/newsfirstlive-kannada/media/media_files/2025/08/28/bbmp-2025-08-28-21-39-41.jpg)
ಜನಪರ ಅಂತ ಬಿಬಿಎಂಪಿ ಮಾಡೋ ಕೆಲಸ ನೆಟ್ಟಗೆ ಮಾಡಿದ್ರೆ ಸಿಲಿಕಾನ್ ಸಿಟಿಯ ಜನಕ್ಕೂ ಅನುಕೂಲ ಆಗ್ತಿತ್ತು. ಆದರೆ ಪಾಲಿಕೆಯ ಅರ್ಧಂಬರ್ಧ ಕಾಮಗಾರಿ ಜನಸಾಮಾನ್ಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರ್ತಿದೆ. ಮತ್ತೇ ಡೆಂಘೀ ಆತಂಕ ಹೆಚ್ಚಾಗಿದೆ.
ಇದನ್ನೂ ಓದಿ:ಪತ್ರಿಕಾ ವಿತರಕರು-ಏಜೆಂಟರು ಪತ್ರಿಕೋದ್ಯಮದ ಬೆನ್ನುಮೂಳೆ: ಕೆ.ವಿ.ಪ್ರಭಾಕರ್
ಬಿಬಿಎಂಪಿ ಸ್ಟಾರ್ಮ್ ವಾಟರ್ ಡಿಪಾರ್ಟ್ಮೆಂಟ್ ಸಿಬ್ಬಂದಿ ಯಡವಟ್ಟಿಗೆ ಶಿವಾಜಿನಗರದ ಭಾರತಿ ನಗರ ವಾರ್ಡ್ನ ಆರ್ಮ್ ಸ್ಟ್ರಾಂಗ್ ರಸ್ತೆ ಜನ ನರಕಯಾತನೆ ಅನುಭವಿಸ್ತಿದ್ದಾರೆ. ಮೋರಿ ನೀರು ಸರಾಗವಾಗಿ ಹರಿದು ಹೋಗಬೇಕು ಅಂತ ಬಿಬಿಎಂಪಿ ಮೋರಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುದಾಗಿತ್ತು. ಆದ್ರೆ, 1 ತಿಂಗಳ ಹಿಂದೆ ಆರಂಭವಾಗಿರುವ ಕಾಮಗಾರಿಯಲ್ಲಿ, ಈವರೆಗೂ ಮೋರಿ ಸ್ಲ್ಯಾಬ್ ತೆಗೆದಿದೆಯಾದ್ರೂ ಅದನ್ನು ಮತ್ತೆ ಮುಚ್ಚುವ ಕೆಲಸ ಮಾತ್ರ ಮಾಡಿಲ್ಲ. ಸುಮಾರು 100 ಮನೆ ಹಾಗೂ ಆಸ್ಪತ್ರೆಯ ಮುಂಭಾಗ ಮೋರಿಯ ಸ್ಲ್ಯಾಬ್ ಓಪನ್ ಆಗಿದ್ದು, ನಿವಾಸಿಗಳಲ್ಲಿ ಡೆಂಘೀ ಭೀತಿ ಎದುರಾಗಿದೆ. ಈಗಾಗಲೇ 10 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಯುದ್ಧಭೂಮಿ ಉಕ್ರೇನ್ನಲ್ಲಿ ಆರ್ಟ್ ಆಫ್ ಲಿವಿಂಗ್ ಕ್ರಾಂತಿಕಾರಿ ಹೆಜ್ಜೆ..!
ಭಾರತಿ ನಗರ ವಾರ್ಡ್ ನಿವಾಸಿಗಳ ಈ ಆರೋಪಕ್ಕೆ ಹಾರಿಕೆಯ ಉತ್ತರ ಕೊಟ್ಟ ಬಿಬಿಎಂಪಿ, ಸ್ಲ್ಯಾಬ್ ಮುಚ್ಚುತ್ತೇವೆ ಎಂದಿದೆ. ಒಟ್ನಲ್ಲಿ, ನಿನ್ನೆಯಷ್ಟೇ ನಿಮ್ಮ ಗುಂಡಿಗೆ ನೀವೇ ಜವಾಬ್ದಾರರು ಎಂದಿದ್ದ ಬಿಬಿಎಂಪಿ, ಈಗ ಮೋರಿಯ ಸ್ಲ್ಯಾಬ್ ಮುಚ್ಚದೆ ತಾನು ಮಾಡಿದ ಯಡವಟ್ಟಿಗೆ ಸಮರ್ಥನೆ ಕೊಡೋ ಪ್ರಯತ್ನ ಮಾಡ್ತಿದೆ. ಇದನ್ನೆಲ್ಲಾ ಪಕ್ಕಕ್ಕಿಟ್ಟು ಆದಷ್ಟು ಬೇಗ ತೆರೆದ ಸ್ಲ್ಯಾಬ್ ಮುಚ್ಚಿ ಜನರ ಆರೋಗ್ಯ ಕಾಪಾಡಬೇಕಿದೆ.
ಇದನ್ನೂ ಓದಿ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಈಗ ಜೈಲಿನಲ್ಲಿ ಕೃಷಿ ಕೂಲಿ ಕೆಲಸಗಾರ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