Advertisment

‘ಅವರೇ ರಾಂಗ್ ಆಗಿ ಬಂದಿರೋದು..’ ದಿವ್ಯಾ ಸುರೇಶ್ ಌಕ್ಸಿಡೆಂಟ್‌ ಕೇಸ್‌ಗೆ ಟ್ವಿಸ್ಟ್‌..!

ಕಾರ್ ಗುದ್ದಿ ಬೈಕ್‌ನಲ್ಲಿದ್ದವರು ಗಾಯಗೊಂಡ್ರೂ ನಿಲ್ಲಿಸದೇ ಹೋಗಿದ್ದಕ್ಕೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್‌ ಸುದ್ದಿಯಾಗಿದ್ರು. ಆದ್ರಿವತ್ತು ಆ ಕೇಸ್‌ ಮಗ್ಗಲು ಬದಲಿಸಿದ್ದು ಖುದ್ದು ದಿವ್ಯಾ ಸುರೇಶ್ ಌಕ್ಸಿಡೆಂಟ್ ಕಹಾನಿಯ ಮತ್ತೊಂದು ವರ್ಷನ್ ತೆರೆದಿಟ್ಟಿದ್ದಾರೆ.

author-image
Ganesh Kerekuli
divya suresh

ದಿವ್ಯಾ ಸುರೇಶ್​

Advertisment

ಕಾರ್ ಗುದ್ದಿ ಬೈಕ್‌ನಲ್ಲಿದ್ದವರು ಗಾಯಗೊಂಡ್ರೂ ನಿಲ್ಲಿಸದೇ ಹೋಗಿದ್ದಕ್ಕೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್‌ ಸುದ್ದಿಯಾಗಿದ್ರು. ಆದ್ರಿವತ್ತು ಆ ಕೇಸ್‌ ಮಗ್ಗಲು ಬದಲಿಸಿದ್ದು ಖುದ್ದು ದಿವ್ಯಾ ಸುರೇಶ್ ಌಕ್ಸಿಡೆಂಟ್ ಕಹಾನಿಯ ಮತ್ತೊಂದು ವರ್ಷನ್ ತೆರೆದಿಟ್ಟಿದ್ದಾರೆ.

Advertisment

ಬಿಗ್‌ಬಾಸ್ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್ ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಕ್ಕೆ ಕಾಲು ಚಿಪ್ಪು ಮುರಿದು ಹೋಗಿದೆ, ನನ್ನ ಬದುಕೇ ಕತ್ತಲಾಗಿದೆ ಅಂತ ನಿನ್ನೆಯಷ್ಟೇ ಅನಿತಾ ಅನ್ನೋ ಮಹಿಳೆ ಅವಲತ್ತುಕೊಂಡಿದ್ದರು.. ಅಪಘಾತದ ಬಳಿಕ ಕನಿಷ್ಟ ಕಾರ್‌ ನಿಲ್ಲಿಸಿ ಏನಾಯ್ತು ಅಂತಾನೂ ಕೇಳಿಲ್ಲ ಅಂತ ಆರೋಪಿಸಿದ್ದರು. ಈ ಸಂಬಂಧ ಕೇಸು ದಾಖಲಾಗಿದ್ದೂ ಆಯ್ತು, ಪೊಲೀಸರು ಕಾರ್ ಸೀಜ್ ಮಾಡಿದ್ದೂ ಆಯ್ತು, ನಂತ್ರ ಕಾನೂನು ಪ್ರಕಾರ ದಿವ್ಯಾ ಸುರೇಶ್ ತಮ್ಮ ಕಾರ್ ಬಿಡಿಸಿಕೊಂಡಿದ್ದೂ ಆಗಿದೆ.

ಇದನ್ನೂ ಓದಿ: ಭಾಗ್ಯಳಿಗೆ ಹೊಸ ಪೂಜಾ ಸಿಕ್ಕಾಯ್ತು.. ಯಾರು ಇವರು..?

ಆದ್ರೀಗ ಪೊಲೀಸರ ವಿಚಾರಣೆಯಲ್ಲಿ ಅಕ್ಟೋಬರ್‌ 4ನೇ ತಾರೀಕು ಬ್ಯಾಟರಾಯನಪುರದ M.M.ರಸ್ತೆಯಲ್ಲಿ ಮಧ್ಯರಾತ್ರಿ ಸುಮಾರು 1.30ಕ್ಕೆ ನಡೆದ ಅಪಘಾತಕ್ಕೆ ಸಂಬಂಧಿಸಿ ದಿವ್ಯಾ ಸುರೇಶ್ ಪೊಲೀಸರ ಮುಂದೆ ನೀಡಿರೋ ಹೇಳಿಕೆ ಲಭ್ಯವಾಗಿದೆ. 

