/newsfirstlive-kannada/media/media_files/2025/11/13/satish-jarkiholi-2025-11-13-07-32-12.jpg)
ರಾಜ್ಯ ಕಾಂಗ್ರೆಸ್​​​ನಲ್ಲಿ ನವೆಂಬರ್ ಕ್ರಾಂತಿ ಸಂಕ್ರಾಂತಿಗೆ ಪೋಸ್ಟ್​​ಪೋನ್ ಆಗುತ್ತೆ ಹೇಳಲಾಗುತ್ತಿರುವ ನಡುವೆ ಸಾಹುಕಾರ್ ಸತೀಶ್ ಜಾರಕಿಹೊಳಿ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ದಿಢೀರ್ ದಿಲ್ಲಿಗೆ ದಂಡಯಾತ್ರೆ ನಡೆಸಿ, ಉಸ್ತುವಾರಿ ರಣದೀಪ್ ಸುರ್ಜೇವಾಲಾ ಭೇಟಿಯಾಗಿರುವುದು ಬಿಸಿಬಿಸಿ ಚರ್ಚೆಗೆ ಕಾರಣ ಆಗಿದೆ.. ಈ ಭೇಟಿ ಭವಿಷ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಹತ್ವದ ಸುಳಿವು ನೀಡ್ತಾ ಎಂಬ ಅನುಮಾನಕ್ಕೂ ಕಾರಣ ಆಗಿದೆ..
ಸತೀಶ್ ಜಾರಕಿಹೊಳಿ.. ರಾಜ್ಯ ಕಾಂಗ್ರೆಸ್​​ನ ಕೂಲ್ ಆಟಗಾರ.. ಪಕ್ಷದ ಡಜನ್​ಗಟ್ಟಲೇ ಸಿಎಂ ಆಕಾಂಕ್ಷಿಗಳಲ್ಲಿ ಇವ್ರೂ ಒಬ್ರು.. ಕ್ಯಾಪ್ಟನ್ ಆಗುವ ಲಕ್ಷಣಗಳಿದ್ರೂ ಈ ಬಾರಿ ನನಗೆ ಸಿಎಂ ಪಟ್ಟ ಬೇಡ.. 2028ಕ್ಕೆ ದಾಳ ಉರುಳಿಸುವ ಮಾತ್ನಾಡಿದ್ದಾರೆ.. ಈ ಮಧ್ಯೆ ನವೆಂಬರ್ ಕ್ರಾಂತಿ, ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನಾರಚನೆ ಚರ್ಚೆ ನಡುವೆ ದಿಲ್ಲಿ ಅಂಗಳದಲ್ಲಿ ಹೊಸ ದಾಳ ಉರುಳಿಸಿರೋದು ಭಾರಿ ಸಂಚಲನ ಸೃಷ್ಟಿಸಿದೆ..
ಇದನ್ನೂ ಓದಿ: ಅತಿಯಾದ ಆತ್ಮವಿಶ್ವಾಸ ಬೇಡ; ಹಣದ ನಷ್ಟ ಸಾಧ್ಯತೆ; ಸ್ತ್ರೀಯರಿಗೆ ಶುಭಸುದ್ದಿ
ಸಾಹುಕಾರ್ ದಿಲ್ಲಿ ಪಾಲಿಟಿಕ್ಸ್!
ರಾಜ್ಯ ಕಾಂಗ್ರೆಸ್​​ನಲ್ಲಿ ರಾಜಕೀಯ ಸಂಚಲನ ಆಗಿದೆ.. ಬಿಹಾರ ಎಲೆಕ್ಷನ್ ಮುಗೀತಿದ್ದೇ ತಡ ಸಚಿವ ಸತೀಶ್​ ಜಾರಕಿಹೊಳಿ ದಿಲ್ಲಿ ಪ್ರವಾಸ ಕೈಗೊಂಡಿದ್ದು ಉಸ್ತುವಾರಿ ಸುರ್ಜೇವಾಲಾ ಭೇಟಿಯಾಗಿ ಸಸ್ಪೆನ್ಸ್ ಮೂಡಿಸಿದ್ದಾರೆ.. 2028ಕ್ಕೆ ಮುಖ್ಯಮಂತ್ರಿ ಸೀಟ್ ಮೇಲೆ ಕೂರೋಕೆ ಈಗಿನಿಂದಲೇ ತಯಾರಿ ನಡೆಸಿರುವ ಸತೀಶ್ ಜಾರಕಿಹೊಳಿ ನಡೆ ಕುತೂಹಲ ಮೂಡಿಸಿದೆ.. ಸಿದ್ದರಾಮಯ್ಯ ಉತ್ತರಾಧಿಕಾರಿಯಾಗಿ ತಮ್ಮನ್ನು ಆಯ್ಕೆ ಮಾಡಬೇಕು ಎಂಬ ಹಕ್ಕು ಪ್ರತಿಪಾದಿಸಿದ್ದಾರೆನ್ನಲಾಗಿದೆ. ಇದರ ಜೊತೆಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದು ಹೈಕಮಾಂಡ್ ಎದುರು ಒಂದಷ್ಟು ಬಲವಾದ ಮನವಿಗಳನ್ನು ಮಾಡಿದ್ದಾರೆ ಎನ್ನಲಾಗಿದೆ..
