/newsfirstlive-kannada/media/media_files/2025/12/11/new-year-1-2025-12-11-10-00-24.jpg)
ಕೆಲವೇ ದಿನಗಳಷ್ಟೇ ಬಾಕಿ.. 2025ರ ಕ್ಯಾಲೆಂಡರ್​ ತೆಗೆದು 2026ರ ಕ್ಯಾಲೆಂಡರ್ ಹಾಕೋಕೆ. ಅದಾಗಲೇ ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್​ ವೈಬ್ ಜೋರಾಗಿದೆ. ಪಬ್​, ರೆಸ್ಟೋರೆಂಟ್​ಗಳಲ್ಲಿ ಚೀಯರ್ಸ್​ ಅನ್ನೋ ಸೌಂಡ್​ ಜೊತೆಗೆ ಡಿ.ಜೆ ಸೌಂಡ್​ ಗಮ್ಮತು ಜೋರಾಗಿದೆ. ಈ ಮಧ್ಯೆ ಪೊಲೀಸರು ಕೂಡ ಸಖತ್ ತಯಾರಿ ಮಾಡ್ಕೊಂಡಿದ್ದಾರೆ.
ಹೊಸ ವರ್ಷಕ್ಕೆ ಕೆಲವೇ ಕೆಲವು ದಿನಗಳು ಬಾಕಿ ಇರೋ ಹಿನ್ನಲೇ ನಗರದಾದ್ಯಂತ ಪೊಲೀಸ್ರು ಹೈ ಅಲರ್ಟ್ ಆಗಿದ್ದಾರೆ. ನ್ಯೂ ಇಯರ್​ ವೆಲಕಂ ಮಾಡೋಕೆ ಬೆಂಗಳೂರು ಸಜ್ಜಾಗಿದೆ. ನ್ಯೂ ಇಯರ್​ ಹಾಟ್ ಸ್ಪಾಟ್​ ಅಂತಾನೇ ಕರೆಸಿಕೊಳ್ಳುವ ಎಂ.ಜಿ ರೋಡ್, ಬ್ರಿಗೇಡ್ ರೋಡ್, ಕೋರಮಂಗಲದಲ್ಲಿ ಅದಾಗಲೇ ಸೆಲೆಬ್ರೇಷನ್ ಮೋಡ್ ಆನ್ ಆಗಿದೆ.. ಹೀಗಾಗಿ, ಪೊಲೀಸರು ನಗರದಾದ್ಯಂತ ಬ್ಯಾರಿಕೆಡ್ ಹಾಕಿ ವಾಹನಗಳ ತಪಾಸಣೆ ಮುಂದಾಗಿದ್ದು, ಮಾದಕ ವಸ್ತುಗಳ ಸಾಗಾಟ, ಮಾರಾಟದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಬ್ಯಾಟಿಂಗ್ ಆರ್ಡರ್ ಸ್ಥಾನ ತುಂಬಲು ತಂಡಕ್ಕೆ ಸಿಕ್ಕೇ ಬಿಟ್ರು ಭಲೇ ಆಟಗಾರ..!
/filters:format(webp)/newsfirstlive-kannada/media/post_attachments/wp-content/uploads/2024/01/NEW-YEAR.jpg)
ಹೊಸವರ್ಷದಲ್ಲಿ ಹದ್ದಿನ ಕಣ್ಣಿಡಲಿರುವ ಡ್ರೋನ್​ ಕ್ಯಾಮೆರಾ
15 ದಿನಗಳು ಬಾಕಿ ಇರುವ ಮುನ್ನವೇ ಹೋಟೆಲ್, ಪಬ್, ರೆಸ್ಟೋರೆಂಟ್​ಗಳು ಬುಕಿಂಗ್ ಆಗಿದ್ದು, ಪಾರ್ಟಿ ಹಾಟ್ ಸ್ಪಾಟ್ ಗಳಲ್ಲಿ ಪೊಲೀಸರು ಚೆಕಿಂಗ್ ನಡೆಸಿದ್ದಾರೆ. ಸಿಸಿಟಿವಿ, ಅಲ್ಲಿನ ಸೆಕ್ಯುರಿಟಿ ವ್ಯವಸ್ಥೆ, ಬೌನ್ಸರ್, ಎಮೆರ್ಜೆನ್ಸಿ ಎಕ್ಸಿಟ್, ಹೀಗೆ ಎಲ್ಲಾ ಆಯಾಮಗಳಲ್ಲಿಯೂ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. ವಿಶೇಷ ಅಂದ್ರೆ ನಗರದ ಪ್ರಮುಖ ಕಡೆ ಪ್ರಾಯೋಗಿಕವಾಗಿ ಡ್ರೋನ್​ ಹಾರಾಟ ಶುರುವಾಗಿದ್ದು, ಈ ಮೂಲಕ ಹದ್ದಿನ ಕಣ್ಣಿಡಲು ತರಬೇತಿಯೂ ಜೋರಾಗಿದೆ.
ಖುದ್ದು ಡಿಸಿಪಿ, ಎಸಿಪಿಗಳಿಂದಲೇ ಪರಿಶೀಲನೆ ಕಾರ್ಯ ಶುರುವಾಗಿದ್ದು, ಸಂಜೆ ಮತ್ತು ರಾತ್ರಿ ಪೀಕ್ ಹವರ್ ನಲ್ಲಿ ಸ್ಪೆಷಲ್ ಡ್ರೈವ್ ಕೂಡ ಮಾಡಲಾಗ್ತಾಯಿದೆ. ಇತ್ತೀಚೆಗೆ ದೆಹಲಿಯಲ್ಲಿ ಬಾಂಬ್ ಬ್ಲಾಸ್ಟ್ ನಡೆದ ಹಿನ್ನಲೇ ಎಲ್ಲಾ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಇರಲು ಕೇಂದ್ರ ತನಿಖಾ ಸಂಸ್ಥೆಗಳಿಂದಲೂ ಸೂಚನೆ ಬಂದಿದೆ. ಒಟ್ನಲ್ಲಿ ಬೆಂಗಳೂರು ಸಿಟಿಯಲ್ಲಿ ಹದಿನೈದು ದಿನದ ಮುಂಚೆಯೇ ನ್ಯೂ ಇಯರ್ ವೈಬ್ ಶುರುವಾಗಿದ್ದು, ಒಂದಷ್ಟು ರೂಲ್ಸ್​ ಕೂಡ ಜಾರಿಗೆ ಬರಲಿದೆ. ಸೋ ಎಲ್ಲರೂ ರೂಲ್ಸ್​ ಫಾಲೋ ಮಾಡಿ ಹೊಸ ವರ್ಷವನ್ನ ಬರಮಾಡಿಕೊಳ್ಳಿ.
ಇದನ್ನೂ ಓದಿ: ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತಾ..? ಡಾ. ಅಂಜನಪ್ಪ ಕೊಟ್ಟ ಮಾಹಿತಿ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us