Advertisment

EVP ಫಿಲ್ಮಂ ಸಿಟಿ ಮಾಲೀಕನಿಂದ ಆಂಟಿ ಪ್ರೀತ್ಸೆ-ಪ್ರೀತ್ಸೆ.. ಮಗಳ ಮೂಲಕ ಪರಿಚಯಿಸಿಕೊಂಡು ಏನೇನೋ..

ತಮಿಳುನಾಡಿನ ಇವಿಪಿ ಫಿಲ್ಮಂ ಸಿಟಿ ಮಾಲೀಕ ಆಂಟಿ ಪ್ರೀತ್ಸೆ-ಪ್ರೀತ್ಸೆ ಅಂತ ಹಿಂದೆ ಬಿದ್ದು ಪೇಚಿಗೆ ಸಿಲುಕಿದ್ದಾನೆ. ತನ್ನ ಮಗಳ ಮೂಲಕವೇ ಖ್ಯಾತ ಫ್ಯಾಶ್ಯನ್ ಡಿಸೈನರ್​ನ ಪರಿಚಯ ಮಾಡ್ಕೊಂಡ ಈತ ಕೊನೆಗೆ ನೀನೇ ಬೇಕು ಅಂತ ಬೆನ್ನು ಬಿದ್ದಿರುವ ಆರೋಪ ಕೇಳಿಬಂದಿದೆ.

author-image
Ganesh Kerekuli
Love story (2)
Advertisment

ತಮಿಳುನಾಡಿನ ಇವಿಪಿ ಫಿಲ್ಮಂ ಸಿಟಿ ಮಾಲೀಕ ಆಂಟಿ ಪ್ರೀತ್ಸೆ-ಪ್ರೀತ್ಸೆ ಅಂತ ಹಿಂದೆ ಬಿದ್ದು ಪೇಚಿಗೆ ಸಿಲುಕಿದ್ದಾನೆ. ತನ್ನ ಮಗಳ ಮೂಲಕವೇ ಖ್ಯಾತ ಫ್ಯಾಶ್ಯನ್ ಡಿಸೈನರ್​ನ ಪರಿಚಯ ಮಾಡ್ಕೊಂಡ ಈತ ಕೊನೆಗೆ ನೀನೇ ಬೇಕು ಅಂತ ಬೆನ್ನು ಬಿದ್ದಿದ್ದಾನೆ. ಸಾಲದಕ್ಕೆ ಸಮ್ಮಿತಿಸದಿದ್ದರೆ ನಿನ್ನ ಮಕ್ಕಳನ್ನ ಕೊಲ್ತೀನಿ ಸಂತ ಬೆದರಿಸಿದ ಆರೋಪ ಕೇಳಿಬಂದಿದೆ.  

Advertisment

ಪ್ರೀತ್ಸೆ, ಪ್ರೀತ್ಸೆ ಅಂತ ಫ್ಯಾಷನ್ ಡಿಸೈನರ್​ಗೆ ಕಾಟ ಕೊಟ್ಟ ಭೂಪ

ಹೌದು, ನೀನೇ ಬೇಕು ಅಂತ ಹಿಂದೆ ಬಿದ್ದು ಪ್ರೀತಿಸೋ ಹುಡುಗರ ಬಗ್ಗೆ ಕೇಳಿದ್ದೀವಿ. ಆದ್ರೆ, ಇಲ್ಲೊಬ್ಬ ಅಂಕಲ್​ ಮದುವೆಯಾಗಿ ತನಗೊಂದು ಮಗಳು ಇದ್ರೂ.. 2 ಮಕ್ಕಳ ತಾಯಿ ಹಿಂದೆ ಬಿದ್ದು ಪ್ರೀತ್ಸೆ, ಪ್ರೀತ್ಸೆ ಅಂತ ಕಾಡಿದ್ದಾನೆ. ಇಲ್ಲಿ ಹೀಗೆ ಸೆಲಬ್ರಿಟಿಸ್​ ಜೊತೆ ಫೋಟೋಗೆ ಪೋಸ್​ ಕೊಡ್ತಾ ನಗ್​ ನಗ್ತಾ ನಿಂತಿದ್ದಾನಲ್ಲಾ. ಇವ್ರೆ ನಮ್ಮ ಆ ಭಗ್ನ ಪ್ರೇಮಿ. ಹೆಸರು ಸಂತೋಷ್ ರೆಡ್ಡಿ.. ತಮಿಳುನಾಡಿನ ಇವಿಪಿ ಫಿಲ್ಮ್ ಸಿಟಿ ಮಾಲೀಕ. ಈತ ಖ್ಯಾತ ಫ್ಯಾಶ್ಯನ್ ಡಿಸೈನರ್​ನನ್ನ ನೀನೇ ಬೇಕು ನೀನೇ ಬೇಕು ಅಂತ ಹಿಂದೆ ಬಿದ್ದು ಒಪ್ಪಿಲ್ಲ ಅಂದ್ರೆ ಕೊಂದೇ ಬಿಡ್ತೀನಿ ಅಂತ ಬೆದರಿಕೆ ಬೇರೆ ಹಾಕಿದ್ದಾನಂತೆ.

ಇದನ್ನೂ ಓದಿ: ತೆರೆಯ ಹಿಂದೆ ನಂದಗೋಕುಲ.. ವಲ್ಲಭ-ಅಮೂಲ್ಯ ಮದ್ವೆ ಹೆಂಗೆ ಆಯ್ತು..? Photos

Love story (1)

ಆಂಕಲ್​ ಪ್ರೀತಿ ಗೀತಿ ಇತ್ಯಾದಿ.. ಆರೋಪಗಳು ಏನು..?

