/newsfirstlive-kannada/media/media_files/2025/09/21/hd-kumaraswamy-dk-shivakumar-7-2025-09-21-08-19-11.jpg)
ರಾಜ್ಯದಲ್ಲಿ ಜಾತಿಗಣತಿ ನಡೆಯೋದು ಫಿಕ್ಸ್ ಆಗಿದೆ. ತೀವ್ರ ವಿರೋಧದ ಮಧ್ಯೆ ಸೋಮವಾರದಿಂದ ಜಾತಿ ಜನಗಣತಿ ನಡೆಯಲಿದೆ. ಆದ್ರೆ, ಹಿಂದೂ ಕ್ರೈಸ್ತ ಅನ್ನೋ ಪದ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು, ಅದನ್ನು ತೆಗೆದು ಹಾಕಲಾಗಿದೆ ಎಂದಿದ್ದಾರೆ.
ಕರುನಾಡಿನಲ್ಲೆಡೆ ಜಾತಿಯ ಜ್ವಾಲೆ ಧಗಧಗಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಕೈ ಹಾಕಿರುವ ಜಾತಿ ಜನಗಣತಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದ್ರ ಮಧ್ಯೆ ನಾಳೆಯಿಂದ ಕ್ಯಾಸ್ಟ್ ಸೆನ್ಸಸ್ ನಡೆಯೋದು ಖಚಿತವಾಗಿದೆ. ಹಿಂದೂ ಕ್ರೈಸ್ತ್ರ ಎಂಬ ಪದದ ಗೊಂದಲ ಮಾತ್ರ ಬಗೆಹರಿಯದಾಗಿದೆ. ಇದು ವಿಪಕ್ಷಗಳಿಗೆ ಅಸ್ತ್ರವಾಗಿ ಸಿಕ್ಕಿದ್ದು, ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ, ಗೊಂದಲ ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ.
ಇದನ್ನೂ ಓದಿ:ಇವತ್ತು ಮತ್ತೊಂದು ವಿಸ್ಮಯ.. ಸೂರ್ಯ ಗ್ರಹಣದ ಸಮಯ ಹಾಗೂ ಎಲ್ಲೆಲ್ಲಿ ಗೋಚರಿಸುತ್ತದೆ..?
ವಿವಾದಿತ ಕಾಲಂಅನ್ನು ಕೈಬಿಡಲಾಗಿದೆ ಎಂದು ಸಿಎಂ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಜಾತಿ ಹೆಸರು ಸೇರ್ಪಡೆಗೆ ಆಕ್ಷೇಪ ವ್ಯಕ್ತವಾಗಿದೆ. ಸಮೀಕ್ಷೆಯ ಕೆಲ ಪ್ರಶ್ನೆಗಳ ಬಗ್ಗೆ ರಾಜ್ಯಪಾಲರು ಕೂಡ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರೋದು ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಬೆನ್ನಲ್ಲೇ ಗದಗದಲ್ಲಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಸಿಎಂ, ಕ್ರಿಶ್ಚಿಯನ್ ಧರ್ಮದಡಿ ವಿವಿಧ ಜಾತಿಗಳ ಉಲ್ಲೇಖವನ್ನು ಕೈಬಿಡಲಾಗಿದೆ ಎಂದಿದ್ದಾರೆ. ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆಯಲ್ಲಿ ಅಗತ್ಯ ಇರೋದನ್ನು ಇಟ್ಟುಕೊಳ್ಳುತ್ತೆ. ಅನಗತ್ಯವಾಗಿ ಇರೋದನ್ನು ತೆಗೆದು ಹಾಕುತ್ತೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಟೀಮ್ ಇಂಡಿಯಾ ಜೊತೆ ವಿಶೇಷ ದಾಖಲೆ ಬರೆದ ಒಮಾನ್ ಓಪನರ್ಸ್​.. ಏನದು?
ಜಾತಿ ಗಣತಿ ಮುಂದಕ್ಕೆ ಹಾಕಿ.. ಇಲ್ಲ ವಿಸ್ತರಿಸಿ
ಜಾತಿ ಗಣತಿ ವಿಚಾರವಾಗಿ ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿ, ರಾಜ್ಯ ಸರ್ಕಾರಕ್ಕೆ ಕೆಲವೊಂದು ಸಲಹೆ ಗಳನ್ನು ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, 15 ದಿನದಲ್ಲಿ ಆರೂವರೆಗೆ ಕೋಟಿ ಜನರ ಸಮೀಕ್ಷೆ ಹೇಗೆ ಸಾಧ್ಯ? ವಸ್ತು ನಿಷ್ಟ, ಸತ್ಯ ನಿಷ್ಟ ಸಮೀಕ್ಷೆ ಬೇಕು. ಹೀಗಾಗಿ ಇದು ಸಮೀಕ್ಷೆಗೆ ಸಕಾಲವಲ್ಲ, ಮುಂದೂಡಿಕೆ ಮಾಡಿ. ಇಲ್ಲ ಸಮಯ ವಿಸ್ತರಿಸಿ ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಇವತ್ತು ಸೂರ್ಯ ಗ್ರಹಣ.. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗರ್ಭಿಣಿಯರು ಏನು ಮಾಡಬೇಕು..?
ಧರ್ಮ ಹಿಂದೂ, ಜಾತಿ ಒಕ್ಕಲಿಗ ಬರೆಸಲು ನಿರ್ಣಯ
ಜಾತಿ ಸಮೀಕ್ಷೆಯಲ್ಲಿ ಗೊಂದಲಗಳಿರುವ ಹಿನ್ನೆಲೆಯಲ್ಲಿ ನಿನ್ನೆ ಪಕ್ಷಾತೀತವಾಗಿ ಒಕ್ಕಲಿಗ ನಾಯಕರು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳ ನೇತೃತ್ವದಲ್ಲಿ ಸಭೆ ನಡೆಸಿದ್ರು. ಸಭೆಯಲ್ಲಿ ಧರ್ಮ ಹಿಂದೂ, ಜಾತಿ ಒಕ್ಕಲಿಗ ಬರೆಸಲು ನಿರ್ಣಯ ಕೈಗೊಳ್ಳಲಾಗಿದೆ. ಒಟ್ಟಾರೆ.. ವಿರೋಧದ ನಡುವೆಯೂ ನಾಳೆಯಿಂದ ಜಾತಿ ಗಣತಿ ಆರಂಭವಾಗಲಿದೆ. ಸಿಎಂ ಹೇಳಿದಂತೆ, ವಿವಾದಿತ ಕಾಲಮ್​ ಇರುತ್ತಾ .. ಅಥವಾ ಕೈ ಬಿಡಲಾಗಿದ್ಯಾ ಅನ್ನೋದನ್ನು ಕಾದುನೋಡಬೇಕಿದೆ.
ಇದನ್ನೂ ಓದಿ:ಇವತ್ತು IND vs PAK ಮ್ಯಾಚ್.. ಕುತೂಹಲ ಮೂಡಿಸಿದ ಪಾಕಿಸ್ತಾನದ ಈ ನಡೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