‘ಅವ್ರ ತಪ್ಪಿನಿಂದಲೇ ಅಪಘಾತ’
ಟರ್ನಿಂಗ್​ ಪಾಯಿಂಟ್​ನಲ್ಲಿ ಅವರು ಬಂದಿದ್ದು ಗೊತ್ತಾಗಿಲ್ಲ. ನಾನು ನನ್ನ ಪಾಡಿಗೆ ಹೋಗ್ತಿದ್ದೆ. ಅವರೇ ರಾಂಗ್ ಆಗಿ ಬಂದಿರೋದು. …ಆ ಕ್ಷಣ ಗಾಡಿ ನಿಲ್ಲಿಸೋದಕ್ಕೆ ಆಗ್ಲಿಲ್ಲ. ಹಾಗಾಗಿ ವಾಪಾಸ್ ಹೋದೆ. …ಏನೂ ಮೇಜರ್ ಆಗಿರಲ್ಲ. ಸ್ಪಲ್ಪ ತಾಗಿರುತ್ತೆ ಅಂದುಕೊಂಡಿದ್ದೆ. ಅವರ ತಪ್ಪಿನಿಂದಲೇ ಅಪಘಾತ ಆಗಿರೋದು. ನಾನು ಸ್ಪೀಡ್ ಆಗಿ ಹೋಗ್ತಿರ್ಲಿಲ್ಲ. ನಾರ್ಮಲ್ ಆಗಿ ಹೋಗ್ತಿದ್ದೆ. ಈ ಕೇಸ್​ಗೆ ಸಂಬಂಧಪಟ್ಟಂತೆ ಪೊಲೀಸರ ವಿಚಾರಣೆಗೆ ಸಹಕರಿಸ್ತೀನಿ.
-ದಿವ್ಯಾ ಸುರೇಶ್, ಕಿರುತೆರೆ ನಟಿ…

Advertisment

ಇದು ದಿವ್ಯಾ ಸುರೇಶ್ ಅವ್ರ ಸ್ಟೇಟ್‌ಮೆಂಟ್‌. ಒಂದರ್ಥದಲ್ಲಿ ಅವ್ರು ಹೇಳ್ತಿರೋದೂ ಸರಿಯಾಗೇ ಇದೆ.. ಬೈಕ್‌ನಲ್ಲಿದ್ದವರು ರಸ್ತೆಯ ಎಡಭಾಗದಲ್ಲಿ ಬರದೇ ಬಲ ಭಾಗದಲ್ಲಿ ಬಂದಿದ್ದು ಅವ್ರದ್ದೇ ತಪ್ಪು.. ಗೊತ್ತಾಗದೇ ಏಕಾಏಕಿ ದಿವ್ಯಾ ಸುರೇಶ್ ಕಾರ್‌ ಅವ್ರಿಗೆ ಗುದ್ದಿದೆ.. ಇದಕ್ಕೆ ಸಿಸಿಟಿವಿಯೇ ಸಾಕ್ಷಿ.. ಜೊತೆಗೆ ಬೈಕಲ್ಲಿದ್ದವರು ಟ್ರಿಪಲ್ ರೈಡ್ ಮಾಡ್ತಿದ್ರು, ಹೆಲ್ಮೆಟ್ ಹಾಕಿರ್ಲಿಲ್ಲ, ರೂಲ್ಸ್ ಬ್ರೇಕ್ ಮಾಡಿದ್ರು ಅನ್ನೋದೂ ನಿಜವೇ.. ಆದ್ರೂ ದಿವ್ಯಾ ಸುರೇಶ್ ಅಪಘಾತ ಆಗಿದ್ದು ಗೊತ್ತಾದ್ರೂ ಕಾರ್‌ನಿಂದ ಇಳಿದು ಏನಾಯ್ತು ಅಂತ ನೋಡದೇ ಹೋಗಿದ್ದು ತಪ್ಪಲ್ವಾ?

ಇದನ್ನೂ ಓದಿ:ದಿವ್ಯಾ ಸುರೇಶ್ ಹಿಟ್​ ಆ್ಯಂಡ್ ರನ್​ ಕೇಸ್​; ಆಸ್ಪತ್ರೆಯಲ್ಲಿ 2 ಲಕ್ಷ ರೂ ಖರ್ಚು, ನಮ್ಮನ್ನು ಬಂದು ನೋಡೇ ಇಲ್ಲ- ಕಿರಣ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Divya Suresh
Advertisment
Advertisment
Advertisment