/newsfirstlive-kannada/media/media_files/2025/11/04/cm-siddaramaiah-condolenses-to-meti-death-2025-11-04-16-17-29.jpg)
ನಿಷ್ಠಾವಂತ ರಾಜಕಾರಣಿಯಾಗಿದ್ದ ಮೇಟಿಯವರು ನನಗೆ ಅತ್ಯಂತ ಆಪ್ತರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಮಾಜಿ ಸಚಿವರು, ಹಿರಿಯ ನಾಯಕರು ಹಾಗೂ ಹಾಲಿ ಶಾಸಕರೂ ಆಗಿದ್ದ ಹೆಚ್.ವೈ.ಮೇಟಿಯವರು ಇಂದು 12.30 ರಲ್ಲಿ ನಿಧನರಾಗಿದ್ದಾರೆ.
ನಾನು ಮೂರು ದಿನಗಳ ಹಿಂದೆ ಅವರನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದು, ವೈದ್ಯರೂ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ತಿಳಿಸಿದ್ದರು. ಆದರೆ ಮೇಟಿಯವರು ಇಷ್ಟುಬೇಗ ಇಹಲೋಕ ತ್ಯಜಿಸುತ್ತಾರೆಂದು ಭಾವಿಸಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹೆಚ್.ವೈ. ಮೇಟಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಕಣ್ಣೀರು ಹಾಕಿದ್ದಾರೆ. ಮೇಟಿ ಪಾರ್ಥೀವ ಶರೀರದ ಎದುರು ಪತ್ನಿ, ಮಗಳು ಕಣ್ಣೀರು ಹಾಕುತ್ತಾ ನೋವು ವ್ಯಕ್ತಪಡಿಸುತ್ತಿದ್ದರು. ಈ ವೇಳೆ ಸಿ.ಎಂ.ಸಿದ್ದರಾಮಯ್ಯ ಅವರು ಕಣ್ಣೀರು ಹಾಕಿದ್ದರು.
ಇದನ್ನೂ ಓದಿ:ವಿಶ್ವಕಪ್ ಗೆಲುವಿನ ಹಿಂದೆ ಇಬ್ಬರು ವ್ಯಕ್ತಿಗಳು.. ಆ ತೆರೆ ಮರೆಯ ಕಾಯಿಗಳು ಯಾರು..?
/filters:format(webp)/newsfirstlive-kannada/media/media_files/2025/11/04/hy-meti-no-more-2025-11-04-12-38-01.jpg)
1996 ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡುವಂತೆ ಮೇಟಿಗೆ ಹೇಳಿದ್ದೆ. ಆಗ ಸಚಿವರಾಗಿದ್ದರೂ ಕೂಡ ಲೋಕಸಭೆಗೆ ಸ್ಪರ್ಧೆ ಮಾಡಿ ಗೆದ್ದರು. ನನ್ನ ಮಾತು ಕೇಳುತ್ತಿದ್ದರು.
ಜನಪರ ಕಾಳಜಿಯ ಸೇವೆ
ಅತ್ಯಂತ ನಿಷ್ಠಾವಂತ ರಾಜಕಾರಣಿಯಾಗಿದ್ದು, ನನಗೆ ಅತ್ಯಂತ ಆಪ್ತರಾಗಿದ್ದರು. ಮೇಟಿಯವರು ಅರಣ್ಯ ಸಚಿವರಾಗಿ, ಸಂಸದರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಮೂಲತ: ಕೃಷಿಕರಾಗಿದ್ದ ಮೇಟಿಯವರು ರಾಜಕೀಯ ಕ್ಷೇತ್ರದಲ್ಲಿಯೂ ಸಕ್ರಿಯರಾಗಿದ್ದರು. 1989 ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಶಾಸಕರಾಗಿ ಸ್ಪರ್ಧಿಸಿ ಮೂರು ಬಾರಿ ಶಾಸಕರಾಗಿದ್ದರು. ಜನಪರ ಕಾಳಜಿಯಿಂದ ಸೇವೆ ಸಲ್ಲಿಸುತ್ತಿದ್ದ ಮೇಟಿಯವರು ಮಂತ್ರಿಯಾಗಿರಲಿ, ಸಂಸದರಾಗಿ, ಶಾಸಕರಾಗಿರಲಿ, ಪಕ್ಷಕ್ಕೆ ನಿಷ್ಠೆಯಿಂದ ದುಡಿಯುವಂತಹ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ನಾಳೆ ಬಾಗಲಕೋಟೆಯಲ್ಲಿ ಅಂತ್ಯಕ್ರಿಯೆ
ಜನರೊಂದಿಗೆ ಒಡನಾಟ ಹಾಗೂ ಜನಪ್ರಿಯತೆಯಿಂದ ಬಾಗಲಕೋಟೆ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಅಂತಹ ನಿಷ್ಠಾವಂತ ನಾಯಕನೊಬ್ಬನ ಸಾವು ದುಃಖ ತಂದಿದ್ದು, ಇದು ನನಗೆ ವೈಯಕ್ತಿಕ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತ, ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದವರಿಗೆ, ಅಭಿಮಾನಗಳಿಗೂ ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. ಇಂದು ಸಂಜೆಯ ತನಕ ಬೆಂಗಳೂರಿನ ಕುಟುಂಬದವರ ಮನೆಯಲ್ಲಿ ಪಾರ್ಥಿವ ಶರೀರವನ್ನು ಇರಿಸಿ, ನಂತರ ಬಾಗಲಕೋಟೆಗೆ ತೆಗೆದುಕೊಂಡು ಹೋಗಲಾಗುತ್ತೆ. ನಾಳೆ ಎರಡು ಗಂಟೆಯ ಸುಮಾರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯುವ ಅಂತ್ಯಕ್ರಿಯೆಯಲ್ಲಿ ತಾವೂ ಪಾಲ್ಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us