ಊಟ, ನಿದ್ರೆ ಮಾಡದೇ ಕನವರಿಕೆ.. ಜೈಲಲ್ಲಿ ದರ್ಶನ್​ಗೆ ಟೆನ್ಷನ್, ಟೆನ್ಷನ್..!

ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್​ಗೆ ಮತ್ತೆ ಟೆನ್ಷನ್ ಶುರುವಾಗಿದೆ. ಇಂದು ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ, ತಾಯಿ ರತ್ನಪ್ರಭಾ ಕೋರ್ಟ್​ಗೆ ಹಾಜರಾಗಲಿದ್ದಾರೆ. ಇದು ದರ್ಶನ್​ ಅವರ ಆತಂಕಕ್ಕೆ ಕಾರಣವಾಗಿದೆ.

author-image
Ganesh Kerekuli
Darshan and Pavitra Gowda (1)
Advertisment

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್​ಗೆ ಮತ್ತೆ ಟೆನ್ಷನ್ ಶುರುವಾಗಿದೆ.  ಇಂದು ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ, ತಾಯಿ ರತ್ನಪ್ರಭಾ ಕೋರ್ಟ್​ಗೆ ಹಾಜರಾಗಲಿದ್ದಾರೆ.

57ನೇ ಸಿಸಿಹೆಚ್ ಕೋರ್ಟ್​ನಿಂದ ಸಮನ್ಸ್ ಜಾರಿಯಾದ ಹಿನ್ನೆಲೆ ನ್ಯಾಯಾಧೀಶ ಐಪಿ ನಾಯಕ್ ಮುಂದೆ ವಿಚಾರಣೆಗಾಗಿ ಹಾಜರಾಗಲಿದ್ದಾರೆ. ರೇಣುಕಾಸ್ವಾಮಿ ತಂದೆ, ತಾಯಿ ವಿಚಾರಣೆ ವೇಳೆ ಕಿಡ್ನಾಪ್ ಮಾಡಿ‌ ನಮ್ಮ ಮಗನನ್ನು ಕೊಲೆ ಮಾಡಿದ್ದಾರೆಂದು ಹೇಳಿಕೆ ಕೊಟ್ಟಿದ್ದರು. ಈ ಘಟನೆ ಬಗ್ಗೆ ಏನು ಗೊತ್ತು ನಿಮಗೆ ಅದನ್ನು ಕೋರ್ಟ್​​ ಮುಂದೆ ಹೇಳಿ ಅಂತ ನ್ಯಾಯಾಧೀಶರು ಹೇಳಿದ್ದಾರೆ. ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಜನ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾರೆ.

ಇದನ್ನೂ ಓದಿ: ಶೃಂಗೇರಿಯಲ್ಲಿ ಹೃದಯ ವಿದ್ರಾವಕ ಘಟನೆ.. 22 ವರ್ಷದ ವಿದ್ಯಾರ್ಥಿನಿ ಬಲಿ

Darshan

ಟೆನ್ಷನ್​ನಲ್ಲಿ ದರ್ಶನ್

ಇಂದಿನಿಂದ ಟ್ರಯಲ್ ಆರಂಭವಾಗಲಿರೋ ಹಿನ್ನೆಲೆ ಡಿ-ಗ್ಯಾಂಗ್​ಗೆ ಢವಢವ ಶುರುವಾಗಿದೆ. ರಾತ್ರಿ ಪೂರ್ತಿ ನಿದ್ರೆ ಮಾಡದೆ ದರ್ಶನ್ ಚಡಪಡಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇಂದಿನಿಂದ ಕೋರ್ಟ್​ನಲ್ಲಿ ಸಾಕ್ಷಿ, ಸಾಕ್ಷಿದಾರರ ವಿಚಾರಣೆ ನಡೆಯಲಿದ್ದು ಕೋರ್ಟ್​ನಲ್ಲಿ ಪ್ರಕರಣ ಮತ್ಯಾವ ತಿರುವು ಪಡೆದುಕೊಳ್ಳುತ್ತೆ ಎಂಬ ಆತಂಕ ಡಿಗ್ಯಾಂಗ್​ಗೆ ಎದುರಾಗಿದೆಯಂತೆ.

ಮಾಹಿತಿಗಳ ಪ್ರಕಾರ.. ದರ್ಶನ್ ರಾತ್ರಿ ನಿದ್ರೆ ಮಾಡದೇ ಚಡಪಡಿಕೆಯಲ್ಲಿದ್ದರು. ಸರಿಯಾಗಿ ಊಟ, ನಿದ್ರೆಯನ್ನ ಡಿ-ಗ್ಯಾಂಗ್ ಮಾಡಿಲ್ಲ. ಕಳೆದ ರಾತ್ರಿಯಿಂದಲೂ ಕೋರ್ಟ್ ಕೇಸ್ ಬಗ್ಗೆ ಪರಸ್ಪರ ಒಬ್ಬರಿಗೊಬ್ಬರು ಚರ್ಚೆ ಮಾಡಿದ್ದಾರೆ. ಆತಂಕದಲ್ಲಿದ್ದ ದರ್ಶನ್ ಮಧ್ಯರಾತ್ರಿ 12.30ರ ಸುಮಾರಿಗೆ ನಿದ್ರೆಗೆ ಜಾರಿದ್ದಾರೆ. ಮತ್ತೆ ಬೆಳಗ್ಗೆ 6 ಗಂಟೆಗೆ ನಿದ್ರೆಯಿಂದ ಎದ್ದು ಕುಳಿತಿದ್ದಾರೆ. ಕೊನೆಗೆ ದೇವರ ಫೋಟೋಗೆ ನಮಸ್ಕರಿಸಿ, ಕೆಲ ಹೊತ್ತು ಬ್ಯಾರಕ್​ನಲ್ಲಿ ವಾಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಧಿಕಾರಿ ಅಲೋಕ್ ಕುಮಾರ್ ಜೈಲಿಗೆ ಭೇಟಿ ಕೊಟ್ಟಾಗ ಟ್ರಯಲ್ ಶುರುವಾಗುವ ಬಗ್ಗೆ ದರ್ಶನ್ ಹೇಳಿದ್ದರು.

ಇದನ್ನೂ ಓದಿ:ಇದೇ ಆರ್​ಸಿಬಿ ದೊಡ್ಡ ಗುಣ.. ತಂಡಕ್ಕೆ ಕೆಲಸ ಮಾಡಿದ ಹುಡುಗನ ಬಿಟ್ಟುಕೊಡಲಿಲ್ಲ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Actor Darshan Pavitra Gowda Renukaswamy case darshan thoogudeepa
Advertisment