/newsfirstlive-kannada/media/media_files/2025/11/01/cm_siddaramaiah-3-2025-11-01-11-03-39.jpg)
ಕಾಂಗ್ರೆಸ್​ನ ಕ್ರಾಂತಿ ಮಗ್ಗಲು ಬದಲಿಸಿದೆ.. ನವೆಂಬರ್​​ ಧಮಾಕಾ ಆಗಲಿದೆ ಎಂದು ನಂಬಿದ್ದ ರಾಜ್ಯ ರಾಜಕಾರಣ ಮೌನಕ್ಕೆ ಜಾರಿದೆ. ನವೆಂಬರ್​​ ಮಧ್ಯಂತರಕ್ಕೂ ಕಾಲಿಟ್ರೂ ಕ್ರಾಂತಿ ಗೀತೆಗಳು ಸ್ವರ ಕಳೆದು ಕೊಂಡಿದೆ. ನಾಯಕತ್ವ ಬದಲಾವಣೆಗೆ ದೆಹಲಿಯ ಅಂಗಳದಿಂದಲೇ ಉತ್ತರ ಸಿಗಬೇಕಿದೆ. ಈ ಕಾರಣಕ್ಕೆ ನವೆಂಬರ್​​​ 15 ಅಂದ್ರೆ ನಾಡಿದ್ದು ನವೆಂಬರ್ ಕ್ರಾಂತಿಯ ವಿದ್ಯಮಾನಕ್ಕೆ ಮುಹೂರ್ತ ನಿಗದಿಯಾಗಿದೆ. ಸಿದ್ದರಾಮಯ್ಯ-ಡಿಕೆಶಿ ನಡುವಿನ ಕುರ್ಚಿ ಕದನಕ್ಕೆ ಆವತ್ತು ಇತಿಶ್ರೀ ಬೀಳುವ ಸಾಧ್ಯತೆ ಇದೆ.
ಡೆಲ್ಲಿಗೆ ಅಂಗಳಕ್ಕೆ ಪವರ್​ ಶೇರಿಂಗ್​​ ಆಟ
ನವೆಂಬರ್ 15.. ಸಿಎಂ ಸಿದ್ದರಾಮಯ್ಯ ದೆಹಲಿ ದಂಡಯಾತ್ರೆಗೆ ಸಜ್ಜಾಗ್ತಿದ್ದಾರೆ. ನವೆಂಬರ್ ಕ್ರಾಂತಿ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಡೆಲ್ಲಿಗೆ ಅಂಗಳಕ್ಕೆ ಪವರ್​ ಶೇರಿಂಗ್​​ ಆಟ ಶಿಫ್ಟ್​ ಆಗ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ನವೆಂಬರ್​​ 15ಕ್ಕೆ ಡೆಲ್ಲಿಯಲ್ಲಿ ಇರಲಿದ್ದಾರೆ. ಕಪಿಲ್ ಸಿಬಲ್ ಪುಸ್ತಕ ಬಿಡುಗಡೆ ನೆಪದಲ್ಲಿ ಇಬ್ಬರೂ ಹೈಕಮಾಂಡ್​ ಭೇಟಿಗೆ ಸಿದ್ಧತೆ ನಡೆಸಿದ್ದಾರೆ.
ಇದನ್ನೂ ಓದಿ: ಮೇಘನಾ ಜಾಲಿ ಜಾಲಿ.. ಜೋಡಿ ಹಕ್ಕಿಗಳು ಹನಿಮೂನ್​​ಗೆ ಹೋಗಿದ್ದೆಲ್ಲಿಗೆ?
