Advertisment

ಬೆಂಗಳೂರು ಕ್ಲೀನ್​ ಸಿಟಿಗೆ GBA ಹೊಸ ಐಡಿಯಾ.. ಬಹುಮಾನ ಕೂಡ ಗೆಲ್ಲಬಹುದು..!

ಕ್ಲೀನ್​ ಸಿಟಿ ಸಿಲಿಕಾನ್​ ಸಿಟಿ ಬೆಂಗಳೂರಿಗಾಗಿ ಜಿಬಿಎ ನಾನಾ ಕಸರತ್ತು ಮಾಡ್ತಿದೆ. ಇನ್ಮುಂದೆ ಕಸ ಹಾಕಿದ್ರೆ ಮನೆ ಮುಂದೆ ಕಸದ ರಾಶಿ ಬೀಳುತ್ತೆ ಅನ್ನೋದನ್ನೂ ಜಿಬಿಎ PLAN ಮಾಡಿ IMPLEMENT ​ ಮಾಡ್ತಿದೆ. ಆದ್ರೂ ಕಸ ಕಮ್ಮಿ ಆಗ್ತಿದ್ಯಾ? ಇಲ್ಲ.. ಹೀಗಾಗಿ ಹೊಸ ಐಡಿಯಾ ಮಾಡಿದೆ

author-image
Ganesh Kerekuli
BBMP Auto
Advertisment

ಕ್ಲೀನ್​ ಸಿಟಿ ಸಿಲಿಕಾನ್​ ಸಿಟಿ ಬೆಂಗಳೂರಿಗಾಗಿ ಜಿಬಿಎ ನಾನಾ ಕಸರತ್ತು ಮಾಡ್ತಿದೆ. ಇನ್ಮುಂದೆ ಕಸ ಹಾಕಿದ್ರೆ ಮನೆ ಮುಂದೆ ಕಸದ ರಾಶಿ ಬೀಳುತ್ತೆ ಅನ್ನೋದನ್ನೂ ಜಿಬಿಎ PLAN ಮಾಡಿ IMPLEMENT ​ ಮಾಡ್ತಿದೆ. ಆದ್ರೂ ಕಸ ಕಮ್ಮಿ ಆಗ್ತಿದ್ಯಾ? ಇಲ್ಲಾ.. ಹೀಗಾಗಿ ಡಿಫರೆಂಟ್​​ ಐಡಿಯಾಕ್ಕಿಳಿದಿರೋ ಪಾಲಿಕೆ ನಾನಾ ನೀನಾ ಅನ್ನೋ ಫೈಪೋಟಿ ಸ್ಪರ್ಧೆಗೆ ಇಳಿದು ಬಿಟ್ಟಿದೆ..

Advertisment

ಇದನ್ನೂ ಓದಿ: BBK12 ತಮ್ಮದೇ ಗುಟ್ಟು ರಟ್ಟು ಮಾಡಿದ್ರಾ ಜಾಹ್ನವಿ?   

‘ವೇಸ್ಟೇಜ್’ ​ಅಂದ್ರೆ ಭಯ ಪಡ್ಬೇಕು.. ವೆಸ್ಟೇಜ್​ ಬಗ್ಗೆನೂ ತಲೆ ಕಡಿಸಿಕೊಳ್ಳಬೇಕು.. ವೆಸ್ಟೇಜ್​ಗೂ ಒಂದು ಕಾಲ ಬರುತ್ತೆ ಅನ್ನೋದನ್ನ ‘ಜಿಬಿಎ’ ಮಾಡಿ ತೋರಿಸಿದೆ. ಇದು ಬೆಂಗಳೂರನ್ನ ಕಸ ಮುಕ್ತಗೊಳಿಸ್ಬೇಕು ಅನ್ನೋ ಇನ್​ಟೆನ್ಶನ್​ನಿಂದ ಪಾಲಿಕೆ ಮಾಡಿರೋ ಐಡಿಯಾ.. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರೋ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಸ್ವಚ್ಛತಾ ಸ್ಪರ್ಧೆ ಆಯೋಜಿಸಿದ್ದಾರೆ.. ಗೆದ್ದವರಿಗೆ 1 ಲಕ್ಷ ಬಹುಮಾನ ಕೊಡ್ತಾರಂತೆ.. 

