/newsfirstlive-kannada/media/media_files/2025/12/30/ramanagara-dowry-case-1-2025-12-30-15-25-44.jpg)
ಬೆಂಗಳೂರು ದಕ್ಷಿಣ: ವರದಕ್ಷಿಣೆ ಕಿರುಕುಳಕ್ಕೆ ಯುವ ದಂಪತಿ ಜೀವವನ್ನ ಕಳೆದುಕೊಂಡ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮಾಲೀಕನ ಕುಟುಂಬದ ವಿರುದ್ಧವೇ ಗಂಭೀರ ಆರೋಪ ಕೇಳಿಬಂದಿದೆ.
ಏನಿದು ಆರೋಪ?
ಮದುವೆಯಾದ ವರ್ಷಕ್ಕೇ ಯುವತಿ ಗಂಡನ ಮನೆಯಿಂದ ಬೀದಿಗೆ ಬಿದ್ದಿದ್ದಾಳೆ. ಪ್ರತಿಷ್ಠಿತ ಕುಟುಂಬ, ಅವರ ಮನೆಯಲ್ಲಿ ನಮ್ಮ ಮಗಳು ಸುಖವಾಗಿ ಸಂಸಾರ ನಡೆಸುತ್ತಾಳೆ ಎಂದು ಭಾವಿಸಿ ಮದುವೆ ಮಾಡಿ ಕೊಟ್ಟಿದ್ದ ಯುವತಿ ಪೋಷಕರು ಕಂಗಾಲಾಗಿದ್ದಾರೆ. ಮಾಗಡಿಯಲ್ಲಿರುವ ಪ್ರತಿಷ್ಠಿತ ಮಾರುತಿ ಶಿಕ್ಷಣ ಸಂಸ್ಥೆಯ ಮಾಲೀಕರಾದ ಗಂಗರಾಜು ಕುಟುಂಬದ ವಿರುದ್ಧ ಸಂತ್ರಸ್ಥೆ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನು ಓದಿ : ಮಗಳಿಗಾಗಿ ಕೆಂಪು ಚೆಟ್ನಿ ಮಾಡ್ಕೊಂಡು ಬಂದಿದ್ದೆ, ಮನೆ ಖರೀದಿಸಲು ಮುಂದಾಗಿದ್ದೆ -ನಂದಿನಿ ಅಮ್ಮನ ನೋವಿನ ಮಾತುಗಳು..
/filters:format(webp)/newsfirstlive-kannada/media/media_files/2025/12/30/ramanagara-dowry-case-2025-12-30-15-29-23.jpg)
ಮದುವೆಯಾದ ಒಂದು ತಿಂಗಳಿಗೇ ಗಂಡನ ಮನೆಯವರು ಕಿರುಕುಳ ನೀಡಲು ಆರಂಭಿಸಿದ್ದರಂತೆ. ವರದಕ್ಷಿಣೆ ನೀಡುವಂತೆ ಪ್ರತಿನಿತ್ಯ ಚಿತ್ರಹಿಂಸೆ ನೀಡುತ್ತಿದ್ದರಂತೆ. ಗಂಡನನ್ನ ಮುಟ್ಟಲೂ ಹಾಗು ಮಾತನಾಡಲೂ ಬಿಡುತ್ತಿರಲಿಲ್ಲವಂತೆ. ಪ್ರತಿಯೊಂದಕ್ಕೂ ಅತ್ತೆಯಿಂದ ಅನುಮತಿ ಪಡೆಯಬೇಕಿತ್ತಂತೆ. ಇಷ್ಟು ದಿನ ಚಿತ್ರಹಿಂಸೆ ಸಹಿಸಿಕೊಂಡು ಸಂಸಾರ ನಡೆಸುತ್ತಿದ್ದ ಯುವತಿ ಪ್ರೀಯಿಯನ್ನ ಗಂಡನ ಮನೆಯವರು ಹೊರಹಾಕಿದ್ದಾರೆ.
ನೀನು ಹಣ ತರದಿದ್ದರೆ ನನ್ನ ಮಗನಿಗೆ ಬೇರೊಂದು ಮದುವೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರಂತೆ. ಹೀಗಾಗಿ ನ್ಯಾಯಕ್ಕೆ ಆಗ್ರಹಿಸಿ ಯುವತಿ ಪ್ರೀತಿ ಮಾಗಡಿಯಲ್ಲಿರುವ ಮಾರುತಿ ಶಿಕ್ಷಣ ಸಂಸ್ಥೆ ಮುಂಭಾಗ ಕುಟುಂಬದೊಂದಿಗೆ ಪ್ರತಿಭಟನೆ ಮಾಡುತ್ತಿದ್ದಾರೆ. ಇಗಾಗಲೇ ಪತಿ ರೂಪೇಶ್, ಅತ್ತೆ ವರಲಕ್ಷ್ಮೀ, ಮಾವ ಗಂಗರಾಜು ವಿರುದ್ಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನನಗೆ ನ್ಯಾಯ ಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಇದನ್ನು ಓದಿ :ಮಗಳಿಗೆ ಮುಂಗೋಪ ಜಾಸ್ತಿ ಇತ್ತು -ನಟಿ ನಂದಿನಿ ಅಮ್ಮ ಕಣ್ಣೀರು..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us