ಹೊಟ್ಟೆ ತುಂಬಿದ ಮೇಲೆ.. ‘ಬೆಂಗಳೂರು ಬಿಟ್ಟು ಹೋಗ್ತಿರೋದು ಈ ವರ್ಷದ ಬೆಸ್ಟ್​ ಡಿಸಿಷನ್’ ಎಂದ ಯುವತಿ!

ಹೊಸ ವರ್ಷದ ಸಡಗರದ ನಡುವೆ ಹೈದರಾಬಾದ್​ನ ಯುವತಿ ಶ್ರೇಯಾ ಅನ್ನೋಳು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಹೊಸ ವರ್ಷದ ಸಂಕಲ್ಪಗಳಲ್ಲಿ ಬೆಂಗಳೂರನ್ನ ತೊರೆಯೋದು ನನ್ನ ಮೊದಲ ಆಯ್ಕೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿ, ಬೆಂಗಳೂರಿಗರ ಆಕ್ರೋಶಕ್ಕೆ ಕಾರಣವಾಗಿದ್ದಾಳೆ.

author-image
Ganesh Kerekuli
hydrabad gir shreya
Advertisment

ಬೆಂಗಳೂರಲ್ಲಿ ಸಮಸ್ಯೆಗಳೇ ಇಲ್ಲ ಅಂತಲ್ಲ. ಹಾಗಂತ ಬದುಕು ಕಟ್ಟಿಕೊಳ್ಳಲು ಆಶ್ರಯ ನೀಡಿದ, ಹೊಟ್ಟೆ ತುಂಬಿಸಿಕೊಳ್ಳಲು ಮುಷ್ಟಿ ಅನ್ನ ನೀಡಿದ ಮಾತೃ ಸ್ವರೂಪದ ‘ಸಿಲಿಕಾನ್ ಸಿಟಿ’ಯನ್ನ ಪರಭಾಷಿಗರು ನಿಂದನೆ ಮಾಡ್ತಲೇ ಇರುತ್ತಾರೆ. ಇಲ್ಲಿಗೆ ಬಂದು, ಇಲ್ಲಿನ ಅನ್ನ, ನೀರು ಕುಡಿದು ದ್ರೋಹ ಬಗೆಯುವ ಕೆಲಸ ಮಾಡ್ತಿದ್ದಾರೆ. ಹೀಗಿದ್ದೂ ತನ್ನ ನೋವುಗಳನ್ನು ಮೌನದಲ್ಲೇ ನುಂಗಿ ಪರ ರಾಜ್ಯದವರನ್ನು ಬೆಂಗಳೂರು ಪೋಷಿಸಿಕೊಂಡು ಬರ್ತಿದೆ. 

ವಿಷಯ ಏನು?

ಹೊಸ ವರ್ಷದ ಸಡಗರದ ನಡುವೆ ಹೈದರಾಬಾದ್​ನ ಯುವತಿ ಶ್ರೇಯಾ ಅನ್ನೋಳು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಹೊಸ ವರ್ಷದ ಸಂಕಲ್ಪಗಳಲ್ಲಿ ಬೆಂಗಳೂರನ್ನ ತೊರೆಯೋದು ನನ್ನ ಮೊದಲ ಆಯ್ಕೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿ, ಬೆಂಗಳೂರಿಗರ ಆಕ್ರೋಶಕ್ಕೆ ಕಾರಣವಾಗಿದ್ದಾಳೆ. ಬೆಂಗಳೂರನ್ನ ಬಿಟ್ಟು ಹೋಗ್ತಿರೋದು ಈ ವರ್ಷ ಮಾಡಿದ ಬೆಸ್ಟ್ ಡಿಸಿಷನ್. ಬೆಂಗಳೂರುಗಿಂತ ಹೈದ್ರಾಬಾದ್ ಸೂಪರ್ ಎಂದು ಟ್ವಿಟರ್​ನಲ್ಲಿ ಯುವತಿ ಪೋಸ್ಟ್ ಮಾಡಿದ್ದಾಳೆ. 

ಇದನ್ನೂ ಓದಿ: ಕಲೆ ಯಾರ ಮನೆಯ ಆಸ್ತಿಯೂ ಅಲ್ಲ; ಆರಂಭದಲ್ಲಿ ಗಿಲ್ಲಿ ಜನರ ಮನಸ್ಸು ಗೆದ್ದಿದ್ದು ಹೇಗೆ..?

hydrabad gir shreya (1)

ಅದಕ್ಕೆ ಆಕೆ ಕಾರಣಗಳನ್ನೂ ನೀಡಿದ್ದಾಳೆ..

  • ರಸ್ತೆ ಗುಂಡಿಗಳ ಸಮಸ್ಯೆ ಇದೆ 
  • ಸ್ವಲ್ಪ ದೂರ ಟ್ರಾವೆಲ್ ಮಾಡೋಕೂ ಜಾಸ್ತಿ ಟೈಮ್ ಬೇಕು 
  • ಒಂದು ಬಾರಿ ಕ್ಯಾಬ್ ಬುಕ್ ಮಾಡೋಕು ಹೆಚ್ಚಿನ ಸಮಯ ಬೇಕು 
  • ನೀರಿನ ಸಮಸ್ಯೆ
  • ಕಳಪೆ ಆಹಾರ 
  • ದುಬಾರಿ ಜೀವನ 
  • ಹೀಗೆ ಎಕ್ಸ್ ನಲ್ಲಿ ಪೋಸ್ಟ್ ಹಾಕಿರೋ ಯುವತಿ ಶ್ರೇಯ 

ಹೈದರಾಬಾದ್​ನಲ್ಲಿ ಜೀವನ ನೆಮ್ಮದಿಯಾಗಿದೆ. ಆರಾಮಾಗಿರ್ತೀನಿ ಎಂದು ಪೋಸ್ಟ್ ಮಾಡಿರುವ ಶ್ರೇಯಾ ಪೋಸ್ಟ್​ಗೆ ಆಕ್ರೋಶ ವ್ಯಕ್ತವಾಗಿದೆ. ಕೆಲವರು ನೀವು ಇಲ್ಲಿ ಇರೋದಕ್ಕಿಂತ ಅಲ್ಲಿಗೆ ಹೋಗೋದೇ ಬೆಸ್ಟ್. ಇಲ್ಲಿನ ಅನ್ನ ತಿಂದು ಹೋಗುವಾಗ ಬೆಂಗಳೂರಿಗೆ ಅವಮಾನ ಮಾಡಬೇಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. 

ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಮದುವೆಗೆ ಮುಹೂರ್ತ ನಿಗದಿ.. ರಾಜಸ್ಥಾನ ಪ್ಯಾಲೇಸ್​ನಲ್ಲಿ ಮದುವೆ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Bengaluru News Hyderabad
Advertisment