/newsfirstlive-kannada/media/media_files/2025/12/14/egg-2025-12-14-16-49-18.jpg)
ಮೊಟ್ಟೆ ಸೇವಿಸೋದ್ರಿಂದ ಆರೋಗ್ಯಕ್ಕೆ ಕಂಟಕನಾ? ಮೊಟ್ಟೆಯಲ್ಲಿ ಕ್ಯಾನ್ಸರ್​ ಕಾರಕ ಪತ್ತೆಯಾಗಿದ್ಯಾ?. ಮೊಟ್ಟೆ ತಿಂದರೇ ಮಾರಕ ಕ್ಯಾನ್ಸರ್​ ಬರುತ್ತಾ? ಹೀಗೊಂದು ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗ್ತಿದೆ. ಬೆನ್ನಲ್ಲೇ ಮೊಟ್ಟೆ ಸೇವನೆಗೆ ಜನ ಭಯ ಬೀಳ್ತಿದ್ದಾರೆ.
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಕುರಿತು ಚರ್ಚೆ!
ಕೆಲವು ಜನಪ್ರಿಯ ಬ್ರ್ಯಾಂಡ್‌ಗಳ ಮೊಟ್ಟೆಗಳಲ್ಲಿ AOZ (ನೈಟ್ರೋಫ್ಯುರಾನ್) ಎಂಬ ಕ್ಯಾನ್ಸರ್ ಕಾರಕ ಅಂಶ ಪತ್ತೆ ಎಂಬ ಸುದ್ದಿ ವೈರಲ್ ಆಗಿದೆ. ಡಿಎನ್ಎ ಡ್ಯಾಮೇಜ್ ಮಾಡಿ ಕ್ಯಾನ್ಸರ್ ಉಂಟುಮಾಡುವ ಸಾಧ್ಯತೆ ಎನ್ನಲಾಗುತ್ತಿದೆ. ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚು ನೈಟ್ರೋಫ್ಯುರಾನ್ ಬಳಕೆ ಮಾಡಲಾಗುತ್ತಿದೆ. ಹಾಗಾಗಿ, ಕ್ಯಾನ್ಸರ್​ಗೆ ಕಾರಣವಾಗುತ್ತಿದೆ ಎಂಬ ಚರ್ಚೆ ಇದೆ.
ಇದನ್ನೂ ಓದಿ: ಮೊಟ್ಟೆಗಳಿಗೂ ‘Expiry date’! ಕೆಟ್ಟು ಹೋದ ಮೊಟ್ಟೆಗಳನ್ನು ಗುರುತಿಸೋದು ಹೇಗೆ..?
/filters:format(webp)/newsfirstlive-kannada/media/post_attachments/wp-content/uploads/2024/04/EGG.jpg)
‘ಇದರ ಹಿಂದೆ ಮಾಫಿಯಾ..’
ಈ ಚರ್ಚೆಯಿಂದ ಮೊಟ್ಟೆ ಸೇವಿಸುವವರಲ್ಲಿ ಆತಂಕ ಹೆಚ್ಚಾಗಿದೆ. ಮೊಟ್ಟೆಯ ಬಳಕೆ ಹಾಗೂ ಮೊಟ್ಟೆ ಅನುಕೂಲದ ಬಗ್ಗೆ ಜನ ಗಾಬರಿಗೆ ಒಳಗಾಗಿದ್ದಾರೆ. ಇದೇ ವಿಚಾರಕ್ಕೆ ನ್ಯೂಸ್​ಫಸ್ಟ್​ ಜೊತೆ ಮಾತನ್ನಾಡಿರುವ ಹಿರಿಯ ವೈದ್ಯ ಡಾ.ಅಂಜನಪ್ಪ.. ಅಧ್ಯಯನದಲ್ಲಿ ಒಂದೆರಡು ಅಂಶಗನ್ನು ಸಂಶೋಧಕರು ಕಂಡು ಹಿಡಿದಿರಬಹುದು. ಇದು ಸಮುದ್ರದಲ್ಲಿ ಎಲ್ಲೋ ಸಿಕ್ಕ ಚುಕ್ಕೆ ಎನ್ನಬಹುದು.
ಇದನ್ನೂ ಓದಿ:ಮೆಸ್ಸಿ ಭಾರತಕ್ಕೆ ಬಂದ ವಿಮಾನದ ಬೆಲೆ 1 ಬಿಲಿಯನ್ ಡಾಲರ್! ಬೆರಗುಗೊಳಿಸುವ ಸೌಕರ್ಯಗಳು..!
ಇಂಥ ವಿಚಾರಗಳನ್ನೆಲ್ಲ ಮೆಡಿಕಲ್ ಕಾಲೇಜುಗಳು ಸೆಮಿನಾರ್​ಗೆ ಇಟ್ಟುಕೊಳ್ಳಬೇಕು. ಪಬ್ಲಿಕ್ ಮುಂದೆ ಪ್ರಸೆಂಟ್ ಮಾಡಬಾರದು. ಇದು ನಂಬಬಹುದಾದ ವಿಚಾರ ಅಲ್ಲ. ಮಕ್ಕಳ ಬ್ರೈನ್ ಡೆವಲಪ್​​ಗೆ ತುಂಬಾನೇ ಒಳ್ಳೆಯದು. ಮೊಟ್ಟೆ ತಿಂದರೆ ಯಾವುದೇ ಹಾರ್ಟ್ ಅಟ್ಯಾಕ್ ಆಗಲ್ಲ. ಗರ್ಭಿಣಿಯರಿಗೆ ಮೊಟ್ಟೆ ಬೇಕೇಬೇಕು. ಮೊಟ್ಟೆಯನ್ನು ತಿಂದರೆ ಹಳದಿಯನ್ನೂ ತಿನ್ನಬೇಕು. ಇದರ ಹಿಂದೆ ದೊಡ್ಡ ಮಾಫಿಯಾ ಇದೆ. ಯಾಕೆಂದರೆ ಮೊಟ್ಟೆಯ ಬೆಲೆ ಕೂಡ ಏರಿಕೆ ಆಗಿದೆ. ಮೊಟ್ಟೆ ತಿಂದರೆ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಎಲ್ಲರೂ ಮೊಟ್ಟೆ ತಿನ್ನಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಕೊಹ್ಲಿ ಬ್ಯಾಟಿಂಗ್ ಆರ್ಡರ್ ಸ್ಥಾನ ತುಂಬಲು ತಂಡಕ್ಕೆ ಸಿಕ್ಕೇ ಬಿಟ್ರು ಭಲೇ ಆಟಗಾರ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us