/newsfirstlive-kannada/media/media_files/2025/10/20/deepavali-2025-10-20-18-49-01.jpg)
ದೀಪಾವಳಿ ಸಂಭ್ರಮ ಜೋರಾಗಿದೆ.. ಪಟಾಕಿ ಸದ್ದು ಜೋರಾಗಿದೆ.. ರೋಡ್ ರೋಡಲ್ಲೂ ಪಟಾಕಿ ಸಿಡಿಸ್ತಾರೆ.. ಈ ದೀಪಾವಳಿ ಸಂಭ್ರಮ ಮೂಕ ಪ್ರಾಣಿಗಳ ರೋದನೆಗೆ ಕಾರಣವಾಗಿದೆ..
ನಗರದಲ್ಲಿ ದೀಪಾವಳಿ ಸಂಭ್ರಮ ಜೋರಾಗಿದೆ.. ಮನೆ ಮನೆಗಳ ಹತ್ತಿರ, ಬೀದಿ ಬೀದಿಯಲ್ಲೂ ಪಟಾಕಿ ಸದ್ದು ಅಬ್ಬರಿಸ್ತಿದೆ, ಹಬ್ಬಕ್ಕೆ ಮಾತ್ರವಲ್ಲ, ಇನ್ನೊಂದು 15 ದಿನ ಅಂತೂ ಸಿಲಿಕಾನ್ ಸಿಟಿಯಲ್ಲಿ ಪಟಾಕಿ ಆರ್ಭಟ ಇದ್ದೇ ಇರುತ್ತೆ. ಇದೊಂಥರ ಜನರ ಪಾಲಿಗೆ ಸಂಭ್ರಮನೇ.. ಆದರೆ, ಮೂಕ ಪ್ರಾಣಿಗಳಿಗೆ ರೋದನೆ ಯಾರಿಗೂ ಹೇಳ ತೀರದ್ದಾಗಿದೆ..
ದೀಪಾವಳಿ ಹಬ್ಬದ ಸಮಯದಲ್ಲಿ ಪ್ರಾಣಿ, ಪಕ್ಷಿಗಳಿಗೆ ಒಂಥರಾ ಸಂಕಷ್ಟ. ಅದರಲ್ಲೂ ಬೀದಿನಾಯಿಗಳು ಹಾಗೂ ಹಸುಗಳಿಗೆ ಅಪಾಯದ ಹಬ್ಬವೂ ಹೌದು.. ಪಟಾಕಿಯ ಸದ್ದು ಮೂಕ ಪ್ರಾಣಿಗಳಲ್ಲಿ ಭಯ ಹುಟ್ಟಿಸಿದ್ರೆ, ಕೆಲವು ಪಟಾಕಿಗಳು ನಾಯಿಗಳಿಗೆ, ಹಸುಗಳಿಗೆ ದೈಹಿಕವಾಗಿಯೂ ತೊಂದರೆ ಮಾಡಬಲ್ಲದು.
ಅಷ್ಟೇ ಅಲ್ಲ, ಪಟಾಕಿ ಸದ್ದಿನ ಭಯಕ್ಕೆ ನಾಯಿಗಳು ಊಟವನ್ನ ತ್ಯಜಿಸುವ ಸಾಧ್ಯತೆ ಇರುತ್ತದೆ..
ಇದನ್ನೂ ಓದಿ:ರಘುಗೆ ಬರ್ತಿದ್ದಂತೆ ‘ಹೋಗ್ತಾ ಇರ್ಬೇಕು’ ಎಂದು ಗದರಿದ ಜಾಹ್ನವಿ -ಆಮೇಲೆ ಏನಾಯ್ತು..?
ಬೀದಿನಾಯಿಗಳಂತೂ ಮೂಲ ಪ್ರದೇಶಗಳನ್ನ ಬಿಟ್ಟು ಪಟಾಕಿ ಸದ್ದು ಇಲ್ಲದ ಇತರೆ ಜಾಗಗಳಿಗೆ ವಲಸೆ ಹೋಗುವ ಸಾಧ್ಯತೆ ಇರುತ್ತೆ. ರಾಕೆಟ್ ಅಂತ ಪಟಾಕಿಯಿಂದ ಪಕ್ಷಿಗಳಿಗೂ ಅಪಾಯ ಉಂಟು ಮಾಡುವ ಸಾಧ್ಯತೆ ಇರುತ್ತೆ. ಹಾಗಾಗಿ, ಸಾಧ್ಯವಾದಷ್ಟು ಹಸಿರು ಪಟಾಕಿ ಹೊಡಿಯಬೇಕು, ಹೆಚ್ಚು ಶಬ್ದವಿಲ್ಲದ ಪಟಾಕಿ ಹೊಡೆಯಬೇಕು, ಖಾಲಿ ಪ್ರದೇಶಗಳಲ್ಲಿ ಪಟಾಕಿ ಹೊಡೆಯಬೇಕು ಅಂತಾರೆ ಪ್ರಾಣಿ ಪ್ರಿಯರು.
ಈ ಕುರಿತು ಪಶುಸಂಗೋಪನೆ ಹಾಗೂ ಪಶುವೈದ್ಯ ಇಲಾಖೆಯಿಂದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ವಿಶೇಷ ಸೂಚನೆ ನೀಡಲಾಗಿದೆ. ಪ್ರಾಣಿಗಳಿಗೆ ಅಪಾಯವಾಗುವ ರೀತಿ ಪಟಾಕಿ ಹೊಡೆಯುವುದನ್ನ, ಮಾರಾಟ ಮಾಡುವುದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಬೆಳಕಿನ ಹಬ್ಬವನ್ನ ಸಾಧ್ಯವಾದಷ್ಟು ದೀಪಗಳನ್ನ ಹಚ್ಚಿ ಸಂಭ್ರಮಿಸೋಣ.. ಹಸಿರು ಪಟಾಕಿ ಹೊಡೆದು ಪರಿಸರ ಕಾಪಾಡೋಣ.. ಈ ವೇಳೆ ಪ್ರಾಣಿ-ಪಕ್ಷಿಗಳ ಬಗ್ಗೆಯೂ ಎಚ್ಚರ ಇರಲಿ.
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಕಾರ್ ಗಿಫ್ಟ್ ಕೊಟ್ಟ ಫಾರ್ಮಾ ಕಂಪನಿಯ ಮಾಲೀಕ !!: 51 ಉದ್ಯೋಗಿಗಳಿಗೆ ಲಕ್ಷುರಿ ಎಸ್‌ಯುವಿ ಕಾರ್ ಗಿಫ್ಟ್ !!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