/newsfirstlive-kannada/media/media_files/2025/12/28/ganavai-case-2025-12-28-18-08-51.jpg)
ಗಾನವಿ ಸೂಸೈಡ್ ಕೇಸ್ ದಿನಕ್ಕೊಂದು ರೋಚಕ ಟ್ವಿಸ್ಟ್​ ಆ್ಯಂಡ್​​ ಟರ್ನ್​ ಪಡ್ಕೊಳ್ತಿದೆ. ನಿನ್ನೆ ತಾನೆ ಬಿಗ್​ ಟ್ವಿಸ್ಟ್ ಎಂಬಂತೆ ಗಾನವಿ ಪತಿ ಸೂರಜ್​ ಸೂಸೈಡ್​​ ಮಾಡ್ಕೊಂಡಿದ್ದ. ಜೊತೆಗೆ ಅತ್ತೆಯೂ ಆತ್ಮಹತ್ಯೆಗೆ ಯತ್ನಿಸಿದ್ರು. ಆದ್ರೀಗ ಸೂರಜ್​ ಕುಟುಂಬಸ್ಥರು ಗಾನವಿ ಸೇರಿ ಒಟ್ಟು 8 ಜನ್ರ ವಿರುದ್ಧ ದೂರು ದಾಖಲಿಸಿದ್ದು, ಗಾನವಿ ವಿರುದ್ಧವೇ ಸಾಲು ಸಾಲು ಆರೋಪಗಳನ್ನ ಹೊರಿಸಿದ್ದಾರೆ.
‘ಗಾನವಿ’.. ಸಿಹಿಗಾನವಾಗಿಬೇಕಿದ್ದ ಈಕೆ ಬಾಳು ಮುಗಿದು ಹೋದ ಅಧ್ಯಾಯವಾಗಿಬಿಟ್ಟಿದೆ. ಹೆತ್ತವರ ಒಡಲ ಕಿಚ್ಚು ಕಡಲಾಗಿತ್ತು.. ಕ್ಷಣ-ಕ್ಷಣಕ್ಕೂ ಸಂಕಟ ಪಡ್ತಾ ಪತಿ ಸೂರಜ್, ಮತ್ತು ಮನೆಯವ್ರ ವಿರುದ್ಧ ಕೆಂಡಕಾರಿದ್ರೆ, ಇದೆಂಥಾ ದುರ್ವಿಧಿ ಎಂಬಂತೆ ಪತಿ ಸೂರಜ್​ ಸೂಸೈಡ್​​ ಮಾಡ್ಬಿಟ್ಟಿದ್ದಾನೆ.. ಮಗ ಇಲ್ಲ ಅನ್ನೋ ನೋವು ಅರಗಿಸಿಕೊಳ್ಳೋಕೆ ಆಗದೇ ಇತ್ತ ಸೂರಜ್ ತಾಯಿ ಜಯಂತಿಯೂ ಆತ್ಮಹತ್ಯೆಗೆ ಯತ್ನಿಸಿದ್ದು ಜೀವ್ಮರಣ ಹೋರಾಟ ನಡೆಸ್ತಿದ್ದಾರೆ..ಈ ಬೆನ್ನಲ್ಲೇ ಇದೀಗ ಕೇಸ್​ಗೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ..
ಇದನ್ನೂ ಓದಿ: ನನ್ನ ದೇಹ ಚರ್ಚೆಯ ವಿಷಯವಲ್ಲ -ಖಡಕ್ಕಾಗಿ ಕೌಂಟರ್ ಕೊಟ್ಟ ಸುದೀಪ್ ಮಗಳು..!
/filters:format(webp)/newsfirstlive-kannada/media/media_files/2025/12/27/bengaluru-ganavi-case-2025-12-27-09-02-29.jpg)
ಮೃತ ಗಾನವಿ ಸೇರಿ 8 ಜನರ ವಿರುದ್ಧ ದಾಖಲಾಯ್ತು ದೂರು
ನಮ್ಮ ಮನೆ ಮಗ ಸೂರಜ್​​ ಮತ್ತೆ ಸೂರಜ್​ ತಾಯಿಯ ಸಾವು ಬದುಕಿನ ಹೋರಾಟಕ್ಕೆ ಗಾನವಿ ಮತ್ತು ಗಾನಮಿ ಕುಟುಂಬಸ್ಥರೇ ಕಾರಣ ಅಂತ ಮೃತ ಸೂರಜ್​ ಸಂಬಂಧಿ ರಾಜ್​ಕುಮಾರ್​ ಅನ್ನೋರು ವಿದ್ಯಾರಣ್ಯಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಾನವಿ ವಿರುದ್ಧವೇ ಸಾಲು ಸಾಲು ಆರೋಪ ಮಾಡಿದ್ದಾರೆ.
