/newsfirstlive-kannada/media/media_files/2025/11/13/ashwath-narayana-fried-venkatesh-2025-11-13-10-46-29.jpg)
ಬೆಂಗಳೂರು: ಬಿಜೆಪಿ ನಾಯಕ ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ್ ಅವರ ಆಪ್ತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೆಂಕಟೇಶ್ (45) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.
ಬೆಂಗಳೂರಿನ ವೈಯ್ಯಾಲಿಕಾವಲ್‌ನಲ್ಲಿರುವ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಶ್ವತ್ಥ್‌ನಾರಾಯಣ್ ಅವರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ವೆಂಕಟೇಶ್, ಸಾಯುವ ಮುನ್ನಾ ವಿಡಿಯೋ ಮಾಡಿದ್ದಾರೆ. ವಿಡಿಯೋದಲ್ಲಿ ಯಾರೂ ಚೀಟಿ ಏಜೆಂಟ್ ಆಗಬೇಡಿ ಎಂದಿದ್ದಾರೆ.
ಇದನ್ನೂ ಓದಿ: ಸ್ನೇಹದ ವಿಚಾರಕ್ಕೆ ಫಸ್ಟ್ ಟೈಮ್ ಎಮೋಷನಲ್ ಆದ ಗಿಲ್ಲಿ, ಕಾವ್ಯ..! VIDEO
ಕಳೆದ ಮೂರು ದಿನಗಳ ಹಿಂದೆ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಸೋಮವಾರ ಸಂಜೆಯೇ ಸಾವಿಗೆ ಶರಣಾಗಿದ್ದು, ಇಂದು ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.
ವಿಡಿಯೋದಲ್ಲಿ ಏನ್ ಹೇಳಿದ್ದಾರೆ..?
ಯಾರೂ ಕೂಡ ಚೀಟಿ ವ್ಯವಹಾರ ಮಾಡಬೇಡಿ. ಚೀಟಿಯಿಂದ ಆಗುವ ತೊಂದರೆಗಳು ಅಷ್ಟಿಷ್ಟಲ್ಲ. ನಾನು ಚೀಟಿ ಏಜೆಂಟ್ ಆಗಿದ್ದೇನೆ. ನಾನು ಕಷ್ಟಕ್ಕೆ ಸಿಲುಕಿದ್ದೇನೆ. ಚೀಟಿ ಹಣದಲ್ಲಿ ಯಾರೋ ಕೈ ಎತ್ತಿದ್ರೆ, ಏಜೆಂಟರನ್ನ ಹಿಡಿದುಕೊಳ್ಳುತ್ತಾರೆ. ನಾನೀಗ ಅಂತಹುದ್ದೇ ಪರಿಸ್ಥಿತಿಗೆ ಸಿಲುಕಿದ್ದೇನೆ ಎಂದು ವಿಡಿಯೋ ಮಾಡಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ದೆಹಲಿ ಕಾರು ಸ್ಫೋ* ಪ್ರಕರಣ.. ತುಮಕೂರಿನ ಓರ್ವ ವ್ಯಕ್ತಿಯ ವಿಚಾರಣೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us