/newsfirstlive-kannada/media/media_files/2025/12/30/rashmika-2025-12-30-11-52-03.jpg)
ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆ 2026 ಫೆಬ್ರವರಿ 26 ರಂದು ನಡೆಯಲಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ನಿಶ್ಚಿತಾರ್ಥ ಕಾರ್ಯಕ್ರಮದಂತೆ ವಿವಾಹ ಸಮಾರಂಭ ಕೂಡ ಕುಟುಂಬಸ್ಥರ ಹಾಗೂ ಆಪ್ತರ ಸಮ್ಮುಖದಲ್ಲಷ್ಟೇ ನಡೆಯಲಿದೆ.
ಇದನ್ನೂ ಓದಿ: ಟ್ರೋಲ್​ ಮಾಡಿದ್ದಕ್ಕೆ ಅನುಶ್ರೀ ಗರಂ.. ಖಡಕ್ ಉತ್ತರ, ಅಸಲಿಗೆ ಆಗಿದ್ದೇನು..?
/filters:format(webp)/newsfirstlive-kannada/media/media_files/2025/10/03/rashmika-2025-10-03-23-27-15.jpg)
ವರದಿಗಳ ಪ್ರಕಾರ, ವಿವಾಹ ಕಾರ್ಯಕ್ರಮವು ರಾಜಸ್ಥಾನದ ಉದಯ್​ಪುರ ಪ್ಯಾಲೇಸ್​​ನಲ್ಲಿ ನಡೆಯಲಿದೆ. ಮದುವೆ ಬಳಿಕ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಆರತಕ್ಷತೆ ಕಾರ್ಯಕ್ರಮವು ಹೈದರಾಬಾದ್​ನಲ್ಲಿ ಆಯೋಜನೆಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರಿಗೆ ಆಹ್ವಾನ ನೀಡಲಿದ್ದಾರೆ. ಈ ಜೋಡಿ 2025, ಅಕ್ಟೋಬರ್ 3 ರಂದು ನಿಶ್ಚಿತಾರ್ಥ ನೆರವೇರಿಸಿಕೊಂಡಿತ್ತು.
ಇದನ್ನೂ ಓದಿ:ವೈಭವ್ ಸೂರ್ಯವಂಶಿಯನ್ನ ಯಾಕೆ BCCI ಟೀಂ ಇಂಡಿಯಾಗೆ ಆಯ್ಕೆ ಮಾಡ್ತಿಲ್ಲ? ಅಸಲಿ ಉತ್ತರ ಇಲ್ಲಿದೆ..!
/filters:format(webp)/newsfirstlive-kannada/media/media_files/2025/10/21/vijay-devarkonda-rashmika-2025-10-21-12-27-19.jpg)
ಇನ್ನೊಂದು ವಿಚಾರ ಅಂದ್ರೆ ಇಬ್ಬರೂ ಕೂಡ ಎಂಗೆಜ್ಮೆಂಟ್ ಆಗಿರುವ ವಿಚಾರವನ್ನೂ ಇನ್ನೂ ಕೂಡ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ. ಇತ್ತೀಚೆಗೆ ಹಾಲಿವುಡ್ ವರದಿಗಾರನೊಬ್ಬ ರಶ್ಮಿಕಾರನ್ನು ಸಂದರ್ಶನ ಮಾಡಿದ್ದ. ಈ ವೇಳೆ ಮದುವೆ ವದಂತಿ ಬಗ್ಗೆ ಕೇಳಲಾಗಿರುವ ಪ್ರಶ್ನೆಗೆ ಉತ್ತರಿಸಿದ್ದ ರಶ್ಮಿಕಾ, ಮದುವೆಯನ್ನು ನಾನು ದೃಢಕರಿಸಲು ಅಥವಾ ನಿರಾಕರಿಸಲ್ಲ ಇಷ್ಟಪಡುವುದಿಲ್ಲ. ಅದರ ಬಗ್ಗೆ ನಾವು ಯಾವಾಗ ಹೇಳಬೇಕು ಅಂತಾ ಹೇಳ್ತೇವೆ.
ಇದನ್ನೂ ಓದಿ: ಕಲೆ ಯಾರ ಮನೆಯ ಆಸ್ತಿಯೂ ಅಲ್ಲ; ಆರಂಭದಲ್ಲಿ ಗಿಲ್ಲಿ ಜನರ ಮನಸ್ಸು ಗೆದ್ದಿದ್ದು ಹೇಗೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us