/newsfirstlive-kannada/media/post_attachments/wp-content/uploads/2025/02/BNG-TRAFFIC-5.jpg)
ಸಿಲಿಕಾನ್ ಸಿಟಿ ಕುಖ್ಯಾತಿ ಪಡೆದಿದ್ದೆ ಇಲ್ಲಿಯ ಟ್ರಾಫಿಕ್​ನಿಂದ. ಇಂತಹ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮದ್ದೆರೆಯಲು ಸರ್ಕಾರ, ಸಂಚಾರಿ ಪೊಲೀಸರು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಇಂತಹ ಹೊತ್ತಲ್ಲಿ ಬೆಂಗಳೂರಿನ ಜನರಿಗೆ ಮತ್ತೊಂದು ಟ್ರಾಫಿಕ್ ಟೆನ್ಷನ್ ಶುರುವಾಗಿದೆ.
ಒಬ್ರ ಇಬ್ರಾ.... ರೇಟು ಹೈಕು.. ಜೆಬಿಗೆ ಕತ್ತರಿ ಫಿಕ್ಸು ಅಂದ್ರು. ಜನ ವಾಹನಗಳ ಪರ್ಚೆಸಿಂಗ್​ನಿಂದ ಮಾತ್ರ ದೂರ ಉಳಿದಿಲ್ಲ. ಸಾಲ ಮಾಡಿ ಆದ್ರು ತುಪ್ಪ ತಿನ್ನು ಅನ್ನೋ ಹಾಗೆ EMI ಆದ್ರೂ ಓಕೆ ವೆಹಿಕಲ್​ ಸ್ವಂತಕ್ಕೆ ಬೇಕು ಅಂತಾರೆ. ಸಿಲಿಕಾನ್​ ಸಿಟಿಯಲ್ಲಿ ಮೊದಲೇ ಟ್ರಾಫಿಕ್​ ಕಿರಿಕಿರಿ ಕಿಚ್ಚು ಹೆಚ್ಚಾಗಿದೆ. ಈ ನಡುವೆ ಸಾರ್ವಜನಿಕ ಸಾರಿಗೆ ಬಳಸುವಂತೆ ಸರ್ಕಾರ ಎಷ್ಟೆ ಮನವಿ ಮಾಡಿದ್ರೂ, ಬೆಂಗಳೂರಿನ ವಾಹನಗಳ ಓಡಾಟದ ಸಂಖ್ಯೆ ಮಾತ್ರ ಕಡ್ಮೆಯಾಗಿಲ್ಲ. ಬೆಂಗಳೂರಿನಲ್ಲಿ ವಾಹನಗಳ ಖರೀದಿ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದೆ.
ಇದನ್ನೂ ಓದಿ: ಟೆಸ್ಟ್​ ಪಂದ್ಯದ ಮಧ್ಯೆ ತಂಡಕ್ಕೆ ಆಘಾತ.. ಕ್ಯಾಪ್ಟನ್ ಗಿಲ್ ಆಸ್ಪತ್ರೆಗೆ ದಾಖಲು
/filters:format(webp)/newsfirstlive-kannada/media/media_files/2025/11/16/vehichal-2025-11-16-16-15-47.jpg)
ವಾಹನಗಳ ಖರೀದಿ ಏರಿಕೆ
- ಅಕ್ಟೋಬರ್ ಒಂದೇ ತಿಂಗಳಲ್ಲಿ 86 ಸಾವಿರ ವಾಹನ ಖರೀದಿ
- ಬೆಂಗಳೂರಿನಲ್ಲಿ ಅಕ್ಟೋಬರ್​ನಲ್ಲಿ 59,863 ಬೈಕ್ ಖರೀದಿ
- 15,935 ಕಾರ್​ಗಳು ಸೇರಿ ಒಟ್ಟು 86,014 ವಾಹನಗಳ ಖರೀದಿ
- ಸೆಪ್ಟೆಂಬರ್​ನಲ್ಲಿ 56 ಸಾವಿರ ಹೊಸ ವಾಹನಗಳ ಖರೀದಿ
- ಸೆಪ್ಟೆಂಬರ್​ಗಿಂತ ಅಕ್ಟೋಬರ್​ನಲ್ಲಿ 20 ಸಾವಿರ ಹೆಚ್ಚವರಿ ಖರೀದಿ
- ಹಾಲಿ ಬೆಂಗಳೂರಿನಲ್ಲಿ 1. 22 ಕೋಟಿ ವಾಹನಗಳು ನೋಂದಣಿ
ಒಟ್ಟಿನಲ್ಲಿ ಬೆಂಗಳೂರಿನಲ್ಲಿ ತಿಂಗಳಿನಿಂದ ತಿಂಗಳಿಗೆ ವಾಹನಗಳ ಸಂಖ್ಯೆ ಏರಿಕೆಯಾಗ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇತ್ತ ಸರ್ಕಾರದ ಮೇಲೆ ಜವಬ್ದಾರಿ ಹೆಚ್ಚಾಗಿದ್ದು, ಸಾರ್ವಜನಿಕ ಸಾರಿಗೆಯತ್ತ ಸಿಲಿಕಾನ್ ಸಿಟಿಮಂದಿ ಮುಖ ಮಾಡುವಂತೆ ಯಾವ ಪ್ರಯೋಗಕ್ಕೆ ಮುಂದಾಗುತ್ತೆ ಕಾದುನೋಡಬೇಕಿದೆ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಮುಖಭಂಗ.. ಹೀನಾಯ ಸೋಲು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us