ಇದನ್ನೂ ಓದಿ: IPL ಹರಾಜಿನ ಕಣದಲ್ಲಿ ಬಿಗ್ ಸ್ಟಾರ್ಸ್..! ಯಾರಿಗೆ ಕೈಹಿಡಿಯಲಿದೆ ಅದೃಷ್ಟ..?
/filters:format(webp)/newsfirstlive-kannada/media/media_files/2025/11/13/kharge-zamir-2025-11-13-07-34-20.jpg)
ಸುರ್ಜೇವಾಲಾಗೆ ಸಾಹುಕಾರ್ ಪ್ರಶ್ನೆ!
- ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಯಾವಾಗ?
- ಲೋಕಸಭಾ ಎಲೆಕ್ಷನ್ ಬಳಿಕ ಬದಲಾವಣೆ ಎಂದಿದ್ದೀರಿ
- ಬಿಹಾರ ಎಲೆಕ್ಷನ್ ಕೂಡ ಮುಗಿದಿದೆ.. ಇತ್ತ ಗಮನ ಹರಿಸಿ
- ಯಾರನ್ನಾದ್ರೂ ಮಾಡಿ.. ಆದ್ರೆ ಬೇಗ ಅಧ್ಯಕ್ಷರನ್ನು ನೇಮಿಸಿ
- ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆಗೆ ಬ್ರೇಕ್ ಹಾಕಬೇಕು
- ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಾವು ಸಜ್ಜಾಗಬೇಕಿದೆ
- ಪಕ್ಷ ಸಂಘಟನೆಗೆ ವೇಗ ನೀಡಲು ಬೇಗ ನೇಮಕ ಮಾಡಿ
ಮಧ್ಯೆ ಬೆಂಗಳೂರಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಮಾತನಾಡಿರೋ ಸಚಿವ ಜಮೀರ್ ಅಹ್ಮದ್ ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದಿದ್ದಾರೆ.. ಹಾಗೆಯೇ ಅಧ್ಯಕ್ಷರ ಹುದ್ದೆಯೂ ಖಾಲಿ ಇಲ್ಲ ಅಂತ ಡಿಸಿಎಂ ಡಿಕೆಶಿಗೆ ಸಂದೇಶ ತಲುಪಿಸಿದ್ದಾರೆ.
ಒಟ್ಟಾರೆ, ಯಾವ ಕ್ರಾಂತಿನೂ ಆಗಲ್ಲ ಅನ್ನೋದು ಕಾಂಗ್ರೆಸ್​​ನ ಹಲವು ನಾಯಕರ ವಾದ ಆಗಿದೆ.. ಆದ್ರೆ, ಪಕ್ಷದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ಕ್ರಾಂತಿ ಆಗುವ ಮುನ್ಸೂಚನೆ ನೀಡ್ತಿವೆ.. ಯಾವ ತಿಂಗಳಲ್ಲಿ ಕ್ರಾಂತಿ ಆಗುತ್ತೆ ಅನ್ನೋದು ಮಾತ್ರ ಇನ್ನೂ ನಿಗೂಢ..
ಇದನ್ನೂ ಓದಿ:ಬಾಬರಿ ಮಸೀದಿ ಧ್ವಂಸದ ವಾರ್ಷಿಕೋತ್ಸವದಂದು ಸ್ಫೋಟಿಸಲು ಸಂಚು ಹಾಕಿದ್ದ ಶಂಕಿತ ಉಮರ್​..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us