ಸ್ವಚ್ಛಗೊಳಿಸಿ ಬಹುಮಾನ ಗೆಲ್ಲಿ

  • ಅ. 8  ಬೆ. 10.30ರಿಂದ ಸಂಜೆ 4.00ರವರೆಗೆ ಸ್ಪರ್ಧೆ ಕಾರ್ಯಕ್ರಮ 
  • ಉತ್ತರ ನಗರ ಪಾಲಿಕೆ ಹೆಬ್ಬಾಳ, ಪುಲಿಕೇಶಿನಗರ, ಸರ್ವಜ್ಞನಗರ
  • ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ ರಾಜರಾಜೇಶ್ವರಿ
  • ಉತ್ತರ ನಗರ ಪಾಲಿಕೆಯ ವ್ಯಾಪ್ತಿಗಳಲ್ಲಿ ಈ ಸ್ಪರ್ಧೆ ನಡೆಯಲಿದೆ
  • 93.9 ಕಿ.ಮೀ ರಸ್ತೆಗಳಲ್ಲಿ ತ್ಯಾಜ್ಯ, ಮರದ ರೆಂಬೆ-ಕೊಂಬೆ ತೆರವು 
  • ನಗರದ ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಮಾಡಬೇಕು
  • ಮಹಾ ಸ್ವಚ್ಛತಾ ಅಭಿಯಾನದಲ್ಲಿ ಪಾಲಿಕೆಯ ಘನತ್ಯಾಜ್ಯ ವಿಭಾಗ,  
  • ಇಂಜಿನಿಯರಿಂಗ್ ವಿಭಾಗ, ಇತರೆ ಇಲಾಖೆಗಳು ಪಾಲ್ಗೊಳ್ಳಲಿವೆ
  • ಉತ್ತಮವಾಗಿ ಸ್ವಚ್ಛತಾ ಕಾರ್ಯ ನಿರ್ವಹಿಸಿದ ಕ್ಷೇತ್ರಗಳನ್ನು ಆಯ್ಕೆ
  •  NGO /  ಸಂಘ ಸಂಸ್ಥೆಗಳ ಮೂಲಕ ತಪಾಸಣೆ ಮಾಡಿಸಿ ಆಯ್ಕೆ 
  • ಅಚ್ಚುಕಟ್ಟಾಗಿ ಕ್ಲೀನ್​ ಮಾಡೋ ಪೌರಕಾರ್ಮಿಕರಿಗೆ ಬಹುಮಾನ
  • ಪ್ರಥಮ ಬಹುಮಾನ ₹1 ಲಕ್ಷ ರೂ. ದ್ವಿತೀಯ ಬಹುಮಾನ ₹50 ಸಾವಿರ
  • ತೃತೀಯ ಬಹುಮಾನವಾಗಿ ₹25 ಸಾವಿರ ಹಣವನ್ನ ಘೋಷಣೆ 

ಒಟ್ಟಾರೆ ನಗರವನ್ನ ಕ್ಲೀನ್​ ಮಾಡ್ಬೇಕು ಅಂತ ಪಾಲಿಕೆ ಇಟ್ಟಿರೋ ಈ ಹೆಜ್ಜೆ ನಿಜಕ್ಕೂ ಶ್ಲಾಫನೀಯ ಆದ್ರೆ ಬಹುಮಾನ ಯಾಕೆ ಅನ್ನೋದೇ ಪ್ರಶ್ನೆ.. ನಗರವನ್ನ ಸ್ವಚ್ಚಗೊಳಿಸೋದು ಪೌರ ಕಾರ್ಮಿಕರ ಜವಬ್ದಾರಿ, ಕರ್ತವ್ಯ ಆದ್ರೆ ಜನರ ದುಡ್ಡಲ್ಲಿ ಅವ್ರಿಗೆ ಬಹುಮಾನ ಕೊಡೋದು ಎಷ್ಟು ಸರಿ ಅಲ್ವಾ? 

Advertisment

ಇದನ್ನೂ ಓದಿ: ಹಳ್ಳಿ ಸೊಗಡಿನ ಗಾಸಿಪ್ ನಾರಿಯರಾದ ಜಾಹ್ನವಿ, ಕಾವ್ಯ.. ಅಯ್ಯಯ್ಯೋ, ಅಶ್ವಿನಿ ಬಗ್ಗೆ ಹೀಗಾ ಹೇಳೋದು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

GBA Greater Bengaluru Authority
Advertisment
Advertisment
Advertisment