/newsfirstlive-kannada/media/media_files/2025/09/21/siddaramaiah-meeting-2-2025-09-21-08-38-19.jpg)
ದಿನೇ ದಿನೇ ಬೆಂಗಳೂರಿನ ರಸ್ತೆಗಳಲ್ಲಿನ ಗುಂಡಿಗಳ ಸುದ್ದಿ ಹೆಡ್​ಲೈನ್ಸ್​ ಆಗ್ತಿದ್ದು, ರಾಜ್ಯ ಸರ್ಕಾರ ಬೆಂಗಳೂರಿಗರ ಕೆಂಗಣ್ಣಿಗೆ ಗುರಿಯಾಗ್ತಿದೆ. ದೊಡ್ಡ ದೊಡ್ಡ ಕಂಪನಿಗಳೂ ಕೂಡ ರಸ್ತೆ ಗುಂಡಿ ಸಮಸ್ಯೆ ಬಗೆಹರಿಸದಿದ್ರೆ.. ಬೆಂಗಳೂರಿಗೆ ಬೈಬೈ ಹೇಳ್ತೀವಿ ಎನ್ನುತ್ತಿವೆ. ಇನ್ನು ನ್ಯೂಸ್​ಫಸ್ಟ್​ ಸುದ್ದಿ ವಾಹಿನಿ ಕೂಡ, ಜನತಾ ರಿಪೋರ್ಟ್​ ಮೂಲಕ ಬೆಂಗಳೂರಿನ ರಸ್ತೆಗಳ ಚಿತ್ರಣವನ್ನು ಜನರಿಂದಲೇ ಬಹಿರಂಗ ಪಡಿಸುವ ಮೂಲಕ ಸರ್ಕಾರದ ಗಮನಕ್ಕೆ ತಂದಿದೆ. ಹೀಗೆ ಜನಾಕ್ರೋಶದ ಬೆನ್ನಲ್ಲೇ ಕೊನೆಗೂ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ.. ಬೆಂಗಳೂರಿನ ರಸ್ತೆಗಳನ್ನು ಗುಂಡಿ ಮುಕ್ತ ಮಾಡಲು ಡೆಡ್​ಲೈನ್​ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ಮೀಟಿಂಗ್​
ಬೆಂಗಳೂರಿನ ರಸ್ತೆ ಗುಂಡಿ ವಿಚಾರ ದೇಶ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗ್ತಿದೆ. ಈ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು. ಸಭೆಯಲ್ಲಿ ರಸ್ತೆ ಗುಂಡಿಗಳ ವಿಚಾರವಾಗಿ ಅಧಿಕಾರಿಗಳ ಬೆವರಿಳಿಸಿದ ಸಿಎಂ, ಅಕ್ಟೋಬರ್ ಅಂತ್ಯ ವೇಳೆಗೆ ಎಲ್ಲಾ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಖಡಕ್​ ಆದೇಶ ನೀಡಿದ್ದಾರೆ. ಗುಂಡಿ ಮುಚ್ಚಲು ಒಂದು ತಿಂಗಳ ಗಡುವುಕೊಟ್ಟ ಸಿಎಂ, ಬಳಿಕ ಇಂಜಿನಿಯರ್‌ಗಳನ್ನು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಇವತ್ತು IND vs PAK ಮ್ಯಾಚ್.. ಕುತೂಹಲ ಮೂಡಿಸಿದ ಪಾಕಿಸ್ತಾನದ ಈ ನಡೆ..!
ಸಿದ್ದರಾಮಯ್ಯ ಕ್ಲಾಸ್..!
ರಸ್ತೆ ಗುಂಡಿ ಮುಚ್ಚಲು ನಿಮಗೇನು ಕಷ್ಟ? ನಿಮ್ಮಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ನಾಚಿಕೆ ಆಗುವುದಿಲ್ಲವೇ ನಿಮಗೆ? ಮಚ್ಚಿರುವ ಗುಂಡಿಗಳೂ ನೆಟ್ಟಗಿಲ್ಲ. ಗುಂಡಿ ಮುಚ್ಚಿ ಅಂತ ಕರೆದು ಹೇಳಬೇಕೇ? ಜನರ ಕಷ್ಟ ಗೊತ್ತಾಗುವುದಿಲ್ಲವೇ? ಗುಂಡಿ ಮುಚ್ಚುವುದರಲ್ಲೂ ಗುಣಮಟ್ಟ ಇಲ್ಲ. ವೈಜ್ಞಾನಿಕವಾಗಿ ಇರಲ್ಲ. ರಸ್ತೆ ಗುಂಡಿಗಳನ್ನು ಮುಚ್ಚಲು ಕಟ್ಟುನಿಟ್ಟಿನ ಕ್ರಮ ವಹಿಸಲೇಬೇಕು. ಇಲ್ಲದಿದ್ರೆ, ನಾನು ಯಾರ ಮುಖವನ್ನೂ ನೋಡಲ್ಲ, ಮುಲಾಜಿಲ್ಲದೇ ಸಸ್ಪೆಂಡ್ ಮಾಡಿ ಮನೆ ಕಳಿಸಬೇಕಾಗುತ್ತೆ. ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು. ಜಿಬಿಎ ಮುಖ್ಯ ಆಯುಕ್ತರು ವಾರಕ್ಕೊಮ್ಮೆ ಸಭೆಯನ್ನು ನಡೆಸಬೇಕು. 15 ದಿನಗಳ ಬಳಿಕ ಮತ್ತೊಮ್ಮೆ ಸಭೆ ನಡೆಸಿ ಪ್ರಗತಿ ಪರಿಶೀಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅದೇನೆ ಇರಲಿ, ಬೆಂಗಳೂರಿನ ಹದಗೆಟ್ಟ ರಸ್ತೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ ಕಳೆಯುತ್ತಿವೆ.. ಇದೀಗ ಸಿಎಂ ಖಡಕ್​ ಎಚ್ಚರಿಕೆಯಿಂದಲಾದ್ರೂ ಬೆಂಗಳೂರಿನ ರಸ್ತೆಗಳು ಗುಂಡಿ ಮುಕ್ತ ಆಗ್ತಾವಾ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:ಒಕ್ಕಲಿಗ ನಾಯಕರಿಂದ ಒಗ್ಗಟ್ಟು ಪ್ರದರ್ಶನ.. ಜಾತಿ ಗಣತಿ ಬಗ್ಗೆ ಸರ್ಕಾರಕ್ಕೆ HDK ಕೊಟ್ಟ ಸಲಹೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