Advertisment

ದೆಹಲಿ ಕಾರು ಸ್ಫೋ* ಪ್ರಕರಣ.. ತುಮಕೂರಿನ ಓರ್ವ ವ್ಯಕ್ತಿಯ ವಿಚಾರಣೆ..!

ನವೆಂಬರ್ 10 ರಂದು ದೆಹಲಿಯಲ್ಲಿ ನಡೆದ ಕಾರು ಸ್ಫೋ- ಪ್ರಕರಣದಲ್ಲಿ ತುಮಕೂರಿನ ಓರ್ವ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿದೆ. ತಿಲಕ್ ಪಾರ್ಕ್ ಠಾಣೆ ಪೊಲೀಸರು, ಪಿಹೆಚ್ ಕಾಲೋನಿಯ ನಿವಾಸಿಯೊಬ್ಬನ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

author-image
Ganesh Kerekuli
Tumakuru and delhi incident
Advertisment

ತುಮಕೂರು: ನವೆಂಬರ್ 10 ರಂದು ದೆಹಲಿಯಲ್ಲಿ ನಡೆದ ಕಾರು ಸ್ಫೋ- ಪ್ರಕರಣದಲ್ಲಿ ತುಮಕೂರಿನ ಓರ್ವ ವ್ಯಕ್ತಿಯನ್ನು ವಿಚಾರಣೆ ಮಾಡಲಾಗಿದೆ. ತಿಲಕ್ ಪಾರ್ಕ್ ಠಾಣೆ ಪೊಲೀಸರು, ಪಿಹೆಚ್ ಕಾಲೋನಿಯ ನಿವಾಸಿಯೊಬ್ಬನ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. 

Advertisment

ಖಿಲಾಫತ್ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಶಂಕೆ ಹಿನ್ನೆಲೆಯಲ್ಲಿ ದೆಹಲಿ ಪ್ರಕರಣದ ಮರು ದಿನವೇ, ಠಾಣೆಯಲ್ಲಿ ಬರೋಬ್ಬರಿ 2 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಎಎಸ್​​ಪಿ ಪುರುಷೋತ್ತಮ್​ ಅವರು ಶಂಕಿತನ ವಿಚಾರಣೆ ನಡೆಸಿದ್ದಾರೆ. ಖಿಲಾಫತ್ ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಶಂಕೆಯಡಿ ಪ್ರಶ್ನೆ ಮಾಡಲಾಗಿದೆ. 

ಇದನ್ನೂ ಓದಿ: ಡೆಲ್ಲಿ ಅಂಗಳಕ್ಕೆ ಪವರ್​ ಶೇರಿಂಗ್​​ ಆಟ.. ಮತ್ತೆ ಸಿಎಂ ದೆಹಲಿ ದಂಡಯಾತ್ರೆ

ಶಂಕಿತ ವ್ಯಕ್ತಿಯು ಸಂಘಟನೆಯ ಮುಖಂಡರಿಗೆ ತುಮಕೂರಿನಲ್ಲಿ ಸಭೆ ನಡೆಸಲು ಅವಕಾಶ ‌ಮಾಡಿದ್ದ. ಈ ಪ್ರಕರಣ ಸಂಬಂಧ ಎನ್​ಐಎ ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಿತ್ತು. 6 ವರ್ಷ ಶಿಕ್ಷೆ ಅನುಭವಿಸಿ ದೆಹಲಿಯ ತಿಹಾರ್ ಜೈಲಿನಿಂದ ಹೊರ ಬಂದಿದ್ದ. ಈ ಹಿನ್ನಲೆ ದೆಹಲಿ ಸ್ಫೋಟದ ಮರುದಿನ ಶಂಕಿತನಿಗೆ ವಿಚಾರಣೆ ನಡೆದಿದೆ. ಎರಡು ಗಂಟೆಗಳ ಕಾಲ‌ ವಿಚಾರಣೆ ನಡೆಸಿ ಪೊಲೀಸರು ನಂತರ ಬಿಟ್ಟು ಕಳುಹಿಸಿದ್ದಾರೆ. ಯಾವುದೇ ಕೈವಾಡ ಇಲ್ಲದ ಹಿನ್ನೆಲೆಯಲ್ಲಿ ಆತನನ್ನು ಬಿಟ್ಟು ಕಳುಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisment

ಇದನ್ನೂ ಓದಿ: ಕಾರು ಸ್ಫೋಟಕ್ಕೆ ಮೇಜರ್ ಟ್ವಿಸ್ಟ್ ಕೊಟ್ಟ DNA ವರದಿ.. ಕಾಶ್ಮೀರಿ ವೈದ್ಯ ಉಮರ್​​ ಮಾಸ್ಟರ್​ಮೈಂಡ್! 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೆಹಲಿ ಕೆಂಪುಕೋಟೆ Red Fort Delhi incident
Advertisment
Advertisment
Advertisment