಬಿಎ ಲೆಕ್ಕಾಚಾರ.
ಇದನ್ನೂ ಓದಿ: ರಮೇಶ್ ಕತ್ತಿ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು.. ಬಂಧನದ ಭೀತಿ..!
ಈ ಟನಲ್ ಪ್ರಾಜೆಕ್ಟ್​​ನಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಅನ್ನೋದು ಹಲವರ ವಾದ. ಇತ್ತೀಚೆಗಷ್ಟೇ ಟನಲ್ ಪ್ರಾಜೆಕ್ಟ್​​ನಿಂದ ಲಾಲ್​ಬಾಗ್​ ಕೆರೆ, ಬಂಡೆ, ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ ಎನ್ನುವ ವಿಚಾರ ಸದ್ದು ಮಾಡಿತ್ತು. ಬೆನ್ನಲ್ಲೇ ಈಗ ಟನಲ್ ಯೋಜನೆಯಿಂದ ನಗರದ ಐತಿಹಾಸಿಕ ಸ್ಯಾಂಕಿ ಕೆರೆಗೂ ಕಂಟಕವಾಗಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.
ಟನಲ್ ಯೋಜನೆಯಲ್ಲಿ ಕೆಲವು ಬದಲಾವಣೆಗಳಾಗಿದ್ದು, ಮೇಖ್ರಿ ಸರ್ಕಲ್ ಬಳಿ ನಿರ್ಮಾಣವಾಗಬೇಕಿದ್ದ ನಾಲ್ಕು ರ್ಯಾಂಪ್​ಗಳ ಪೈಕಿ ಒಂದನ್ನ ಮಾತ್ರ ಉಳಿಸಿಕೊಂಡಿದ್ದು, ಇನ್ನೂ ಮೂರನ್ನ ಬೇರೆಡೆಗೆ ಶಿಫ್ಟ್ ಮಾಡಲು ಅಧಿಕಾರಿಗಳು ನಿರ್ಧರಿಸಿದ್ದಾರಂತೆ. ಇದರಲ್ಲಿ ಒಂದು ಎಗ್ಸಿಟ್ ಈಗ ಸ್ಯಾಂಕಿ ಕೆರೆ ಸಮೀಪ ಬರಲಿದೆ ಎನ್ನುವ ವಿಚಾರ ಮಲ್ಲೇಶ್ವರಂ ಸ್ಥಳಿಯರನ್ನ ಚಿಂತೆಗೀಡು ಮಾಡಿದೆ.
ಇದನ್ನೂ ಓದಿ: ಚೊಚ್ಚಲ ಮಗುವಿಗೆ ವೆಲ್​ಕಮ್ ಹೇಳಿದ ಪರಿಣಿತಿ ಚೋಪ್ರಾ, ರಾಘವ್ ಚಡ್ಡಾ..!
ಸ್ಯಾಂಕಿ ಕೆರೆ ಬ್ರಿಟಿಷರ ಕಾಲದ್ದು.. ಕೆರೆಯ ದಡದಲ್ಲಿ ರಸ್ತೆ ಮಾಡಲಾಗಿದೆ. ಕೆರೆ ಸುತ್ತಾಮುತ್ತಾ ನೀರಿನ ಅಂಶ ಇರುತ್ತೆ, ಜಲಮಾರ್ಗವೂ ಇರುತ್ತೆ. ಹಾಗಾಗಿ, ಕೆರೆಯ ಸುತ್ತಾಮುತ್ತ ಎಲ್ಲೇ ಸುರಂಗ ಮಾರ್ಗ ಮಾಡಿದ್ರು ಅದು ಕೆರೆಯ ವಾತಾವರಣದ ಮೇಲೂ ವ್ಯತಿರಿಕ್ತ ಪರಿಣಾಮ ಬರುತ್ತೆ, ಜೊತೆಗೆ ಮಲ್ಲೇಶ್ವರಂ ಭಾಗದ ಪ್ರದೇಶಗಳ ಮೇಲೆಯೂ ಎಫೆಕ್ಟ್ ಆಗುತ್ತೆ ಅನ್ನೋ ಭಯ ಕಾಡ್ತಿದೆ. ತಜ್ಞರಿಂದ ಸೂಕ್ತ ಅಧ್ಯಯನ ಮಾಡಿಸಿ, ಮಣ್ಣಿನ ಪರೀಕ್ಷೆ ಆಗ್ಲಿ, ಕೆರೆಯ ಆಳ ಅಗಲದ ಅಧ್ಯಯನ ಆಗಲಿ ಅಂತಿದ್ದಾರೆ. ಅಷ್ಟೇ ಅಲ್ಲ, ಟನಲ್ ಎಗ್ಸಿಟ್ ಸ್ಯಾಂಕಿ ಕೆರೆಯ ಸಮೀಪ ಬಂದ್ರೆ ಫುಲ್ ಟ್ರಾಫಿಕ್ ಸಮಸ್ಯೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸ್ತಿದ್ದಾರೆ.
ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಇದಾಗಿದ್ದರಿಂದ, ಬಹಳ ಸೂಕ್ಷ್ಮ ಅಧ್ಯಯನ ಅಗತ್ಯವಿದೆ. ಜನಸಾಮಾನ್ಯರಲ್ಲಿ ಸೃಷ್ಟಿಯಾಗ್ತಿರುವ ಗೊಂದಲಗಳಿಗೂ ಪರಿಹಾರ ಬೇಕಿದೆ. ಅಧಿಕಾರಿಗಳು ಟನಲ್ ರಸ್ತೆಯ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ತಲುಪಿಸುವ ಅಗತ್ಯವಿದೆ.
ಇದನ್ನೂ ಓದಿ: ಫಿನಾಲೆಗೆ ಯಾರು ಅರ್ಹ ಎಂದು ಕೇಳಿದ ಪ್ರಶ್ನೆಗೆ ಇಬ್ಬರು ಒಂದೇ ಹೆಸರು ಹೇಳಿದ ಮಂಜು, ಅಶ್ವಿನಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