ಈ ಸಂತೋಷ್​ ರೆಡ್ಡಿ ಮಗಳು ಫ್ಯಾಷನ್ ಡಿಸೈನರ್​ಗೆ ಸಂಪರ್ಕ ಮಾಡಿದ್ದರು. ಸಂಬಂಧಿ ಮದುವೆಗೆ ಬಟ್ಟೆ ಬೇಕು ಅಂತ ಫ್ಯಾಷನ್ ಡಿಸೈನರ್​ ಸಂಪರ್ಕ ಮಾಡಿದ್ಲು. ಮಗಳ ಕಾಂಟಾಕ್ಟ್ ಬಳಸಿಕೊಂಡು ಡಿಸೈನರ್ ಜೊತೆ​ ಸಂತೋಷ್​ ರೆಡ್ಡಿ ಸಂಪರ್ಕ ಬೆಳೆಸಿಕೊಂಡಿದ್ದ. ಪರಿಚಯ ಸ್ನೇಹಕ್ಕೆ ತಿರುಗಿ ಫ್ಯಾಮಿಲಿ‌ ಫ್ರೆಂಡ್​ನಂತೆ ಸಂತೋಷ್  ಇದ್ದ. ನಂತರ ನಿಮ್ಮ ಬ್ಯುಸಿನೆಸ್​ಗೆ ಇನ್ವೆಸ್ಟ್ ಮಾಡ್ತೀನಿ ಅಂತ‌‌ ಸಂತೋಷ್​ ಹೇಳಿದ್ನಂತೆ. ನಂತರ ಮಗಳಿಗೆ ಗಂಡು ಇದ್ರೆ ನೋಡಿ ಎಂದು ಸಂತ್ರಸ್ತೆಗೆ ಹತ್ತಿರವಾಗಿದ್ದ ಸಂತೋಷ್. ಮತ್ತೊಂದು ದಿನ ತನ್ನ ಮಗಳು ನನ್ನ ಜೊತೆ ಮಾತಾಡ್ತಿಲ್ಲ. ಮನೆಯಲ್ಲಿದ್ದ ಹಣ ತಗೊಂಡು ಎಲ್ಲೋ ಹೋಗಿದ್ದಾಳೆ ಅಂತ ಬೇಸರ ಹೊರಹಾಕಿದ್ದ. ಇದನ್ನೇ ನೆಪ ಮಾಡಿಕೊಂಡು ಮಹಿಳೆ ಇರೋ ಬೆಂಗಳೂರಿನ ಮನೆಗೆ ಸಂತೋಷ್ ರೆಡ್ಡಿ ಬಂದಿದ್ದ. ನನಗೆ ನಿಮ್ಮ ಸಹಾಯಬೇಕು ಅಂತ ಎಮೋಷನಲ್ ಆಗಿ ಮಾತಾಡಿದ್ದ. ಈ ವೇಳೆ ಸಂತೋಷ್ ರೆಡ್ಡಿಗೆಫ್ಯಾಷನ್ ಡಿಸೈನರ್ ಮಹಿಳೆ  ಸಮಾಧಾನ ಮಾಡಿದ್ದರು.

Advertisment

ಈ ವೇಳೆ ಏಕಾಏಕಿ ನಿನ್ನನ್ನ ಪ್ರೀತಿ ಮಾಡ್ತಿದ್ದೀನಿ ಪ್ರೀತಿಸ್ಲೇಬೇಕೆಂದು ಗೋಗರೆದಿದ್ದ.  ಆಗ ನಿರಾಕರಿಸಿದ್ದ ಡಿಸೈನರ್​ಗೆ​ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಅಲ್ಲದೇ ಲವ್ ಮಾಡಿಲ್ಲ ಅಂದ್ರೆ ನಿಮ್ಮಿಬ್ಬರು ಮಕ್ಕಳನ್ನು ಕೊಲೆ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಪ್ರೀತಿಸು ಅಂತ ಗೋಗರೆದು ಹಲ್ಲೆ ಮಾಡಿದ್ದಕ್ಕೆ ಮಹಿಳೆ ದೂರು ನೀಡಿದ್ದಾರೆ.

ಇದನ್ನೂ ಓದಿ:‘ನಾನೇನಾದ್ರೂ..’ ಕೈಮುಗಿದು ಕ್ಷಮೆ ಕೇಳಿದ ಅಶ್ವಿನಿ ಗೌಡ.. ಯಾವ ವಿಷಯಕ್ಕೆ..?

ಈ ಬಗ್ಗೆ ಬೆಂಗಳೂರಿನ ವೈಯಾಲಿಕಾವಲ್ ಠಾಣೆಯಲ್ಲಿ ಕೇಸ್​​​ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಅದೇನೇ ಹೇಳಿ ತನಗೂ ಒಬ್ಬಳು ಮಗಳಿದ್ದು, ಬೇರೆ ಮಹಿಳೆ ಜೊತೆ ಹೀಗೆ ಅಸಭ್ಯವಾಗಿ ನಡೆದುಕೊಂಡಿದ್ದು ಕೊಲೆ ಬೆದರಿಕೆ ಹಾಕಿದ್ದು ನಿಜಕ್ಕೂ ಖಂಡನೀಯ.

Advertisment

ವಿಶೇಷ ವರದಿ: ಪ್ರಜ್ವಲ್​ ನಿಟ್ಟೂರು ನ್ಯೂಸ್​ಫಸ್ಟ್​ ಬೆಂಗಳೂರು 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Love
Advertisment
Advertisment
Advertisment