/filters:format(webp)/newsfirstlive-kannada/media/media_files/2025/11/13/kharge-zamir-2025-11-13-07-34-20.jpg)
ಡೆಲ್ಲಿ ಭೇಟಿ ವೇಳೆ ಸಿಎಂ ಸಿದ್ದರಾಮಯ್ಯ, ಸಂಪುಟ ಪುನಾರಚನೆ ದಾಳ ಹೂಡ್ತಿದ್ದಾರೆ.. ಬೆಳಗಾವಿ ಅಧಿವೇಶನಕ್ಕೂ ಮೊದಲು ಪುನಾರಚನೆ ಆಗಬೇಕು ಪಟ್ಟು ಹಿಡಿದಿದ್ದಾರೆ. ರೀಷಫಲ್​​​ಗೆ ಡಿಕೆಶಿ ವಿರೋಧಿಸ್ತಿದ್ದಾರೆ. ಪುನಾರಚನೆಗೆ ಒಪ್ಪಿದ್ರೆ ಪಟ್ಟ ಸಿಗಲ್ಲ ಅನ್ನೋದು ಡಿಕೆಶಿ ಲೆಕ್ಕ. 5 ತಿಂಗಳ ಹಿಂದೆ ಪುನಾರಚನೆಗೆ ಹೈಕಮಾಂಡ್​​ ಬಳಿ ಚರ್ಚಿಸಿದ್ದ ಸಿದ್ದು, ಈಗ ಅದೇ ಅಸ್ತ್ರ ಪ್ರಯೋಗಿಸ್ತಿದ್ದಾರೆ.
ಬಹಳ ಸಂತೋಷ, ತಪ್ಪೇನಿದೆ ಎಂದು ಡಿಕೆಶಿ ಸಾಫ್ಟ್​​​!
ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ ಅಂತ ಸಚಿವ ಜಮೀರ್ ಹೇಳಿದ್ದಾರೆ. ಎಐಸಿಸಿ ಅಧ್ಯಕ್ಷರಾದ ಖರ್ಗೆ ಮನೆ ಮುಂದೆ ನಿಂತು ಡಿಕೆಶಿಗೆ ಸಂದೇಶ ಕೊಟ್ಟಿದ್ದಾರೆ.. ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ಅವರು ಸಿಎಂ ಸ್ಥಾನದಲ್ಲಿ ಮುಂದುವರೆದ್ರೆ ತಪ್ಪೇನು ಅಂತ ಡಿಕೆಶಿ ಸಿಎಂ ಹುದ್ದೆ ಕನಸು ಕೈಬಿಟ್ಟಂತೆ ಮಾತಾಡಿದ್ದಾರೆ.
/filters:format(webp)/newsfirstlive-kannada/media/media_files/2025/11/13/satish-jarkiholi-2025-11-13-07-32-12.jpg)
ಇಬ್ಬರು ಡೆಲ್ಲಿಗೆ ತಲುಪುವ ಮುನ್ನವೇ ರಣರಂಗದಲ್ಲಿ ಮತ್ತೊಬ್ಬ ಆಟಗಾರನ ಪ್ರವೇಶ ಆಗಿದೆ. ಅದು ಬೆಳಗಾವಿ ಸಾಹುಕಾರ್​​​ ಸಚಿವ ಸತೀಶ್ ಜಾರಕಿಹೊಳಿ. ಎರಡು ದಿನಗಳ ಹಿಂದೆನೇ ಡೆಲ್ಲಿಯಲ್ಲಿ ಬೀಡು ಬಿಟ್ಟಿದ್ದಾರೆ.. ಮೊನ್ನೆ ರಾಜ್ಯ ಉಸ್ತುವಾರಿ ಸುರ್ಜೇವಾಲ ಭೇಟಿ ಮಾಡಿ ಕೆಪಿಸಿಸಿ ಪಟ್ಟ ಸೇರಿ ಕೆಲ ವಿಚಾರಗಳಲ್ಲಿ ಡಿಮ್ಯಾಂಡ್​​ ಇಟ್ಟಿದ್ದಾರೆ ಅನ್ನೋ ಮಾಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ, ನಾಳೆ ಪ್ರಕಟ ಆಗುವ ಬಿಹಾರ ಫಲಿತಾಂಶವು, ರಾಜ್ಯ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ.. ಬಿಹಾರ ಪಲ್ಲಟದ ಮೇಲೆ ರಾಜ್ಯದ ನಾಯಕತ್ವ ನಿಂತಿದೆ.
ಇದನ್ನೂ ಓದಿ:ನವೆಂಬರ್ ಕ್ರಾಂತಿಗೆ ಜಾರಕಿಹೊಳಿ ಟ್ವಿಸ್ಟ್.. ಸುರ್ಜೇವಾಲಾಗೆ ಸಾಹುಕಾರ್ ಖಡಕ್ ಪ್ರಶ್ನೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us