ಸೂರಜ್​​ ಸಾವಿಗೆ ಏನು ಕಾರಣ?
ಗಾನವಿ ಕುಟುಂಬಸ್ಥರು ಗಾನವಿ ಒಪ್ಪಿಗೆ ಪಡೆಯದೇ ಬಲವಂತದಿಂದ ಸೂರಜ್​ ಜೊತೆ ಮದುವೆ ಮಾಡಿದ್ರಂತೆ.. ಜೊತೆಗೆ ಈ ಮದುವೆಯನ್ನ ಸೂರಜ್​ ಮನೆಯವ್ರೇ ಖರ್ಚು ಮಾಡಿ ಮಾಡಿದ್ರಂತೆ.. ಇದಿಷ್ಟೇ ಅಲ್ಲದೆ ಗಾನವಿ- ಶ್ರೀ ಹರ್ಷ ಅನ್ನೋ ವ್ಯಕ್ತಿನಾ ಪ್ರೀತಿಸ್ತಿದ್ಲಂತೆ.. ಈ ವಿಚಾರವನ್ನ ಸೂರಜ್​ ಬಳಿಯೂ ಹೇಳಿ ಮದುವೆಯಾಗ್ತೀನಿ ಅಂತ ಹೇಳಿದ್ಲಂತೆ.. ಅದೇ ವಿಚಾರಕ್ಕೆ ಇಬ್ಬರು ಶ್ರೀಲಂಕಾದಿಂದ 25 ರ ಬದಲು ಡಿಸೆಂಬರ್ 21 ರಂದು ವಾಪಸ್ ಆಗಿದ್ರು. ಡಿಸೆಂಬರ್ 22 ರಂದು ಗಾನವಿಯನ್ನು ಅವರ ಕುಟುಂಬಸ್ಥರು ಬಂದು ಕರೆದುಕೊಂಡು ಹೋಗಿದ್ರು. ಅದಾಗಿ ಡಿಸೆಂಬರ್ 24 ರಂದು ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಆದ್ರೆ ಇದಕ್ಕೆಲ್ಲ ಮೃತ ಸೂರಜ್ ಕುಟುಂಬಸ್ಥರೇ ಕಾರಣ ಅಂತ ಆಕೆಯ ಹೆತ್ತವರು​ ಮೀಡಿಯಾದಲ್ಲಿ ಹೇಳಿಕೆಗಳನ್ನ ನೀಡಿದ್ರು.. ಈ ಅವಮಾನಕರ ಹೇಳಿಕೆಗಳಿಗೆ ಮನನೊಂದು ಸೂರಜ್ ಹಾಗೂ ಅವರ ತಾಯಿ ಹಾಗೂ ಸಹೋದರ ನಾಗಪುರಕ್ಕೆ ಹೋಗಿದ್ರು.. ಅಲ್ಲಿ ಮನನೊಂದಿದ್ದ ಸೂರಜ್ ಸೂಸೈಡ್​ ಮಾಡಿದ್ದಾನೆ.. ಅವರ ತಾಯಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಈ ಅವ್ರ ಕಂಡಿಷನ್ಸ್​​ ಕ್ರಿಟಿಕಲ್​ ಆಗಿದೆ. ಹೀಗಾಗಿ ಇದಕ್ಕೆಲ್ಲ ಗಾನವಿ ಕುಟುಂಬಸ್ಥರೇ ಕಾರಣ ಅಂತ ಆರೋಪಿಸಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:35 ಇನ್ನಿಂಗ್ಸ್.. 11 ಶತಕ.. 12 ಅರ್ಧಶತಕ.. ಆದರೂ ಕನ್ನಡಿಗನಿಗೆ BCCI ಅನ್ಯಾಯ..!
/filters:format(webp)/newsfirstlive-kannada/media/media_files/2025/12/26/dowry-harassment-death-of-ganavi-2025-12-26-15-01-14.jpg)
ಒಟ್ಟಾರೆ, ಸಾವೇ ಎಲ್ಲದಕ್ಕೂ ಪರಿಹಾರವಲ್ಲ, ಉತ್ತರವೂ ಅಲ್ಲ. ಎರಡು ಜೀವಗಳು ಇಲ್ಲಿ ಬಲಿಯಾಗಿ ಹೋಗಿವೆ.. ಆದ್ರೀಗ ಈ ಆರೋಪಕ್ಕೆ ಮೃತ ಗಾನವಿ ಕುಟುಂಬಸ್ಥರು ಯಾವ ರೀತಿ ಉತ್ತರ ನೀಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us